-
ಆಸೆಗೆ ಮಿತಿಯಿಲ್ಲ ಅಕ್ಕರೆ ಅರಿವಿಲ್ಲ ಗಂಧಕ್ಕೆ ಮರವೆ ಸ್ಥಿರವಿಲ್ಲ
ಹೆಣ್ಣಿಗೆ ಅಮ್ಮನ ಮಡಿಲೆ ಕೊನೆಯಲ್ಲ
ತೆಂಗು ತನಗಲ್ಲ ಬಾಳೆಯು ಬನಕ್ಕಲ್ಲ ಹುಟ್ಟಿದ ಊರಲಿ ನದಿಯಿಲ್ಲ
ಮಗಳೆ ಮಗಳು ಎಂದಿಗು ಮನೆಗಲ್ಲ
ತಾಳಿ ಕಂಡ ನಾರಿನು ತವರುಮನೆಗು ಹಾಕು ಬೆನ್ನು
ತಾವರೆ ಹೂವು ಶಿವನಿಗೆ
ಅಕ್ಕಯೇನು ತಂಗಿಯೇನು ಮುದ್ದಿನ ಮಗಳಾದರೇನು
ಹೆಣ್ಣು ಪರರ ಹೊಸಿಲಿಗೆ
ಓ ಗಂಗೆ ಬರುವೆನು ಓ ತುಂಗೆ ಬರುವೆನು
ಓ ಗಂಗೆ ಬರುವೆನು ಓ ತುಂಗೆ ಬರುವೆನು
ಮರಿಬ್ಯಾಡಿರಿ ಮಗುವನು
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ
ಹೆಣ್ಣಿಗೆ ತಾಯಿಯ ಮನೆಯು ಸ್ಥಿರವಲ್ಲ
ನಂಟಿನ ಗಂಟಲಿ ಬಾಲ್ಯವ ಕಟ್ಟಿಕೊ
ನಿನಗಿರೊ ಅಣ್ಣನೊ ಘನಶ್ಯಾಮ
ಕಣ್ಣಿಗೆ ಕತ್ತಲು ಕವಿದರೆ ಬಂದಾನೊ
ತವರಿನ ದಿಬ್ಬದ ಪ್ರತಿಸೂರ್ಯ
ನಮ್ಮ ಊರ ಕೋಗಿಲೆ ಎಲ್ಲ ಕಾಲ ಹಾಡಲಿ
ತವರಿಗದುವೆ ಕುಶಲದ ಓಲೆಯಾಗಿ ಕೇಳಲಿ
ಓ ಅಣ್ಣ ಬರುವೆನು ಓ ತಂದೆ ಬರುವೆನು
ಓ ಅಣ್ಣ ಬರುವೆನು ಓ ತಂದೆ ಬರುವೆನು
ಮರಿಬ್ಯಾಡಿರಿ ಮಗುವನು
ಅಕ್ಕರೆಯ ಹಾದಿಗಿನ್ನು ಅಣ್ಣ ಕೊಟ್ಟ ಬುತ್ತಿ ತಿನ್ನು
ಬೆಲ್ಲವು ಬಸವಣ್ಣಗೆ
ಅಣ್ಣಯೇನು ತಮ್ಮನೇನು ಸಾಕ್ಷಾತ್ ಶಿವನಾದರೇನು
ನಾರಿ ಸತಿ ಪದವಿಗೆ
ಬಿದುರಿಗೆ ರೆಂಬಿಲ್ಲ ಕುದುರೆಗೆ ಕೊಂಬಿಲ್ಲ
ಸಾಕಿದ ಮನಕೆ ಸೊಕ್ಕಿಲ್ಲ
ಹೆಣ್ಣಿಗೆ ಅಣ್ಣನಿಗಿಂತ ಬಲವಿಲ್ಲ
ನೋಡಿ ಹೆಜ್ಜೆ ಇಡು ಕೇಳಿ ಮಾತು ಕೊಡು
ಸತ್ಯದ ನೆರಳಲಿ ನಡಿ ನೀನು
ಅಳು ನೀ ಅಡುವುಗಚ್ಚಿ ನಗು ನೀ ಅಳುವ ಮುಚ್ಚಿ
