ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ
ಕಾರಣವೆ ಇಲ್ಲವು ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆ ಆಡಲು
ಸಾವಿರ ಸಾವಿರ ಕಥೆಗಳ ಸಾಗರ
ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ
ಪ್ರಥಮ ಪ್ರಥಮ ಸ್ಪರ್ಶದಿ ಮಾತು ಹಾಗೆ ನಿಂತಿತು
ಕುದುರೆಯ ಹಾಗೆ ನಾಡಿಯು ವೇಗದಿಂದ ಓಡಿತು
ಪ್ರೇಮಬಂದ ಆ ಕ್ಷಣ ಹರುಷ ನೂರು ಚಿಮ್ಮಿತು
ಹೆಜ್ಜೆ ಭೂಮಿ ಸೋಕದೆ ಗಾಳಿಯಲ್ಲೆ ತೇಲಿತು
ಅನುಭವ ಹೊಸತು ಅಲೆಅಲೆಯಾಗಿ ಮನವ ತುಂಬಿತು
ಪ್ರಕೃತಿಯೆ ಆಗ ಕಣ್ಣಲ್ಲಿ ಹೊಸದು ರೂಪ ತಾಳಿತು
ಯಾವ ಕವಿ ಕಾಣದಂತ ಯಾರು ಮುಂಚೆ ಹಾಡದಂತ
ಹೊಸ ಹೊಸ ಕವಿತೆಯ ಜೀವ ಆಗ ಹಾಡಿತು
||ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ||
ಸಿಹಿಯ ಕೊಟ್ಟ ಪ್ರೇಮವು ಕಹಿಯ ಕೂಡ ತಂದಿತು
ಹೂವ ಜೊತೆ ಮುಳ್ಳಿದೆ ಎಂಬ ಸತ್ಯ ಸಾರಿತು
ನಗೆಯ ಚೆಲ್ಲಿದ ಮುಖ ಕಣ್ಣ ನೀರ ತಂದಿತು
ಬೆನ್ನ ಹಿಂದೆ ಮೋಸದ ಚೂರಿಯನ್ನು ಹಾಕಿತು
ಜೀವನವೆಂಬ ಹೂಬನ ಮರಳು ಗಾಡಾಯಿತು
ಆಸೆಗಳೆಂಬ ಹೂಗಳು ಬಾಡಿ ಉದುರಿ ಹೋಯಿತು
ಪ್ರೇಮ ಒಂದು ಶಾಪವೊ ಮನಸ್ಸುಗೈದ ಪಾಪವೊ
ದೇವ ನಿನ್ನ ಆಟಕ್ಕೆಲ್ಲ ಲೆಕ್ಕ ನಾನು ಮಾಡೆನು
||ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ
ಕಾರಣವೆ ಇಲ್ಲವು ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆ ಆಡಲು
ಸಾವಿರ ಸಾವಿರ ಕಥೆಗಳ ಸಾಗರ||