ಮಾಳಿಗೆ ಮನೆಯ ಹುಡುಗಿ ಯಾಕಿಂಗೆ ಕಾಡುತ್ತೀಯ
ಹೃದಯ ಜೋಳಿಗೆಗೆ ಹಿಡಿ ಪ್ರೀತಿಯ ತುಂಬುತ್ತೀಯ
ಬ್ಯಾಸರ ಯಾಕೊ ಕಾಣೆ ಆ ನೇಸರನಾಣೆ ಕಣೆ
ಬ್ಯಾಸರ ಯಾಕೊ ಕಾಣೆ ಆ ನೇಸರನಾಣೆ ಕಣೆ
ಬ್ಯಾಸರ ನೀಗೊ ನೇಸರ ನಾ ನಿನ್ ಕಾಸಿನಸರದಾಣೆ
ಮಾಳಿಗೆ ಮನೆಯ ಹುಡುಗಿ ಯಾಕಿಂಗೆ ಕಾಡುತ್ತೀಯ
ಹೃದಯ ಜೋಳಿಗೆಗೆ ಹಿಡಿ ಪ್ರೀತಿಯ ತುಂಬುತ್ತೀಯ
ಗೆಜ್ಜೆ ದನಿ ಕೇಳಿ ಹೊರಗೆ ಬರೋಳೆ
ಲಜ್ಜೆ ನಡಿಗೆಯಿಂದ ಗಾರುಡಿಯ ಮಾಡೋಳೆ
ಅಂಬರದಾಗಿನ ಚಂದ್ರ ನನ್ ಅಂಗೈಲಿ ಕುಂತೋನೆ
ನಿನ್ನ ನಲ್ಲೆ ಮುಡಿಗೆ ನನ್ನ ಮುಡಿಸು ಅಂತಾನೆ
ಆಲದ ಮರದ ಬಿಳಲಿನಲ್ಲಿ ಹೂವು ಹುಟ್ಟೊಲ್ಲ
ಹುಟ್ಟದೆ ಇರುವ ಹೂವ ನೀನು ಕೇಳುತೀಯಲ್ಲ
ಏ ಬಿಗುಮಾನ ತರವಲ್ಲ ನಿನಗೆ ಈತರ
ಭೂಮಿಯಲ್ಲಿ ದಾರಿ ತಪ್ಪದಿರೋಳು
ಕಣ್ಣ ಕಾಲುದಾರಿಯಲ್ಲಿ ಕಳೆದುಹೋದಳು
ಅರೆ
||ಮಾಳಿಗೆ ಮನೆಯ ಹುಡುಗಿ ಯಾಕಿಂಗೆ ಕಾಡುತ್ತೀಯ
ಹೃದಯ ಜೋಳಿಗೆಗೆ ಹಿಡಿ ಪ್ರೀತಿಯ ತುಂಬುತ್ತೀಯ||
ಬಿಂಕವನ್ನು ತೋರಿ ಬಿನ್ನಾಣ ಮಾಡ್ತೀಯ
ಪಕ್ಕದ ಪರದೆ ಹಿಂದೆ ಆಟ ಆಡ್ತೀಯ
ಆರು ಮೊಳದ ಸೀರೆ ನಿನಗೆ ನೆರಿಗೆ ಬೀಳೊಲ್ಲ
ಹತ್ತು ಮೊಳದ ಸೀರೆ ಭಾರ ನೀನು ತಾಳೊಲ್ಲ
ತುಂಬೆ ಗಿಡಕು ಸಡಗರದಲಿ ಏಣಿ ಹಾಕೋಳು
ರೀತಿ ನೀತಿ ಗಡಿಬಿಡಿಯಲಿ ಪ್ರೀತಿ ಮರೆತೋಳು
ಪ್ರೀತಿಗು ಕಾವಲಾಗಿ ಕಾಯಬೇಕೆನೆ
ಜೀವದಾಣೆ ನೀನೆ ಜೀವ ಅಂದೋಳು
ಜಾಣೆ ಇವಳು ಜೀವ ಹಿಂಡಿ ಜಾರಿಕೊಂಡಳು
||ಮಾಳಿಗೆ ಮನೆಯ ಹುಡುಗಿ ಯಾಕಿಂಗೆ ಕಾಡುತ್ತೀಯ
ಹೃದಯ ಜೋಳಿಗೆಗೆ ಹಿಡಿ ಪ್ರೀತಿಯ ತುಂಬುತ್ತೀಯ
ಬ್ಯಾಸರ ಯಾಕೊ ಕಾಣೆ ಆ ನೇಸರನಾಣೆ ಕಣೆ
ಬ್ಯಾಸರ ಯಾಕೊ ಕಾಣೆ ಆ ನೇಸರನಾಣೆ ಕಣೆ
ಬ್ಯಾಸರ ನೀಗೊ ನೇಸರ ನಾ ನಿನ್ ಕಾಸಿನಸರದಾಣೆ||
ಅರೆರೆರೆ
||ಮಾಳಿಗೆ ಮನೆಯ ಹುಡುಗಿ ಯಾಕಿಂಗೆ ಕಾಡುತ್ತೀಯ
ಹೃದಯ ಜೋಳಿಗೆಗೆ ಹಿಡಿ ಪ್ರೀತಿಯ ತುಂಬುತ್ತೀಯ||