-
ಭೂಮಿಗ್ಯಾಕೆ ಬಂದಿ ಅಂತ ಬಲ್ಲೆ ಏನೋ ಅಣ್ಣ
ಮೈಮುರೀಯಗೈಮೇಗಂತೆ ಬಲ್ಲೆ ಏನೋ
ಅಣ್ಣ ಮೈಮುರೀಯಗೈಮೇಗಂತೆ ಬಲ್ಲೆ ಏನೋ
ಕುಡಿದ ನೀರಲು ಕಾಡದಂತೆ ಬಾಳ್ವರಲ್ಲೊ ತಮ್ಮಾ
ದುಡಿಮೆಯೆಲ್ಲ ಬಡವಾದೆಂದು ಪೇಳ್ವರಲ್ಲೊ
ತಮ್ಮಾ ದುಡಿಮೆಯೆಲ್ಲ ಬಡವಾದೆಂದೂ ಪೇಳ್ವರಲ್ಲೊ
ಮೂರು ತಲೆಮಾರು ಮಂದಿ ಮೈಮುರಿಯ ದುಡಿದಾರೊ
ಮೂರು ತಲೆಮಾರು ಮಂದಿ ಕುಂತುಕೊಂಡೆ ಉಂಡಾರೊ
ಇಂದಿನೋರ ದುಡಿಮೆಯೇ ಮುಂದಿನೋರ ಬಾಳ ಗುಡಿಗೆ
ಅಂದವಾದ ಚಿನ್ನದ ಕಳಶ ಬಲ್ಲೆಯೇನೋ....
ಊರೆಲ್ಲ ಸೂರೆ ಮಾಡೋ ಸಾಹುಕಾರ
ಇವನ ಸಾಲದಾಗೆ ಸಾಯೋಗಂಟ ಸಂಸಾರ
ತಮ್ಮಾ ಸಾಲದಾಗೆ ಸಾಯೋಗಂಟ ಸಂಸಾರ
ರೈತರೆಲ್ಲ ಕೂಡಿಕೊಂಡು ಕೂಡಿ ಸಂಘ ಸಹಕಾರ
ನೀಡುತಾದೆ ಸಾಲಸೋಲ ನಮ್ಮ ನಾಡ ಸರಕಾರ
ಓ ಓ ಓ ಓ ಓ ಓ ಓ ...
ಘಾಸಿವಿಲ್ಲದೆ ತೀರುವುದಂತೆ ನೂರು ಕಂತಿನ ಸಾಲವಂತೆ
ಲೇಸಾದ ಕಾಲ ಬಂತು ಬಲ್ಲೆಯೇನೋ
ಕಣದಲ್ಲೆ ಕಾಳನೆಲ್ಲ ದೋಚಕೊಂಡನೊ ಶೆಟ್ಟಿ
ಕಳ್ಳ ತೂಕ ಸುಳ್ಳಿನ ಲೆಕ್ಕ ಸಾಧಿಸೊ ಶೆಟ್ಟಿ
ತಮ್ಮಾ ಕಳ್ಳ ತೂಕ ಸುಳ್ಳಿನ ಲೆಕ್ಕ ಸಾಧಿಸೋ ಶೆಟ್ಟಿ
ಓದು ಕಲಿತ ಊರ ಶೆಟ್ಟಿ ಭಾರಿ ಆಟ ಕಲಿತಾನೊ
ಓದು ಬಾರದ ಹಳ್ಳಿ ಹೈದ ತೀರ ಹಿಂದೆ ಉಳಿದಾನೊ
ಕಲಿತ ಹಳ್ಳಿಹೈದನ ಮುಂದೆ ಶೆಟ್ಟಿ ಆಟ ಸಾಗದು
ಕಲಿವುದೊಂದೆ ದಾರಿ ನಮಗೆ ಬಲ್ಲೆಯೇನೋ
ಅಣ್ಣಾ ಕಲಿವುದೊಂದೇ ದಾರಿ ನಮಗೆ ಬಲ್ಲೆಯೇನೋ
|| ಭೂಮಿಗ್ಯಾಕೆ ಬಂದಿ ಅಂತ ಬಲ್ಲೆ ಏನೋ ಅಣ್ಣ
ಮೈಮುರೀಯಗೈಮೇಗಂತೆ ಬಲ್ಲೆ ಏನೋ
ಅಣ್ಣ ಮೈಮುರೀಯಗೈಮೇಗಂತೆ ಬಲ್ಲೆ ಏನೋ ||
