Video:
VIDEO
LYRIC
ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ
ಸಾಗರದ ಸಂಗಮದ
ಯೌವನದ ಸಂಭ್ರಮದ
ತನನನನ ತನುವಲಿ
|| ನಾದ ನಾದ ಪ್ರೇಮದ ನಾದ ||
ಕಡಲ ಸೇರೊ ನದಿಗೆ
ದಾರಿ ತೋರಿದವರು ಯಾರು
ಪುಷ್ಪರಾಗ ರತಿಗೆ……
ಹಾಡು ಕಲಿಸಿದವರು ಯಾರು
ಪ್ರಣಯ ಭಾಷೆಯ ಅರಿತುಕೊಳ್ಳುವ
ಕಣ್ಣಿಗ್ಯಾರು ಗುರು. . .
ಪ್ರೀತಿಯರಿತವರು
|| ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ
ಸಾಗರದ ಸಂಗಮದ
ಯೌವನದ ಸಂಭ್ರಮದ
ತನನನನ ತನುವಲಿ
ನಾದ ನಾದ ಪ್ರೇಮದ ನಾದ. . ||
ಪ್ರಣಯ ಗಾಳಿ ಬೀಸಿ
ಆಸೆಗಣ್ಣು ತೆರೆದು
ನಿದಿರೆ ಭಂಗವಾಗಿ
ಬಯಕೆ ಲಜ್ಜೆ ತೊರೆದು
ತನ್ನನರಿಯದೆ ಕುಸುಮ ಸೇರುವ
ದುಂಬಿಗಳ ಪಾಡು. . .
ನಮ್ಮ ಈ ಹಾಡು
|| ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ
ಸಾಗರದ ಸಂಗಮದ
ಯೌವನದ ಸಂಭ್ರಮದ
ತನನನನ ತನುವಲಿ
ನಾದ ನಾದ ಪ್ರೇಮದ ನಾದ. . ||
ಕೋಟಿ ರಾತ್ರಿ ಬರಲಿ
ಮೊದಲ ರಾತ್ರಿ ಮಧುರ
ನೆನಪಿನಾಳದಲ್ಲಿ
ಮಧುರ ಮೈತ್ರಿ ಅಮರ
ಪ್ರಥಮ ಚುಂಬನ ಪ್ರಣಯ
ಕಂಪನ ತಂದ ಈ ಇರುಳು. . .
ಬಾಳ ಜೇನಿರುಳು
|| ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ
ಸಾಗರದ ಸಂಗಮದ
ಯೌವನದ ಸಂಭ್ರಮದ
ತನನನನ ತನುವಲಿ
ನಾದ ನಾದ ಪ್ರೇಮದ ನಾದ. . ||
Please log in to see the full lyrics of this song.
Naada Naada Premada Nada song lyrics from Kannada Movie Andaman starring Shivarajkumar, Baby Niveditha Shivarajkumar, Soni, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1998