Yappo Yappo Lyrics

in Bhujangayyana Dashavathara

LYRIC

ಯಪ್ಪೋ ಯಪ್ಪೋ
ಏನು  ಜನ್ಮವೋ  
ಇದೂ   ಏನು  ಜನ್ಮವೋ  
ಕುರದಂತದೆ 
ಕುಂತ್ರೆ ಏಳದಂತದೆ 
ಆಡದಂತದೆ 
ಮಾತು ಕೇಳದಂತದೆ
 
|| ಯಪ್ಪೋ ಯಪ್ಪೋ  ||
 
ಕಂಡ ಕಂಡ  ಹೆಣ್ಣಿನಂಗ
ನೋಡಬ್ಯಾಡವೆನ್ದನೋಬ್ಬನೋ
ಆಡಿದಂತೆ ಮಾಡಲಿಲ್ಲ
ಅವ್ನೆ ಊರ ಶ್ಯಾನುಬೋಗನು
 
ನೆತ್ತಿಗೇರಿ ಪಿತ್ತ
ಹೋದ ಮಾಯಸುತ್ತಾ
ಹೂತುಕೊಂಡು  ಕಾಮಣ್ಣನಾ
ಹಲ್ಲು ತೋರಿಸುತ
ಜೊಲ್ಲು ಸೋರಿಸುತ್ತ
ಮೆತ್ತಿಕೊಂಡ ರೋಗಣ್ಣನ
ನೀತಿಗಳ ಕೇಳೋ ಒಡೆಯ
ಹಗಲಲೆ  ಹಿಡಿದನು  ಜಡೆಯ
ಕಾಣದೆ  ಕಾಲನ  ಪಡೆಯಾ
ಮರೆತನು ಬದುಕಿನ ಕಡೆಯ
 
|| ಯಪ್ಪೋ ಯಪ್ಪೋ  ||
 
ದಾಹವಾಗಿ ನೀರು ಎಂದ್ರೆ
ಊರೇ ತೊಬು  ಎಂದನೊಬ್ಬನು 
ರಾಜರೆಲ್ಲ ಹೋದ ಮೇಲೆ
ಊರನಾಳುವ ಪಟೇಲನು
ಶೆಟ್ಟಿಗಿಂತ ಗಟ್ಟಿ
ದುಡ್ಡು ಗಂಟು ಕಟ್ಟಿ
ಹೊತ್ತುಕೊಂಡ  ಲೋಭಣ್ಣನ
ಕಬ್ಬಿಣದ ಪೆಟ್ಟಿ
ರಾತ್ರಿ ಹಗಲು ತಟ್ಟಿ
ಕಳೆದು ಕೊಂಡ ಶಾಂತಣ್ಣನಾ
ಮೂಲದಲಿ ಮನುಜ ಕುಚೇಲ
ಯಾರಿಗೆ ಯಾರು ಪಟೇಲ
ಕಾಸಿನಲಿ ಬರಿ ಆಯಾಸ
ಕಾಯಕವೇ ನಿಜ ಕೈಲಾಸ
 
|| ಯಪ್ಪೋ ಯಪ್ಪೋ  ||
 
ದೋಣಿಯಲ್ಲಿ  ಹುಟ್ಟು ಹಾಕುತಿದ್ದ
ಒಬ್ಬ ಹುಟ್ಟು ಕುರುಡನೋ
ನಾಗವೇಣಿ ನಗುವ ಕೇಳಿ 
ಹುಟ್ಟು  ಎಸೆದು ಕಣ್ಣು ಬಿಟ್ಟನು 
ಆಹಾ..
ಹೆಣ್ಣು ಕಾಣಲಿಲ್ಲ
ಹುಟ್ಟು ಕೈಯಲಿಲ್ಲ
ನೀರಿನಲ್ಲಿ ಕೂಗಾಡಿದ
ನೀರ ಮದ್ಯದಿಂದ
ಜೀವದಾಸೆ ದಿಂದ
ಈಶ್ವರನ ಬೇಡಾಡಿದ
ಬುದ್ದಿಯ ಮಳಿಗೆ ಕಂಬ
ಕುಸಿದೊಡೆ ತನ್ನನ್ನೆ  ನಂಬ
ಲೌಕಿಕದ ಕುರುಡರಿಗೆಲ್ಲ
ಯಾತಕೋ ಪ್ರಾರ್ಥನೆ ಜಂಬ
 
ಯಪ್ಪೋ ಯಪ್ಪೋ
ಏನು  ಜನ್ಮವೋ  
ಇದೂ   ಏನು  ಜನ್ಮವೋ  
ಕುರದಂತದೆ 
ಕುಂತ್ರೆ ಏಳದಂತದೆ 
ಆಡದಂತದೆ 
ಮಾತು ಕೇಳದಂತದೆ
 

Yappo Yappo song lyrics from Kannada Movie Bhujangayyana Dashavathara starring Lokesh, Pallavi Joshi, Girija Lokesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Lokesh and film is released on 1991