ಆಆ.. ಆಆ.. ಆಆಆ.... ಆಆಆಅ ....
ಅಅ... ಅಅ... ಅಅ... ಅಅ...
ಅಅ... ಅಅ... ಅಅ... ಅಅ... ಆಆಹ್
ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನಿ ಪುಣ್ಯನದಿ
ಬಳಕುತ ಕಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯನದಿ
ತಾ ಹೆಜ್ಜೆಯ ಇಟ್ಟಡೆ ಅಮೃತ ಹರಿಸಿ
ಕಾಯುವ ಭಾಗ್ಯನದಿ ...
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ ..
ಓಓಓ.. ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ... ಸಂತೋಷದ ಸಕ್ಕರೆ..
ಮಮತೆಯ ಮಾತೆಗೆ.. ಭಾಗ್ಯದ ಧಾತೆಗೆ...
ಮಾಡುವೇ... ಭಕ್ತಿಯ ವಂದನೆ....ಓ. . . .
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ ||
ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ
ತರುತಲಿ ಎಲ್ಲೆಲ್ಲೂ ಆನಂದ...
ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು
ಚೆಲ್ಲುವೆ ನಗೆ ಎಂಬ ಶ್ರೀಗಂಧ
ಧುಮುಕುತ ವೇಗದ ಜಲಪಾತದಲಿ...
ವಿದ್ಯುತ್ ನೀಡುವೇ
ಬಯಲಲಿ ಕಾಡಲಿ ಕಲ ಕಲಹರಿಯುತ...
ನಾಟ್ಯವ ಮಾಡುವೇ
ಮಂದಗಾಮಿನಿ.. ಶಾಂತಿವಾಹಿನಿ ..
ಚಿರನೂತನ ಚೇತನ ಧಾತೆಯು
ನೀನೆ ದಕ್ಷಿಣ ಮಂದಾಕಿನಿ
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ.. ಜೀವನದಿ ಈ ಕಾವೇರಿ ||
ಹುಟ್ಟುವ ಕಡೆಯೊಂದು..
ಫಲ ಕೊಡೊ ಕಡೆಯೊಂದು
ಸಾಗರದಲ್ಲಿ ನದಿಗೆಂದು ಸಂಗಮವೂ...
ತೌರಿನ ಮನೆಯೊಂದು
ಗಂಡನ ಮನೆಯೊಂದು
ಹೆಣ್ಣಿಗೆ ಇದೆ ಎಂದು ಜೀವನವೂ
ತಂದೆಯು ತಾಯಿಯು ಅಣ್ಣನು
ತಂಗಿಯು ಎಲ್ಲ ದೂರವು...
ಹೊಸ ಮನೆ ಹೊಸ ಜನ
ಹೊಸ ಹೊಸ ಬಂಧವು ಅಲ್ಲೇ ಸಂತೋಷವೂ
ಮನೆಯ ದೀಪವು.. ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು ಸಿಕ್ಕಿದ ವೇಳೆ ಸ್ವರ್ಗ ಸಂಸಾರವು
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಆಆಆ.. ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ ..
ಓಓಓ.. ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ... ಸಂತೋಷದ ಸಕ್ಕರೆ..
ಮಮತೆಯ ಮಾತೆಗೆ.. ಭಾಗ್ಯದ ಧಾತೆಗೆ...
ಮಾಡುವೇ... ಭಕ್ತಿಯ ವಂದನೆ.... ಓ….. ||