ಕಾಮ ಕ್ರೋಧ ಲೋಭ ಮದ
ಮಾತ್ಸರ್ಯವೇ….
ಮಾನವನ ಅಳಿವಿಗೆ ಕಾರಣ..
ಇದ ಗೆದ್ದ ಗಾಂಧಿ ಯೇಸು ಬುದ್ಧ
ವಿವೇಕಾನಂದರೇ…
ಜಗದ ಉಳಿವಿಗೆ ಕಾರಣ…
ಚಿಂತಿಸು ನೀ ಮನವೇ ಕ್ಷಣಕಾಲಕೆ
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…
|| ಚಿಂತಿಸು ನೀ ಮನವೇ ಕ್ಷಣಕಾಲಕೆ
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…||
ಕಾಮಕೆ ಬಲಿಯಾಗಿ
ರಾವಣ ಹಾಳಾದ
ಮೋಹಕೆ ಇಂದ್ರನು ಬಲಿಯಾದ…
ಕ್ರೋಧದ ಉರಿಯಲ್ಲಿ
ದುರ್ಯೋದನ ಹಾಳಾದ
ಮದದಲಿ ಅಸುರನು ಹಸುನೀಗಿದ…
ದಾನವರನ್ನು ಹೊರ ಬಲಿಗೆಳೆದು
ಮಾನವರಾಗಿ ನೀ ಮಾಡು…
ಜೀವನ ಶ್ಯಾನೆ ಅನುಭವ ಪಾಠ
ಬಾಳುವ ದಾರಿ ನೀ ತೋರು…
ಸಾರು ಪ್ರೀತಿಯ ಪಂಚಮವೇದ…
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ….
ಜಾತಿಯ ಆವೇಶ
ಮತಗಳ ಆಕ್ರೋಶ
ಮನುಜರ ಕೊಲ್ಲುವ ವಿಷ ಜ್ವಾಲೆ
ಸಾಗರ ತಾನೊಂದು
ನದಿಗಳು ಹಲವಾರು
ಮುಕ್ತಿಯ ಮಾರ್ಗದ ಗುರಿ ಒಂದೇ…
ಭೇದಗಳನ್ನು ಬುಡದಲ್ಲೆ ಕೊಂದು
ಸೋದರ ಭಾವ ನೀ ಬೆಳೆಸು..
ರಕ್ತದ ದಾಹ ಇರುವೆಡೆಯಲ್ಲಿ
ಪ್ರೀತಿಯ ಅಮೃತ ನೀ ಹರಿಸು…
ಕೇಳಲಿ ಎಲ್ಲೆಡೆ ಶಾಂತಿಯ ನಾದ..
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…
|| ಚಿಂತಿಸು ನೀ ಮನವೇ ಕ್ಷಣಕಾಲಕೆ
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…||
ಕಾಮ ಕ್ರೋಧ ಲೋಭ ಮದ
ಮಾತ್ಸರ್ಯವೇ….
ಮಾನವನ ಅಳಿವಿಗೆ ಕಾರಣ..
ಇದ ಗೆದ್ದ ಗಾಂಧಿ ಯೇಸು ಬುದ್ಧ
ವಿವೇಕಾನಂದರೇ…
ಜಗದ ಉಳಿವಿಗೆ ಕಾರಣ…
ಚಿಂತಿಸು ನೀ ಮನವೇ ಕ್ಷಣಕಾಲಕೆ
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…
|| ಚಿಂತಿಸು ನೀ ಮನವೇ ಕ್ಷಣಕಾಲಕೆ
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…||
ಕಾಮಕೆ ಬಲಿಯಾಗಿ
ರಾವಣ ಹಾಳಾದ
ಮೋಹಕೆ ಇಂದ್ರನು ಬಲಿಯಾದ…
ಕ್ರೋಧದ ಉರಿಯಲ್ಲಿ
ದುರ್ಯೋದನ ಹಾಳಾದ
ಮದದಲಿ ಅಸುರನು ಹಸುನೀಗಿದ…
ದಾನವರನ್ನು ಹೊರ ಬಲಿಗೆಳೆದು
ಮಾನವರಾಗಿ ನೀ ಮಾಡು…
ಜೀವನ ಶ್ಯಾನೆ ಅನುಭವ ಪಾಠ
ಬಾಳುವ ದಾರಿ ನೀ ತೋರು…
ಸಾರು ಪ್ರೀತಿಯ ಪಂಚಮವೇದ…
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ….
ಜಾತಿಯ ಆವೇಶ
ಮತಗಳ ಆಕ್ರೋಶ
ಮನುಜರ ಕೊಲ್ಲುವ ವಿಷ ಜ್ವಾಲೆ
ಸಾಗರ ತಾನೊಂದು
ನದಿಗಳು ಹಲವಾರು
ಮುಕ್ತಿಯ ಮಾರ್ಗದ ಗುರಿ ಒಂದೇ…
ಭೇದಗಳನ್ನು ಬುಡದಲ್ಲೆ ಕೊಂದು
ಸೋದರ ಭಾವ ನೀ ಬೆಳೆಸು..
ರಕ್ತದ ದಾಹ ಇರುವೆಡೆಯಲ್ಲಿ
ಪ್ರೀತಿಯ ಅಮೃತ ನೀ ಹರಿಸು…
ಕೇಳಲಿ ಎಲ್ಲೆಡೆ ಶಾಂತಿಯ ನಾದ..
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…
|| ಚಿಂತಿಸು ನೀ ಮನವೇ ಕ್ಷಣಕಾಲಕೆ
ಪ್ರೇಮವೆ ಬಾಳಿನ ದೀಪ…
ದ್ವೇಷವೇ ದಹಿಸುವ ಶಾಪ…||
Chinthisu Nee Manave song lyrics from Kannada Movie Bete starring Ambarish, Ambika, Anuradha, Lyrics penned by R N Jayagopal Sung by S P Balasubrahmanyam, Music Composed by S P Balasubramanyam, film is Directed by V Somashekar and film is released on 1986