ಗರತಿ ಗೌಡತಿ ಆಗು ನೀನು
ಈಗ ಸೇರೊ ಹೊಸಮನೆ ಶಿವಾಲಯ ನಾಳೆಗೆ
ನೀನು ಕಾಣೊ ಹೊಸಮುಖ ಬೇರು ತಾನೆ ಬಾಳಿಗೆ
ನಾನಿಲ್ಲಿ ಬಾಳುವೆ ಇರೊ ಅಲ್ಲೆ ಅರಳುವೆ
ನಾನಿಲ್ಲಿ ಬಾಳುವೆ ಇರೊ ಅಲ್ಲೆ ಅರಳುವೆ
ತರುವೆ ನನ್ನ ಮಗುವನು
ತವರುಮನೆ ಬಿಟ್ಟು ಹೊಸತವರುಮನೆ ಕಟ್ಟು
ಇನ್ನು ಲಿಂಗದ ಹೂ ಗೌರಿಗೆ
ಅತ್ತರೇನು ನಕ್ಕರೇನು ಹೆತ್ತವರೆ ಆದರೇನು
ಹೆಣ್ಣುತನ ತೊಟ್ಟಿಲಿಗೆ
ನಾಲಿಗೆ ಎಲುಬಿಲ್ಲ ಬಾಯಿಗೆ ಬೀಗವಿಲ್ಲ
ಗಂಡನ ಮನೆಗು ಮಿಗಿಲಿಲ್ಲ ಹೆಣ್ಣಿಗೆ
ತವರಿನ ಮೋಹ ಹಿರಿದಲ್ಲ
-
ಆಸೆಗೆ ಮಿತಿಯಿಲ್ಲ ಅಕ್ಕರೆ ಅರಿವಿಲ್ಲ ಗಂಧಕ್ಕೆ ಮರವೆ ಸ್ಥಿರವಿಲ್ಲ
ಹೆಣ್ಣಿಗೆ ಅಮ್ಮನ ಮಡಿಲೆ ಕೊನೆಯಲ್ಲ
ತೆಂಗು ತನಗಲ್ಲ ಬಾಳೆಯು ಬನಕ್ಕಲ್ಲ ಹುಟ್ಟಿದ ಊರಲಿ ನದಿಯಿಲ್ಲ
ಮಗಳೆ ಮಗಳು ಎಂದಿಗು ಮನೆಗಲ್ಲ
ತಾಳಿ ಕಂಡ ನಾರಿನು ತವರುಮನೆಗು ಹಾಕು ಬೆನ್ನು
ತಾವರೆ ಹೂವು ಶಿವನಿಗೆ
ಅಕ್ಕಯೇನು ತಂಗಿಯೇನು ಮುದ್ದಿನ ಮಗಳಾದರೇನು
ಹೆಣ್ಣು ಪರರ ಹೊಸಿಲಿಗೆ
ಓ ಗಂಗೆ ಬರುವೆನು ಓ ತುಂಗೆ ಬರುವೆನು
ಓ ಗಂಗೆ ಬರುವೆನು ಓ ತುಂಗೆ ಬರುವೆನು
ಮರಿಬ್ಯಾಡಿರಿ ಮಗುವನು
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ
ಹೆಣ್ಣಿಗೆ ತಾಯಿಯ ಮನೆಯು ಸ್ಥಿರವಲ್ಲ
ನಂಟಿನ ಗಂಟಲಿ ಬಾಲ್ಯವ ಕಟ್ಟಿಕೊ
ನಿನಗಿರೊ ಅಣ್ಣನೊ ಘನಶ್ಯಾಮ
ಕಣ್ಣಿಗೆ ಕತ್ತಲು ಕವಿದರೆ ಬಂದಾನೊ
ತವರಿನ ದಿಬ್ಬದ ಪ್ರತಿಸೂರ್ಯ
ನಮ್ಮ ಊರ ಕೋಗಿಲೆ ಎಲ್ಲ ಕಾಲ ಹಾಡಲಿ
ತವರಿಗದುವೆ ಕುಶಲದ ಓಲೆಯಾಗಿ ಕೇಳಲಿ
ಓ ಅಣ್ಣ ಬರುವೆನು ಓ ತಂದೆ ಬರುವೆನು
