Sobagina Seremaneyaagihe Neenu Lyrics

ಸೊಬಗಿನಾ ಸೆರೆಮನೆಯಾಗಿಹೆ Lyrics

in Anireekshitha

in ಅನಿರೀಕ್ಷಿತ

LYRIC

ಸೊಬಗಿನಾ….
ಸೆರೆಮನೆಯಾಗಿಹೆ ನೀನು 
ಚೆಲುವೇ.....ಸರಸತಿಯೇ....
ಅದರಲಿ ಸಿಲುಕಿದಾ
ಸೆರೆಯಾಳಾನು….   
ನನ್ನೆದೆಯಾರತಿಯೇ......
 
ನಿನ್ನೆಳೆ ಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ…
ಹೂವಾಗಿರುವುದು ನನಗಿನ್ನೊಂದಾಸೆ......
 
|| ನಿನ್ನೆಳೆ ಮೊಗದಲಿ….||
 
ತಾವರೆ ಬಣ್ಣದ ನಿನ್ನಾ ಹಣೆಯಲಿ
ಕುಂಕುಮವಾಗಿರಲೆನಗಾಸೆ
ಬಳ್ಳಿಯಲೇಳಿಪ ನಿನ್ನಾ ಕೈಯಲಿ
ಹೊಂಬಳೆಯಾಗಿರಲೆನಗಾಸೆ
ಪದ್ಮವ ಮುಸುಕಿದ ಸೀವನದಂತಿಹ
ಸೀರೆಯ ನಿರಿಯಾಗಿರುವಾಸೆ
ಮನವನು ಸೆಳೆಯುವ ನಿನ್ನಸಿ ನಡುವಿಗೆ
ಕಟಿಬಂಧನವಾಗಿರುವಾಸೆ....
 
|| ನಿನ್ನೆಳೆ ಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ…
ಹೂವಾಗಿರುವುದು ನನಗಿನ್ನೊಂದಾಸೆ......
ನಿನ್ನೆಳೆ ಮೊಗದಲಿ……||
 
ನಿನ್ನಾ ಕೈಯ್ಯಲಿ ಗಾನವ ಸೂಸುವ
ವೀಣೆಯು ನಾನಾಗುವುದಾಸೆ
ನಿನ್ನೊಳು ನಾನು ನನ್ನೊಳು ನೀನು
ಪ್ರೇಮದಿ ಲಯವಾಗುವುದಾಸೆ
ಚೆಲುವೆ...ಸರಳೆ...ಮುದ್ದಿನ ಹೆಣ್ಣೆ
ನಿನ್ನವನಾನಾಗಿರುವಾಸೆ
ಇನ್ನೇನುಸುರಲಿ ಕಾಮನ ಕನ್ನೇ
ನನಗಿಹುದೇನೇನೋ ಆಸೆ.............
 
|| ನಿನ್ನೆಳೆ ಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ…
ಹೂವಾಗಿರುವುದು ನನಗಿನ್ನೊಂದಾಸೆ......
ನಿನ್ನೆಳೆ ಮೊಗದಲಿ……||
 

ಸೊಬಗಿನಾ….
ಸೆರೆಮನೆಯಾಗಿಹೆ ನೀನು 
ಚೆಲುವೇ.....ಸರಸತಿಯೇ....
ಅದರಲಿ ಸಿಲುಕಿದಾ
ಸೆರೆಯಾಳಾನು….   
ನನ್ನೆದೆಯಾರತಿಯೇ......
 
ನಿನ್ನೆಳೆ ಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ…
ಹೂವಾಗಿರುವುದು ನನಗಿನ್ನೊಂದಾಸೆ......
 
|| ನಿನ್ನೆಳೆ ಮೊಗದಲಿ….||
 
ತಾವರೆ ಬಣ್ಣದ ನಿನ್ನಾ ಹಣೆಯಲಿ
ಕುಂಕುಮವಾಗಿರಲೆನಗಾಸೆ
ಬಳ್ಳಿಯಲೇಳಿಪ ನಿನ್ನಾ ಕೈಯಲಿ
ಹೊಂಬಳೆಯಾಗಿರಲೆನಗಾಸೆ
ಪದ್ಮವ ಮುಸುಕಿದ ಸೀವನದಂತಿಹ
ಸೀರೆಯ ನಿರಿಯಾಗಿರುವಾಸೆ
ಮನವನು ಸೆಳೆಯುವ ನಿನ್ನಸಿ ನಡುವಿಗೆ
ಕಟಿಬಂಧನವಾಗಿರುವಾಸೆ....
 
|| ನಿನ್ನೆಳೆ ಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ…
ಹೂವಾಗಿರುವುದು ನನಗಿನ್ನೊಂದಾಸೆ......
ನಿನ್ನೆಳೆ ಮೊಗದಲಿ……||
 
ನಿನ್ನಾ ಕೈಯ್ಯಲಿ ಗಾನವ ಸೂಸುವ
ವೀಣೆಯು ನಾನಾಗುವುದಾಸೆ
ನಿನ್ನೊಳು ನಾನು ನನ್ನೊಳು ನೀನು
ಪ್ರೇಮದಿ ಲಯವಾಗುವುದಾಸೆ
ಚೆಲುವೆ...ಸರಳೆ...ಮುದ್ದಿನ ಹೆಣ್ಣೆ
ನಿನ್ನವನಾನಾಗಿರುವಾಸೆ
ಇನ್ನೇನುಸುರಲಿ ಕಾಮನ ಕನ್ನೇ
ನನಗಿಹುದೇನೇನೋ ಆಸೆ.............
 
|| ನಿನ್ನೆಳೆ ಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ…
ಹೂವಾಗಿರುವುದು ನನಗಿನ್ನೊಂದಾಸೆ......
ನಿನ್ನೆಳೆ ಮೊಗದಲಿ……||
 

Sobagina Seremaneyaagihe Neenu song lyrics from Kannada Movie Anireekshitha starring Kalpana, B V Radha, Adavani Lakshmidevi, Lyrics penned by Kuvempu Sung by S P Balasubrahmanyam, Music Composed by Vijaya Bhaskar, film is Directed by B Nagesh Babu and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