Neerahotha Neere Jaane Lyrics

in Gange Gowri

LYRIC

ನೀರ ಹೊತ್ತ ನೀರೆ ಜಾಣೆ  
ನೀರ ಹೊತ್ತ ನೀರೆ ಜಾಣೆ
ನಿಲ್ಲೆ ಬರುವೇನೆ ಓಯ್…
ನೀ ನಿಲ್ಲೆ ಬರುವೇನೆ ಓಯ್
ನಿನ್ನಾಣೆ ನಿನ್ನ ಕೊಡದಾಣೆ
ಕೈ ಬಳೆಯಾಣೆ,  ಹೊಳೆಯಾಣೆ

ನೀರ ನಿಂಗೆ ಕೊಡಲೇಕೆ  
ನೀರ ನಿಂಗೆ ಕೊಡಲೇಕೆ
ನೀ ನನ್ನ ಹಿಂದೆ ಬರಲೇಕೆ
ನನ್ನ ಹಿಂದೆ ಬರಲೇಕೆ ಒಯ್
ನೀನ್ಯಾರೋ ಮಲ್ಲ ನಾನ್ಯಾರೋ 
ಹೋಗಯ್ಯಾ ಹರಿವ ಹೊಳೆಯೆಡೆಗೆ

|| ನೀರ ಹೊತ್ತ ನೀರೆ ಜಾಣೆ…|| 
 
ಕಲ್ಲಾಸೆ ಕಟ್ಟೆಗೆ, ಮುಳ್ಳಾಸೆ ಬೇಲಿಗೆ 
ಬಲ್ಲೆನು ನಿನ್ನಾಸೆ ಎನ್ನ ಮೇಗೆ
ಕಲ್ಲಾಸೆ ಕಟ್ಟೆಗೆ, ಮುಳ್ಳಾಸೆ ಬೇಲಿಗೆ  
ಬಲ್ಲೆನು ನಿನ್ನಾಸೆ ಎನ್ನ ಮೇಗೆ 
ಅದು ಸಲ್ಲದು ನಿನ್ನಾಟ ನಡಿ ಹೊರಗೆ
ಕಟ್ಟಾಣಿ ಕಟ್ಟೋಳೆ.....ಏ ಏ ಏ…. 
ಕಟ್ಟಾಣಿ ಕಟ್ಟೋಳೆ ಕಟ್ಟೆ ಮೇಲ್ ನಿಂದೋಳೆ 
ಬಟ್ಟಲುಗಣ್ಣನು ತೆರೆದವಳೆ
ನಿಂಗೆ ಸಿಟ್ಟ್ಯಾಕೆ ನೀರ್ ಕೊಡು ಬಾ ಬಳಿಗೆ
ನಿಂಗೆ ಸಿಟ್ಟ್ಯಾಕೆ ನೀರ್ ಕೊಡು ಬಾ ಬಳಿಗೆ

|| ನೀರ ನಿಂಗೆ ಕೊಡಲೇಕೆ…||

ಬಣ್ಣದ ಚಿಟ್ಟೆಯಂತೆ ಬಂದು ನೀ ಕಾಡಿದೆ 
ತಣ್ಣನೆ ನೋವೊಂದ ನೀ ತುಂಬಿದೆ
ಬಣ್ಣದ ಚಿಟ್ಟೆಯಂತೆ ಬಂದು ನೀ ಕಾಡಿದೆ 
ತಣ್ಣನೆ ನೋವೊಂದ ನೀ ತುಂಬಿದೆ
ಮೇಲೆ ತಣ್ಣನೆ ನೋವೊಂದ ನೀ ತುಂಬಿದೆ
ಮೈಯಂಥ ಮೈಯೋಳೆ..ಓ ಓ ಓ ಓ…..
ಆಹ..ಆಹ..ಹ್ಮ ಹ್ಮ ಹ್ಮ ….
ಮೈಯಂಥ ಮೈಯೋಳೆ, ಸಂಜೆ ಕೆಂಪು ಕೆನ್ಯೋಳೆ
ನೇರಳೆಹಣ್ಣು ನಿನ್ನ ಕಣ್ಣು
ಅದು ಬೀಳಲಿ ಎನ್ನಯ ಮೇಲಿನ್ನು
ಅದು ಬೀಳಲಿ ಎನ್ನಯ ಮೇಲಿನ್ನು

||ನೀರ ಹೊತ್ತ ನೀರೆ ಜಾಣೆ
ನಿಲ್ಲೆ ಬರುವೇನೆ ಓಯ್…
ನೀರ ನಿಂಗೆ ಕೊಡಲೇಕೆ
ನೀ ನನ್ನ ಹಿಂದೆ ಬರಲೇಕೆ ಓಯ್
ನೀರ ನಿಂಗೆ ಕೊಡಲೇಕೆ…..||

Neerahotha Neere Jaane song lyrics from Kannada Movie Gange Gowri starring Dr Rajkumar, Bharathi, Leelavathi, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1967