ಓ ಅಣ್ಣ ಬರುವೆನು ಓ ತಂದೆ ಬರುವೆನು
ಮರಿಬ್ಯಾಡಿರಿ ಮಗುವನು
ಅಕ್ಕರೆಯ ಹಾದಿಗಿನ್ನು ಅಣ್ಣ ಕೊಟ್ಟ ಬುತ್ತಿ ತಿನ್ನು
ಬೆಲ್ಲವು ಬಸವಣ್ಣಗೆ
ಅಣ್ಣಯೇನು ತಮ್ಮನೇನು ಸಾಕ್ಷಾತ್ ಶಿವನಾದರೇನು
ನಾರಿ ಸತಿ ಪದವಿಗೆ
ಬಿದುರಿಗೆ ರೆಂಬಿಲ್ಲ ಕುದುರೆಗೆ ಕೊಂಬಿಲ್ಲ
ಸಾಕಿದ ಮನಕೆ ಸೊಕ್ಕಿಲ್ಲ
ಹೆಣ್ಣಿಗೆ ಅಣ್ಣನಿಗಿಂತ ಬಲವಿಲ್ಲ
ನೋಡಿ ಹೆಜ್ಜೆ ಇಡು ಕೇಳಿ ಮಾತು ಕೊಡು
ಸತ್ಯದ ನೆರಳಲಿ ನಡಿ ನೀನು
ಅಳು ನೀ ಅಡುವುಗಚ್ಚಿ ನಗು ನೀ ಅಳುವ ಮುಚ್ಚಿ
ಗರತಿ ಗೌಡತಿ ಆಗು ನೀನು
ಈಗ ಸೇರೊ ಹೊಸಮನೆ ಶಿವಾಲಯ ನಾಳೆಗೆ
ನೀನು ಕಾಣೊ ಹೊಸಮುಖ ಬೇರು ತಾನೆ ಬಾಳಿಗೆ
ನಾನಿಲ್ಲಿ ಬಾಳುವೆ ಇರೊ ಅಲ್ಲೆ ಅರಳುವೆ
ನಾನಿಲ್ಲಿ ಬಾಳುವೆ ಇರೊ ಅಲ್ಲೆ ಅರಳುವೆ
ತರುವೆ ನನ್ನ ಮಗುವನು
ತವರುಮನೆ ಬಿಟ್ಟು ಹೊಸತವರುಮನೆ ಕಟ್ಟು
ಇನ್ನು ಲಿಂಗದ ಹೂ ಗೌರಿಗೆ
ಅತ್ತರೇನು ನಕ್ಕರೇನು ಹೆತ್ತವರೆ ಆದರೇನು
ಹೆಣ್ಣುತನ ತೊಟ್ಟಿಲಿಗೆ
ನಾಲಿಗೆ ಎಲುಬಿಲ್ಲ ಬಾಯಿಗೆ ಬೀಗವಿಲ್ಲ
ಗಂಡನ ಮನೆಗು ಮಿಗಿಲಿಲ್ಲ ಹೆಣ್ಣಿಗೆ
ತವರಿನ ಮೋಹ ಹಿರಿದಲ್ಲ
Thaali Kanda Naari song lyrics from Kannada Movie Gowdru starring Ambarish, Devaraj, Shruthi, Lyrics penned by Hamsalekha Sung by Fayaz, Chetan Sosca, M Sheela, Latha Hamsalekha, Music Composed by Hamsalekha, film is Directed by S Mahendar and film is released on 2004