ವಿರಹಾಗ್ನಿ ತಾಪದುರಿಯಾ
ನಾನೆಂತು ಸಹಿಸೆಲೊ ಸದಯಾ
ಅತಿ ಕ್ರೂರವೀ ವಿಧಿವಿಲಾಸ
ಎಂಗೈವೆನೋ ನಾನರಿಯೇ
ಆಸೆಯ ಗೋಪುರ ನಿರ್ಮಿಸಿಕೊಂಡು
ಮಹಾದಾಸೆಗಳನೆ ಕಂಡಿದ್ದೆ
ಮಹಾದಾಸೆಗಳನೆ ಕಂಡಿದ್ದೆ
ನಲ್ಲನ ಒಲುಮೆಯು ನನದಾಯಿತೆಂದು
ನಲ್ಮೆಯ ನಿಧಿತಾ ನನಗೊಲಿಯಿತೆಂದು
ಭ್ರಾಂತಿಯ ತಳೆದೆ ಸಂತಸದಿ ನಲಿದೆ
ಪ್ರೇಮದಾ ಕಡಲಲ್ಲಿ ಅಕ್ಕರೆಯ ಒಡಲಲ್ಲಿ
ನಾನೊಂದು ನೌಕೆಯ ತೇಲಿಬಿಟ್ಟೆ
ನಾನೊಂದು ನೌಕೆಯ ತೇಲಿಬಿಟ್ಟೆ
ಸರಿಯಾದ ಹವಮಾನ ತಂಗಾಳಿ ಹೊಂಬಿಸಲು
ಸಂಭ್ರಮದಿ ನೌಕೆಯ ತೇಲಿ ಬಂತು
ಗಂಭೀರ ಸಾಗರದಿ ತೇಲಿ ಬಂತು
ಸೆದೆಯೇ ಬಾರೆಯಾ ದೂರಾದೆಯಾ
ಸೆದೆಯೇ ಬಾರೆಯಾ
ದಿನ ದಿನಕೆ ಚಿಗುರಿತು ಪ್ರೇಮ ಬಳ್ಳಿಯುತ
ಅಂದದಿ ಪಸರಿಸಿ ಹೃದಯ ಮಂದಿರದೆ
ಅಂದದಿ ಪಸರಿಸಿ ಹೃದಯ ಮಂದಿರದೆ
ಕುಸುಮಗಳು ಅರಳಿದವು ಪರಿಮಳವ ಬೀರುತಲಿ
ಆಶೆಯ ಗೋಪುರವಲಂಕರಿಸುತೆ
ಆಶೆಯ ಗೋಪುರವಲಂಕರಿಸುತೆ
ಸೆದೆಯೇ ಬಾರೆಯಾ ದೂರಾದೆಯಾ
ಸೆದೆಯೇ ಬಾರೆಯಾ
ಹಿರಿಯರಾತಂಕದ ಬಿರುಗಾಳಿ ಏರೆ
ಅಲ್ಲೋಲ ಕಲ್ಲೋಲವೆಲ್ಲೆಲ್ಲಿಯೂ
ಅಲ್ಲೋಲ ಕಲ್ಲೋಲವೆಲ್ಲೆಲ್ಲಿಯೂ
ಗೋಪುರ ಮುರಿಯಿತು ನೌಕೆಯು ಒಡೆಯಿತು
ಕವಿಯಿತು ಶೂನ್ಯತೆಯ ಅಂಧಕಾರ
ಸಂತೋಷವೆತ್ತಲೋ ಶೋಕದಾ ಕತ್ತಲಲಿ
ಸಂತೋಷವೆತ್ತಲೋ….
ವಿರಹಾಗ್ನಿ ತಾಪದುರಿಯಾ
ನಾನೆಂತು ಸಹಿಸೆಲೊ ಸದಯಾ
ಅತಿ ಕ್ರೂರವೀ ವಿಧಿವಿಲಾಸ
ಎಂಗೈವೆನೋ ನಾನರಿಯೇ
ಆಸೆಯ ಗೋಪುರ ನಿರ್ಮಿಸಿಕೊಂಡು
ಮಹಾದಾಸೆಗಳನೆ ಕಂಡಿದ್ದೆ
ಮಹಾದಾಸೆಗಳನೆ ಕಂಡಿದ್ದೆ
ನಲ್ಲನ ಒಲುಮೆಯು ನನದಾಯಿತೆಂದು
ನಲ್ಮೆಯ ನಿಧಿತಾ ನನಗೊಲಿಯಿತೆಂದು
ಭ್ರಾಂತಿಯ ತಳೆದೆ ಸಂತಸದಿ ನಲಿದೆ
ಪ್ರೇಮದಾ ಕಡಲಲ್ಲಿ ಅಕ್ಕರೆಯ ಒಡಲಲ್ಲಿ
ನಾನೊಂದು ನೌಕೆಯ ತೇಲಿಬಿಟ್ಟೆ
ನಾನೊಂದು ನೌಕೆಯ ತೇಲಿಬಿಟ್ಟೆ
ಸರಿಯಾದ ಹವಮಾನ ತಂಗಾಳಿ ಹೊಂಬಿಸಲು
ಸಂಭ್ರಮದಿ ನೌಕೆಯ ತೇಲಿ ಬಂತು
ಗಂಭೀರ ಸಾಗರದಿ ತೇಲಿ ಬಂತು
ಸೆದೆಯೇ ಬಾರೆಯಾ ದೂರಾದೆಯಾ
ಸೆದೆಯೇ ಬಾರೆಯಾ
ದಿನ ದಿನಕೆ ಚಿಗುರಿತು ಪ್ರೇಮ ಬಳ್ಳಿಯುತ
ಅಂದದಿ ಪಸರಿಸಿ ಹೃದಯ ಮಂದಿರದೆ
ಅಂದದಿ ಪಸರಿಸಿ ಹೃದಯ ಮಂದಿರದೆ
ಕುಸುಮಗಳು ಅರಳಿದವು ಪರಿಮಳವ ಬೀರುತಲಿ
ಆಶೆಯ ಗೋಪುರವಲಂಕರಿಸುತೆ
ಆಶೆಯ ಗೋಪುರವಲಂಕರಿಸುತೆ
ಸೆದೆಯೇ ಬಾರೆಯಾ ದೂರಾದೆಯಾ
ಸೆದೆಯೇ ಬಾರೆಯಾ
ಹಿರಿಯರಾತಂಕದ ಬಿರುಗಾಳಿ ಏರೆ
ಅಲ್ಲೋಲ ಕಲ್ಲೋಲವೆಲ್ಲೆಲ್ಲಿಯೂ
ಅಲ್ಲೋಲ ಕಲ್ಲೋಲವೆಲ್ಲೆಲ್ಲಿಯೂ
ಗೋಪುರ ಮುರಿಯಿತು ನೌಕೆಯು ಒಡೆಯಿತು
ಕವಿಯಿತು ಶೂನ್ಯತೆಯ ಅಂಧಕಾರ
ಸಂತೋಷವೆತ್ತಲೋ ಶೋಕದಾ ಕತ್ತಲಲಿ
ಸಂತೋಷವೆತ್ತಲೋ….
Asheya Gopura song lyrics from Kannada Movie Abba Aa Hudugi starring Dr Rajkumar, M Leelavathi, Pandari Bai, Lyrics penned by H L N Simha Sung by P B Srinivas, S Janaki, Music Composed by P Kalinga Rao, film is Directed by H L N Simha and film is released on 1959