Bandaramma Bandaru Yaaro Bandaru Lyrics

in Anireekshitha

Video:

LYRIC

-
ಯಾರೊ ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬನ್ನಿರೆನಲು ಒಮ್ಮೆ ನಕ್ಕು ಬರುವುದೆಂತು ಎಂದರು
ಈಗ ನೇರ ನಮ್ಮ ಮನೆಗೆ ದಾರಿ ತಪ್ಪಿ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
 
ತೆರೆದ ಹೂವ ಕಂಪಿನಂತೆ ಸದ್ದಿಲ್ಲದೆ ಬಂದರು
ತೆರೆದ ಹೂವ ಕಂಪಿನಂತೆ ಸದ್ದಿಲ್ಲದೆ ಬಂದರು
ತಂಗಾಳಿಯ ಸೆರಗಿನಲ್ಲಿ ಇಂಪಿನಂತೆ ಬಂದರು
ಬಯಕೆ ಬಿಗಿದ ತಂತಿ ಮೀಟಿ ಕಿರುನಗೆಯ ತಂದರು
ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
 
ಯಾವ ಸೀಮೆಯವರು ಇವರು ಸಣ್ಣ ನಗೆಯ ರಾಯರು
ಯಾವ ಸೀಮೆಯವರು ಇವರು ಸಣ್ಣ ನಗೆಯ ರಾಯರು
ಅಂದು ಹೆಣ್ಣ ಬೇಡವೆಂದು ಇಂದು ಇವಳಿಗೊಲಿದರು
ಇವಳ ಸೆರಗ ಬಿಡದೆ ಹಿಡಿದು ಜೋಡಿಯಲ್ಲಿ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
 
ಅಂದು ನುಡಿದ ಕೊಂಕು ನುಡಿಗೆ ಇಂದು ಮನದಿ ನೊಂದರು
ಅಂದು ನುಡಿದ ಕೊಂಕು ನುಡಿಗೆ ಇಂದು ಮನದಿ ನೊಂದರು
ಹೊಸಿಲ ಹಿಂದೆ ನನ್ನ ಕಂಡು ಒಳಗೆ ಬರಲೆ ಎಂದರು
ಬೆಳದಿಂಗಳ ತಮ್ಮನಂತೆ ನಗುತ ಒಳಗೆ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
 
ಒಲವು ನುಗ್ಗಿ ಬಂದಿತಮ್ಮ ಬಂಗಾರದ ರಥದಲ್ಲಿ
ಒಲವು ನುಗ್ಗಿ ಬಂದಿತಮ್ಮ ಬಂಗಾರದ ರಥದಲ್ಲಿ
ದಾರಿ ತಾನೆ ಸರಿದುದಮ್ಮ ಮಿಂಚು ಅದರ ಸಾರಥಿ
ಕೋಟಿ ತಾರೆ ಧುಮುಕಿದಂತೆ ತುಂಬು ಹೊಳೆಯ ನೀರಿಗೆ
 
||ಬಂದರಮ್ಮ ಬಂದರು ಯಾರೊ ಬಂದರು
ಬಂದರಮ್ಮ ಬಂದರು ಯಾರೊ ಬಂದರು
ಬನ್ನಿರೆನಲು ಒಮ್ಮೆ ನಕ್ಕು ಬರುವುದೆಂತು ಎಂದರು
ಈಗ ನೇರ ನಮ್ಮ ಮನೆಗೆ ದಾರಿ ತಪ್ಪಿ ಬಂದರು||
||ಬಂದರಮ್ಮ ಬಂದರು ಯಾರೊ ಬಂದರು||
||ಬಂದರಮ್ಮ ಬಂದರು ಯಾರೊ ಬಂದರು||

Bandaramma Bandaru Yaaro Bandaru song lyrics from Kannada Movie Anireekshitha starring Kalpana, B V Radha, Adavani Lakshmidevi, Lyrics penned by K S Narasimha Swamy Sung by P Susheela, Music Composed by Vijaya Bhaskar, film is Directed by B Nagesh Babu and film is released on 1970