ತಾಯೀನೇ ಇಲ್ಲದಂಥ ತವರ್ಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ
ಹಂಗಿನ ತುತ್ತಾನು ನುಂಗಬ್ಯಾಡ
ಓ ಮನೆ ಮಗಳೇ ಇದು ಬಾಳ ಕಟ್ಟಳೆ..
ಓ.. ಕುಲಮಗಳೇ... ಇದು ಬಾಳ ಕಟ್ಟಳೆ
|| ತಾಯೀನೇ ಇಲ್ಲದಂಥ ತವರ್ಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ
ಹಂಗಿನ ತುತ್ತಾನು ನುಂಗಬ್ಯಾಡ ||
ಆ ಆ ಆ ಆ ಆ . . . ಆ ಆ ಆ . . ಆ ಆ . .
ಎಲೆ ಮೇಲೆ ಮುತ್ತಿನಂಗೆ
ಅಂಟಿಯು ಅಂಟದಂತೆ ಇರಬೇಕು
ಊಟದಾಗೆ ಕರಿಬೇವ
ಮಾಡಿ ಎಸೆದರು ನಗಬೇಕು
ಮನೆಮಗಳು ಬಾಗಿಲಲ್ಲಿ ಬಂದರೆ
ಎದೆ ಬಾಗ್ಲು ಮುಚ್ಚುತ್ತಾರೆ
ಬೀದಿ ಬಸವ ಬಂದು ನಿಂತ್ರೆ
ಕಾಸು ಹಾಲು ಬಟ್ಟೇನಾರ ಹಾಕುತ್ತಾರೆ..
ಬಂಧುಗಳ ಬಂಧುರ...
ಬಂಧುಗಳ ಬಂಧುರ ಬಂಧಗಳ ಬಂಧುರ
ನಂಬಬೇಡ ಎಚ್ಚರ ತುಂಬಾ ಎಚ್ಚರ
ಅಮ್ಮಾನೇ ಇಲ್ಲದಿರೋ ಅರಮನೆ ಯಾಕೇ...
ಆಳಾಗಿ ಬಾಳಬ್ಯಾಡಾ
ಬಾಗಿಲ ಧೂಳಾಗಿ ಕೂರಬ್ಯಾಡ
ಓ ಮನೆ ಮಗಳೇ ಇದು ಬಾಳ ಕಟ್ಟಳೆ..
ಓ..ಕುಲಮಗಳೇ... ಇದು ಬಾಳ ಕಟ್ಟಳೆ
|| ತಾಯೀನೇ ಇಲ್ಲದಂಥ ತವರ್ಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ
ಹಂಗಿನ ತುತ್ತಾನು ನುಂಗಬ್ಯಾಡ ||
ಬೆಲ್ಲವಿದ್ರೆ ಬರುತಾರೆ
ಕಾಲನು ಕೈಯನ್ನು ನೆಕ್ಕುತಾರೇ
ನಮ್ಮ ಕೈಯ ಚಾಚಿದಾಗ
ಕಾಲಿಗೇ ಬುದ್ದಿಯ ಹೇಳುತ್ತಾರೇ
ಅಮ್ಮನಿತ್ತ ಬಾಯಿ ತುತ್ತ
ರುಚಿಯ ಸುಚಿಯಾ ನೆನಿಬೇಕು
ಲೋಕವಿತ್ತ ವಿಷಮುತ್ತ
ಮಗಳೇ ಮರಿಯದೇ ಮರಿಬೇಕು
ಬಂಧುಗಳ ಬಂಧುರ...
ಬಂಧುಗಳ ಬಂಧುರ ಬಂಧಗಳು ಬಂಧುರ
ನಂಬಬೇಡ ಎಚ್ಚರ ತುಂಬಾ ಎಚ್ಚರ
ಬಂಧುನೇ ಇಲ್ಲದಂಥ ಬೀಡ್ಯಾಕೆ ತಂಗೀ....
ಬೇಡಾಡಿ ಬಾಳಬೇಡ
ಚಿಂತೆಗೆ ಈಡಾಗಿ ಅಳಬೇಡ
ಓ ಮನೆ ಮಗಳೇ ಇದು ಬಾಳ ಕಟ್ಟಳೆ..
ಓ.. ಕುಲಮಗಳೇ... ಇದು ಬಾಳ ಕಟ್ಟಳೆ
|| ತಾಯೀನೇ ಇಲ್ಲದಂಥ ತವರಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ
ಹಂಗಿನ ತುತ್ತಾನು ನುಂಗಬ್ಯಾಡ..
ತಪ್ಪಿಯೂ ತಂಗಬ್ಯಾಡ
ಹಂಗಿನ ತುತ್ತಾನು ನುಂಗಬ್ಯಾಡ.. ||