-
ಹೆತ್ತ ಕರುಳಿನ ಕಣ್ಣೀರು ಬತ್ತಿದ ಮ್ಯಾಲೆ
ನಿನ್ನ ಒಡಲಿನ ಮಕ್ಕಳು ಬದುಕೋದ್ಯಾಗೆ ಹೇಳೆ
ಕಾಡುಕಣಿವೆನು ಬರಡಾಗಿ ಬರಿದಾದ ಮ್ಯಾಲೆ
ನಿನ್ನ ಕುಡಿಗಳು ಕೊರಗೊದು ನ್ಯಾಯವೆ ಹೇಳು
ಬದುಕನ್ನು ಕಲಿತೋರು ಬದುಕತ್ತಲಿರುವರು
ಅನ್ನವ ಬೆಳೆಯೋರು ಹಸಿವಿಂದ ಸತ್ತೋರು
ಮೇಲೆ ಕುಂತೋನ್ಗೆ ಎಲ್ಲ ಕಾಣುತ್ತಲ್ಲ
ಅವನ ಕಣ್ಣಿಗೆ ನಾವು ಕಾಣೋದಿಲ್ಲ
ಮೇಲೆ ಕುಂತೋನ್ಗೆ ಎಲ್ಲ ಕಾಣುತ್ತಲ್ಲ
ಅವನ ಕಣ್ಣಿಗೆ ನಾವು ಕಾಣೋದಿಲ್ಲ
ಯಾವ ಜನ್ಮದ ಕರ್ಮ ನಮಮ್ ಬೆನ್ನಹತ್ತೈತೊ
ಯಾರೊ ಮಾಡಿದ ಪಾಪ ಬಡವರ ಪ್ರಾಣ ಹಿಂಡೈತೊ
ಮೇವು ಕನಿಕೆಯೆಲ್ಲ ಒಣಗಿ ಹೋಗೈತಲ್ಲ
ಇಲ್ಲಿ ದನಗಳೆಲ್ಲ ಕಟುಕರ ಪಾಲಾಯ್ತಲ್ಲ
ಹಸಿವಿಂದ ಮರುಗೊ ಮಕ್ಕಳು ನಗುವಿರದ ನೋವ ಮುಖಗಳು
ಹಸಿವೆ ನೋಡು ನಿನ್ನ ಕ್ರೌರ್ಯನ ಭೂಮಿ ನೀ ಹೇಳು ಇದು ನ್ಯಾಯನ
||ಹೆತ್ತ ಕರುಳಿನ ಕಣ್ಣೀರು ಬತ್ತಿದ ಮ್ಯಾಲೆ
ನಿನ್ನ ಒಡಲಿನ ಮಕ್ಕಳು ಬದುಕೋದ್ಯಾಗೆ ಹೇಳೆ||
ಸಾವುನೋವುಗಳ ಸಂತಿ ಕಣ್ಣ ಮುಂದೆ ನಡೆದಾವೊ
ಸಾಧುಸಜ್ಜನರ ಮೂಕರಾಗಿ ಕುಂತಾರೊ
ಶ್ಯಾಣೆ ಮಂದಿ ಕೂಡ ಸೋತುಹೋಗುತ್ತಾರೆ
ದುಡ್ಡುದವಲಿತ್ತನ ಜನರ ಲೋಕದಲ್ಲಿ
ಸಾಹುಕಾರ ಕಾಳ ಧನಿಕರ ಮನಸ್ಸು ಕ್ವಾರಿ ಕಲ್ಲು ಆಗ್ಯಾವು
ಅಧಿಕಾರಿ ನೌಕರಿ ಮಂದಿಗಳ ಕಣ್ಣುಕಿವಿಗಳೆಲ್ಲ ಹೋಗ್ಯಾವೊ
ನಾಡನಾಳುವ ನಮ್ಮ ನಾಯಕರು ಬರಿ ಮಾತಲ್ಲೆ ಮನೆ ಕಟ್ತಾರೊ
||ಹೆತ್ತ ಕರುಳಿನ ಕಣ್ಣೀರು ಬತ್ತಿದ ಮ್ಯಾಲೆ
ನಿನ್ನ ಒಡಲಿನ ಮಕ್ಕಳು ಬದುಕೋದ್ಯಾಗೆ ಹೇಳೆ||
