Ninna Aasegale Nanna Lyrics

in Idu Entha Premavayya

Video:

LYRIC

ನಿನ್ನ ಆಸೆಗಳೆ .. ..
ನನ್ನ ಕುಸುಮಗಳೇನು 
ಪ್ರೇಮದ ತೋಟದಲಿ.. 
ನಿನ್ನ ಕನಸುಗಳೆ ..
ನನ್ನ ಸೊಗಸುಗಳೇನೊ  
ಭಾವದ ಲೋಕದಲಿ

ನಿನ್ನ ಕಣ್ಣಿನ ಕಾಂತಿಯ
ತಾರೆಯ ಮೀರಿ
ಮಿಂಚಿದೆ ಚೆಲುವಲಿ!

|| .. ನಿನ್ನ ಆಸೆಗಳೆ
ನನ್ನ ಕುಸುಮಗಳೇನೊ
ಪ್ರೇಮದ ತೋಟದಲಿ
ನಿನ್ನ ಕನಸುಗಳೆ ..
ನನ್ನ ಸೊಗಸುಗಳೇನು
ಭಾವದ ಲೋಕದಲಿ! ||

ಸಾವಿರ ಜನರು ಸಾವಿರ ಹೇಳಲಿ ..
ಪ್ರೀತಿಯ ರಾಜನು ನೀನೇನೆ
ಯಾವುದೆ ನೋವು ಮನಸನು ಕಾಡಲಿ ..
ಮಾನಸ ರಾಣಿಯು ನೀನೇನೆ
ಸೆರೆ ಸುಖವು ತೋರದು ಎಲ್ಲು
ಬಾಳಿನ ಪಯಣದಿ!
 
|| .. ನಿನ್ನ ಆಸೆಗಳೆ
ನನ್ನ ಕುಸುಮಗಳೇನು
ಪ್ರೇಮದ ತೋಟದಲಿ! ||

ಜೀವಕೆ ಜೀವ ಮೀಸಲು ಮಾಡುವೆ..
ನಲ್ಮೆಯ ಬದುಕಲಿ ಒಂದಾಗಿ
ತೋಳಿನ ಹಾರ ಕೊರಳಿಗೆ ಹಾಕುವೆ ..
ನಿನ್ನಯ ಪ್ರೀತಿಯ ಹೂವಾಗಿ
ಪ್ರಾಯದ ಸವಿಗೆ ಚುಂಬನ ಚಂದ
ಹೃದಯದಿ ಬೆಸೆದಿರೆ!

|| .. ನಿನ್ನ ಆಸೆಗಳೆ
ನನ್ನ ಕುಸುಮಗಳೇನೊ
ಪ್ರೇಮದ ತೋಟದಲಿ
ನಿನ್ನ ಕನಸುಗಳೆ ..
ನನ್ನ ಸೊಗಸುಗಳೇನು
ಭಾವದ ಲೋಕದಲಿ!
ನಿನ್ನ ಕಣ್ಣಿನ ಕಾಂತಿಯ
ತಾರೆಯ ಮೀರಿ
ಮಿಂಚಿದೆ ಚೆಲುವಲಿ!

.. ನಿನ್ನ ಆಸೆಗಳೆ
ನನ್ನ ಕುಸುಮಗಳೇನು
ಪ್ರೇಮದ ತೋಟದಲಿ
ನಿನ್ನ ಕನಸುಗಳೆ ..
ನನ್ನ ಸೊಗಸುಗಳೇನೊ
ಭಾವದ ಲೋಕದಲಿ! ||

Ninna Aasegale Nanna song lyrics from Kannada Movie Idu Entha Premavayya starring Ramesh Aravind, Shilpa, Charulatha, Lyrics penned by D Bharath Sung by Chithra, Unni Krishnan, Music Composed by Gurukiran, film is Directed by Kodlu Ramakrishna and film is released on 1999