-
ಭೂಮಿಗ್ಯಾಕೆ ಬಂದಿ ಅಂತ ಬಲ್ಲೆ ಏನೋ ಅಣ್ಣ
ಮೈಮುರೀಯಗೈಮೇಗಂತೆ ಬಲ್ಲೆ ಏನೋ
ಅಣ್ಣ ಮೈಮುರೀಯಗೈಮೇಗಂತೆ ಬಲ್ಲೆ ಏನೋ
ಕುಡಿದ ನೀರಲು ಕಾಡದಂತೆ ಬಾಳ್ವರಲ್ಲೊ ತಮ್ಮಾ
ದುಡಿಮೆಯೆಲ್ಲ ಬಡವಾದೆಂದು ಪೇಳ್ವರಲ್ಲೊ
ತಮ್ಮಾ ದುಡಿಮೆಯೆಲ್ಲ ಬಡವಾದೆಂದೂ ಪೇಳ್ವರಲ್ಲೊ
ಮೂರು ತಲೆಮಾರು ಮಂದಿ ಮೈಮುರಿಯ ದುಡಿದಾರೊ
ಮೂರು ತಲೆಮಾರು ಮಂದಿ ಕುಂತುಕೊಂಡೆ ಉಂಡಾರೊ
ಇಂದಿನೋರ ದುಡಿಮೆಯೇ ಮುಂದಿನೋರ ಬಾಳ ಗುಡಿಗೆ
ಅಂದವಾದ ಚಿನ್ನದ ಕಳಶ ಬಲ್ಲೆಯೇನೋ....
ಊರೆಲ್ಲ ಸೂರೆ ಮಾಡೋ ಸಾಹುಕಾರ
ಇವನ ಸಾಲದಾಗೆ ಸಾಯೋಗಂಟ ಸಂಸಾರ
ತಮ್ಮಾ ಸಾಲದಾಗೆ ಸಾಯೋಗಂಟ ಸಂಸಾರ
ರೈತರೆಲ್ಲ ಕೂಡಿಕೊಂಡು ಕೂಡಿ ಸಂಘ ಸಹಕಾರ
ನೀಡುತಾದೆ ಸಾಲಸೋಲ ನಮ್ಮ ನಾಡ ಸರಕಾರ
ಓ ಓ ಓ ಓ ಓ ಓ ಓ ...
ಘಾಸಿವಿಲ್ಲದೆ ತೀರುವುದಂತೆ ನೂರು ಕಂತಿನ ಸಾಲವಂತೆ
ಲೇಸಾದ ಕಾಲ ಬಂತು ಬಲ್ಲೆಯೇನೋ
ಕಣದಲ್ಲೆ ಕಾಳನೆಲ್ಲ ದೋಚಕೊಂಡನೊ ಶೆಟ್ಟಿ
ಕಳ್ಳ ತೂಕ ಸುಳ್ಳಿನ ಲೆಕ್ಕ ಸಾಧಿಸೊ ಶೆಟ್ಟಿ
ತಮ್ಮಾ ಕಳ್ಳ ತೂಕ ಸುಳ್ಳಿನ ಲೆಕ್ಕ ಸಾಧಿಸೋ ಶೆಟ್ಟಿ
ಓದು ಕಲಿತ ಊರ ಶೆಟ್ಟಿ ಭಾರಿ ಆಟ ಕಲಿತಾನೊ
ಓದು ಬಾರದ ಹಳ್ಳಿ ಹೈದ ತೀರ ಹಿಂದೆ ಉಳಿದಾನೊ
ಕಲಿತ ಹಳ್ಳಿಹೈದನ ಮುಂದೆ ಶೆಟ್ಟಿ ಆಟ ಸಾಗದು
ಕಲಿವುದೊಂದೆ ದಾರಿ ನಮಗೆ ಬಲ್ಲೆಯೇನೋ
ಅಣ್ಣಾ ಕಲಿವುದೊಂದೇ ದಾರಿ ನಮಗೆ ಬಲ್ಲೆಯೇನೋ
|| ಭೂಮಿಗ್ಯಾಕೆ ಬಂದಿ ಅಂತ ಬಲ್ಲೆ ಏನೋ ಅಣ್ಣ
ಮೈಮುರೀಯಗೈಮೇಗಂತೆ ಬಲ್ಲೆ ಏನೋ
ಅಣ್ಣ ಮೈಮುರೀಯಗೈಮೇಗಂತೆ ಬಲ್ಲೆ ಏನೋ ||