ಯಾರಿಗ್ಯಾರು ಎಂಬ ಮಾತು ಸತ್ಯವಾಯಿತು
ಪ್ರೀತಿ ಮಮತೆ ಸಂಪತ್ತು ಸೂರೆಯಾಯಿತು
ಆನಂದದ ನೆಲೆಯಾದ ಬಂಗಾರದ ಮನೆಯ
ಸುಖವು ಕರಗಿತು ನೀರ ಗುಳ್ಳೆಯಾಯಿತು
ಯಾರಿಗ್ಯಾರು ಎಂಬ ಮಾತು ಸತ್ಯವಾಯಿತು
ಪ್ರೀತಿ ಮಮತೆ ಸಂಪತ್ತು ಸೂರೆಯಾಯಿತು
ತುತ್ತನಿತ್ತ ತಾಯ ನೆಲವ ಮಾರಿಕೊಂಡರು
ತುತ್ತನಿತ್ತ ತಾಯ ನೆಲವ ಮಾರಿಕೊಂಡರು
ನೆರಳು ಕೊಟ್ಟ ಮನೆಯ ತಾವೆ ಮುರಿದುಕೊಂಡರು
ಭ್ರಮೆಯ ಸಿರಿಗೆ ಮರುಳುಗೊಂಡು ನಿಜವ ಮರೆತರು
ಕೀಳು ಜನರ ಜಾಲದಲ್ಲಿ ಸಿಲುಕಿಕೊಂಡರು
ಯಾವ ದೈವ ಮುನಿದು ಇಂತ ಶಾಪ ನೀಡಿತು
ನಲಿವನೆಲ್ಲ ಅಳಿಸಿ ದುಃಖಗೀತೆ ಬರೆಯಿತು
ನಲಿವನೆಲ್ಲ ಅಳಿಸಿ ದುಃಖಗೀತೆ ಬರೆಯಿತು
||ಯಾರಿಗ್ಯಾರು ಎಂಬ ಮಾತು ಸತ್ಯವಾಯಿತು
ಪ್ರೀತಿ ಮಮತೆ ಸಂಪತ್ತು ಸೂರೆಯಾಯಿತು
ಆನಂದದ ನೆಲೆಯಾದ ಬಂಗಾರದ ಮನೆಯ
ಸುಖವು ಕರಗಿತು ನೀರ ಗುಳ್ಳೆಯಾಯಿತು||
||ಯಾರಿಗ್ಯಾರು ಎಂಬ ಮಾತು ಸತ್ಯವಾಯಿತು
ಪ್ರೀತಿ ಮಮತೆ ಸಂಪತ್ತು ಸೂರೆಯಾಯಿತು||
ಹೆತ್ತಮ್ಮನ ಅಕ್ಕರೆಯನ್ನು ಅರಿಯದ ಜನರು
ಹೆತ್ತಮ್ಮನ ಅಕ್ಕರೆಯನ್ನು ಅರಿಯದ ಜನರು
ಹಿರಿಯಣ್ಣನ ಕಿರಿಯಾಸೆಯ ತುಳಿದ ಮೂಢರು
ರಕ್ತಸಂಬಂಧಗಳಿಗೆ ದ್ರೋಹ ಬಗೆದರು
ಸಂಸಾರದ ಹಿರಿಮೆಯನ್ನು ಬೀದಿಗೆಳೆದರು
ಪ್ರೀತಿಯ ನಗೆ ದ್ವೇಷದ ಹೊಗೆಯಲ್ಲಿ ಮುಳುಗಿತು
ಸೌಜನ್ಯದ ಸದ್ಭಾವನೆ ಮಾಯವಾಯಿತು
ಸೌಜನ್ಯದ ಸದ್ಭಾವನೆ ಮಾಯವಾಯಿತು