-
ಹೆತ್ತ ಕರುಳಿನ ಕಣ್ಣೀರು ಬತ್ತಿದ ಮ್ಯಾಲೆ
ನಿನ್ನ ಒಡಲಿನ ಮಕ್ಕಳು ಬದುಕೋದ್ಯಾಗೆ ಹೇಳೆ
ಕಾಡುಕಣಿವೆನು ಬರಡಾಗಿ ಬರಿದಾದ ಮ್ಯಾಲೆ
ನಿನ್ನ ಕುಡಿಗಳು ಕೊರಗೊದು ನ್ಯಾಯವೆ ಹೇಳು
ಬದುಕನ್ನು ಕಲಿತೋರು ಬದುಕತ್ತಲಿರುವರು
ಅನ್ನವ ಬೆಳೆಯೋರು ಹಸಿವಿಂದ ಸತ್ತೋರು
ಮೇಲೆ ಕುಂತೋನ್ಗೆ ಎಲ್ಲ ಕಾಣುತ್ತಲ್ಲ
ಅವನ ಕಣ್ಣಿಗೆ ನಾವು ಕಾಣೋದಿಲ್ಲ
ಮೇಲೆ ಕುಂತೋನ್ಗೆ ಎಲ್ಲ ಕಾಣುತ್ತಲ್ಲ
ಅವನ ಕಣ್ಣಿಗೆ ನಾವು ಕಾಣೋದಿಲ್ಲ
ಯಾವ ಜನ್ಮದ ಕರ್ಮ ನಮಮ್ ಬೆನ್ನಹತ್ತೈತೊ
ಯಾರೊ ಮಾಡಿದ ಪಾಪ ಬಡವರ ಪ್ರಾಣ ಹಿಂಡೈತೊ
ಮೇವು ಕನಿಕೆಯೆಲ್ಲ ಒಣಗಿ ಹೋಗೈತಲ್ಲ
ಇಲ್ಲಿ ದನಗಳೆಲ್ಲ ಕಟುಕರ ಪಾಲಾಯ್ತಲ್ಲ
ಹಸಿವಿಂದ ಮರುಗೊ ಮಕ್ಕಳು ನಗುವಿರದ ನೋವ ಮುಖಗಳು
ಹಸಿವೆ ನೋಡು ನಿನ್ನ ಕ್ರೌರ್ಯನ ಭೂಮಿ ನೀ ಹೇಳು ಇದು ನ್ಯಾಯನ
||ಹೆತ್ತ ಕರುಳಿನ ಕಣ್ಣೀರು ಬತ್ತಿದ ಮ್ಯಾಲೆ
ನಿನ್ನ ಒಡಲಿನ ಮಕ್ಕಳು ಬದುಕೋದ್ಯಾಗೆ ಹೇಳೆ||
ಸಾವುನೋವುಗಳ ಸಂತಿ ಕಣ್ಣ ಮುಂದೆ ನಡೆದಾವೊ
ಸಾಧುಸಜ್ಜನರ ಮೂಕರಾಗಿ ಕುಂತಾರೊ
ಶ್ಯಾಣೆ ಮಂದಿ ಕೂಡ ಸೋತುಹೋಗುತ್ತಾರೆ
ದುಡ್ಡುದವಲಿತ್ತನ ಜನರ ಲೋಕದಲ್ಲಿ
ಸಾಹುಕಾರ ಕಾಳ ಧನಿಕರ ಮನಸ್ಸು ಕ್ವಾರಿ ಕಲ್ಲು ಆಗ್ಯಾವು
ಅಧಿಕಾರಿ ನೌಕರಿ ಮಂದಿಗಳ ಕಣ್ಣುಕಿವಿಗಳೆಲ್ಲ ಹೋಗ್ಯಾವೊ
ನಾಡನಾಳುವ ನಮ್ಮ ನಾಯಕರು ಬರಿ ಮಾತಲ್ಲೆ ಮನೆ ಕಟ್ತಾರೊ
||ಹೆತ್ತ ಕರುಳಿನ ಕಣ್ಣೀರು ಬತ್ತಿದ ಮ್ಯಾಲೆ
ನಿನ್ನ ಒಡಲಿನ ಮಕ್ಕಳು ಬದುಕೋದ್ಯಾಗೆ ಹೇಳೆ||