Saavira Kavigala Kaavyagalalli Lyrics

in Boothayyana Makkalu

Video:

LYRIC

-
ಸಾವಿರ ಕವಿಗಳ ಕಾವ್ಯಗಳಲ್ಲಿ
ಒಂದೊಂದು ಮುತ್ತಿನ ಅಕ್ಷರ ತೆಗೆದು
ಕಾವೇರಿ ನದಿಯ ಅಲೆಅಲೆ ಮೇಲೆ
ಮೊದಲ ಪ್ರೇಮದ ಪತ್ರವ ಬರೆದು
ಪ್ರೀತಿಯಿಂದ ಪ್ರೀತಿ ಮಾಡುವೆ ಕನ್ನಂಬಾಡಿ ಮೇಲಾಣೆ
 
||ಸಾವಿರ ಕವಿಗಳ ಕಾವ್ಯಗಳಲ್ಲಿ
ಒಂದೊಂದು ಮುತ್ತಿನ ಅಕ್ಷರ ತೆಗೆದು
ಕಾವೇರಿ ನದಿಯ ಅಲೆಅಲೆ ಮೇಲೆ
ಮೊದಲ ಪ್ರೇಮದ ಪತ್ರವ ಬರೆದು||
 
ಬೇಲೂರ ಸವಿಶಿಲ್ಪಗಳಿಂದ
ಒಂದಿಷ್ಟು ಮೌನ ತಂದು ಲೇಖನಿ ಹಿಡಿವೆ
ಭೋರ್ಗರೆಯೊ ಆ ಜೋಗವ ಕೇಳಿ
ಒಂದಿಷ್ಟು ಮುಗುಳುನಗೆ ಹಾಳೆಗೆ ಸುರಿವೆ
ಮಲೆನಾಡ ಮಳೆಯಿಂದ ಸ್ಪೂರ್ತಿಯ ಪಡೆವೆ
ಕರಾವಳಿಗೆ ಹೇಳಿ ಏಕಾಂತ ಪಡೆವೆ
ಪ್ರೇಮದ ಪತ್ರವ ಹಾರಿಸುವೆ
 
||ಸಾವಿರ ಕವಿಗಳ ಕಾವ್ಯಗಳಲ್ಲಿ
ಒಂದೊಂದು ಮುತ್ತಿನ ಅಕ್ಷರ ತೆಗೆದು
ಕಾವೇರಿ ನದಿಯ ಅಲೆಅಲೆ ಮೇಲೆ
ಮೊದಲ ಪ್ರೇಮದ ಪತ್ರವ ಬರೆದು||
 
ಕಂಗಳಿಗೆ ಈ ಹೃದಯವು ಕಾಣದು
ಆದರು ಹೃದಯದ ಕಣ್ತೆರೆವೆ
ಮಾತಿನಲ್ಲಿ ಈ ಪ್ರೀತಿ ಅರ್ಥವಾಗದು
ಆದರು ಪ್ರೀತಿಯ ಮಾತಾಡಿಸುವೆ
ಆಗೊಮ್ಮೆ ಈಗೊಮ್ಮೆ ನುಸುಳಿ ಹೋಗು
ಕನ್ನಡ ಸೊಗಡಲಿ ಅರಳಿ ಹೋಗು
ಪ್ರೀತಿಗೆ ಜೀವವ ಮುಡಿಪಿಡುವೆ
 
||ಸಾವಿರ ಕವಿಗಳ ಕಾವ್ಯಗಳಲ್ಲಿ
ಒಂದೊಂದು ಮುತ್ತಿನ ಅಕ್ಷರ ತೆಗೆದು
ಕಾವೇರಿ ನದಿಯ ಅಲೆಅಲೆ ಮೇಲೆ
ಮೊದಲ ಪ್ರೇಮದ ಪತ್ರವ ಬರೆದು
ಪ್ರೀತಿಯಿಂದ ಪ್ರೀತಿ ಮಾಡುವೆ ಕನ್ನಂಬಾಡಿ ಮೇಲಾಣೆ||
 
||ಸಾವಿರ ಕವಿಗಳ ಕಾವ್ಯಗಳಲ್ಲಿ
ಒಂದೊಂದು ಮುತ್ತಿನ ಅಕ್ಷರ ತೆಗೆದು
ಕಾವೇರಿ ನದಿಯ ಅಲೆಅಲೆ ಮೇಲೆ
ಮೊದಲ ಪ್ರೇಮದ ಪತ್ರವ ಬರೆದು||

Saavira Kavigala Kaavyagalalli song lyrics from Kannada Movie Boothayyana Makkalu starring Sourav, Chaithra, Ananthnag, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by G K Mudduraj and film is released on 2002