Kelade Nimageega Lyrics

ಕೇಳದೆ ನಿಮಗೀಗ Lyrics

in Geetha

in ಗೀತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಾಲಲಲಾ ಲಾಲಾಲಲಲಾ
ಲಾಲಾಲಲಲಾ ಲಾಲಾಲಲಲಾ
ಹೇ.. ಲಲಲಲಲಾ
 
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೆ ಒಂದು ಹೆಣ್ಣಿನ...
ಓ..... ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
 
ಸಂಪಿಗೆ ಒಂದೂರು.. ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ..ಆ ಊರ ಚೆಲುವ
ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
 
||ಕೇಳದೆ ನಿಮಗೀಗ ದೂರದಲ್ಲಿ ಯಾರೋ ....||
 
ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ
ನೂರಾಸೆ ಬಂದಾಗ…
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ
ಶಿಲೆಯಂತೆ ನಿಂತಾಗ….
ಹೂವಾಗಿ ಮನಸು.. ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ........
 
||ಕೇಳದೆ ನಿಮಗೀಗ ದೂರದಲ್ಲಿ ಯಾರೋ ....||
(ಈ ಊರಿನ ಜನಕ್ಕೂ
ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ
ಒಬ್ಬರನೊಬ್ಬರನ್ನೂ ಕೊಲ್ಲುವಷ್ಟು ಆಕ್ರೋಶ
ಹೀಗಿದ್ರು ಆ ಪ್ರೇಮಿಗಳು ಹೆದರಲಿಲ್ಲ
ದಿನಾ ರಾತ್ರಿ ಊರೆಲ್ಲ ಮಲಗಿದ ಮೇಲೆ
ಹಗ್ಗದ ಸೇತುವೆಯ ಮೇಲೆ ಇಬ್ಬರೂ ಸೇರುತ್ತಿದ್ರು)
 
ಚೆಲುವಿಯ ಮಾವಯ್ಯ ಒಲವಿನ ಕಥೆ ಕೇಳಿ
ಹುಲಿಯಂತೇ ಎಗರಾಡಿ
ಸೇತುವೆ ಬಳಿ ಬಂದಾಗ
ಪ್ರೇಮಿಗಳ ಕಂಡಾಗ ರೋಷದಲೀ...ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕಥೆ ಅಂದಿಗೆ ಕೊನೆಯಾಯಿತು ಹೀಗೆ........
 
|| ಕೇಳದೆ ನಿಮಗೀಗ ದೂರದಲ್ಲಿ ಯಾರೋ
(ಲಾಲಾಲಾ ಓ..ಲಾಲಾಲಾ )…||

ಲಾಲಾಲಲಲಾ ಲಾಲಾಲಲಲಾ
ಲಾಲಾಲಲಲಾ ಲಾಲಾಲಲಲಾ
ಹೇ.. ಲಲಲಲಲಾ
 
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೆ ಒಂದು ಹೆಣ್ಣಿನ...
ಓ..... ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
 
ಸಂಪಿಗೆ ಒಂದೂರು.. ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ..ಆ ಊರ ಚೆಲುವ
ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
 
||ಕೇಳದೆ ನಿಮಗೀಗ ದೂರದಲ್ಲಿ ಯಾರೋ ....||
 
ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ
ನೂರಾಸೆ ಬಂದಾಗ…
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ
ಶಿಲೆಯಂತೆ ನಿಂತಾಗ….
ಹೂವಾಗಿ ಮನಸು.. ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ........
 
||ಕೇಳದೆ ನಿಮಗೀಗ ದೂರದಲ್ಲಿ ಯಾರೋ ....||
(ಈ ಊರಿನ ಜನಕ್ಕೂ
ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ
ಒಬ್ಬರನೊಬ್ಬರನ್ನೂ ಕೊಲ್ಲುವಷ್ಟು ಆಕ್ರೋಶ
ಹೀಗಿದ್ರು ಆ ಪ್ರೇಮಿಗಳು ಹೆದರಲಿಲ್ಲ
ದಿನಾ ರಾತ್ರಿ ಊರೆಲ್ಲ ಮಲಗಿದ ಮೇಲೆ
ಹಗ್ಗದ ಸೇತುವೆಯ ಮೇಲೆ ಇಬ್ಬರೂ ಸೇರುತ್ತಿದ್ರು)
 
ಚೆಲುವಿಯ ಮಾವಯ್ಯ ಒಲವಿನ ಕಥೆ ಕೇಳಿ
ಹುಲಿಯಂತೇ ಎಗರಾಡಿ
ಸೇತುವೆ ಬಳಿ ಬಂದಾಗ
ಪ್ರೇಮಿಗಳ ಕಂಡಾಗ ರೋಷದಲೀ...ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕಥೆ ಅಂದಿಗೆ ಕೊನೆಯಾಯಿತು ಹೀಗೆ........
 
|| ಕೇಳದೆ ನಿಮಗೀಗ ದೂರದಲ್ಲಿ ಯಾರೋ
(ಲಾಲಾಲಾ ಓ..ಲಾಲಾಲಾ )…||

Kelade Nimageega song lyrics from Kannada Movie Geetha starring Shankarnag, Akshatha Rao, Gayathri, Lyrics penned by Chi Udayashankar Sung by S P Balasubrahmanyam, Music Composed by Ilayaraja, film is Directed by Shankarnag and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