Thaare Thaare Minuguva Thaare Lyrics

in Thuttha Muttha

Video:

LYRIC

ತಾರೆ ತಾರೆ ಮಿನುಗುವ. . ಮಿನುಗುವ ತಾರೆ
ತಾರೆ ತಾರೆ ಮಿನುಗುವ. . ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ   
ಹೃದಯಕೆ ತಾರೆ ಅಮೃತ ಧಾರೆ

|| ತಾರೆ ತಾರೆ ಮಿನುಗುವ. . ಮಿನುಗುವ ತಾರೆ ||

ನಿನ್ನಯ ಕಿರುನೋಟ ಕಿರುನಗುವಿನ ಕಾಟ
ಕುಳಿತಲ್ಲೆ ಕನಸನು ಕಾಣೊ ಖಾಯಿಲೆ ಕರುಣಿಸಿದೆ
ಅರೆಘಳಿಗೆ ನೆನಪಲ್ಲಿ ಮರುಘಳಿಗೆ ತಪದಲ್ಲಿ
ಪ್ರತಿಗಳಿಗೆ ಕಳೆಯುವುದೆಂತೊ ಹೃದಯ ನಡುಗುತಿದೆ
ಹಾಡಿಗೆ ಹಾಡು ಪ್ರೀತಿಗೆ ಪ್ರೀತಿ
ಔಷಧಿ ಬಾರೆ ಬೇಗನೆ ಬಾರೆ ಔಷಧಿ ತಾರೆ
ಸೌಂದರ್ಯ ಲೋಕದ ರಾಣಿ  ಸಂಗೀತ ಸಾರ ರಸವಾಣಿ
ಮನದುಯ್ಯಾಲೆ ನಿಂದು ತೂಗೋಳೆ 
ನನ್ನ ಮೇಲೆ ದಯವ ತೋರೆ

|| ತಾರೆ ತಾರೆ ಮಿನುಗುವ. . ಮಿನುಗುವ ತಾರೆ
ತಾರೆ ತಾರೆ ಮಿನುಗುವ. . ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ   
ಹೃದಯಕೆ ತಾರೆ ಅಮೃತ ಧಾರೆ. .
ತಾರೆ ತಾರೆ ಮಿನುಗುವ. . ಮಿನುಗುವ ತಾರೆ ||

ಪ್ರೇಮಿಗೆ ಯುಗ ನಿಮಿಷ ವಿರಹಿಗೆ ಕ್ಷಣ ವರುಷ
ಆ ನನ್ನ ಪ್ರೇಮದ ಪದವಿ ದಯಪಾಲಿಸು ಬಾರೆ
ಹೆಣ್ಣಿನ ಗುಣಗಾನ ಪ್ರೇಮಿಗೆ ವರದಾನ
ಬಾಳೆಲ್ಲ ಆರಾಧಿಸುವೆ ಅನುಮತಿಯ ತಾರೆ
ಅಂತರಗಂಗೆ ಅಂತರಗಂಗೆ
ನಿರ್ಮಲ ನೀರೆ ಜೀವನ ಧಾರೆ ಪ್ರೀತಿಸು ಬಾರೆ
ಅಪರೂಪ ಸ್ನೇಹದ ತಾರೆ ಅನುರಾಗ ಸಂಗಮ ತಾರೆ
ನಿನ್ನ ಆಂತರ್ಯ ಗೆಲ್ಲೋ ಚಾತುರ್ಯ 
ಬಂದು ನೀನೆ ತಿಳಿಸಿ ತೋರೆ

|| ತಾರೆ ತಾರೆ ಮಿನುಗುವ. . ಮಿನುಗುವ ತಾರೆ
ತಾರೆ ತಾರೆ ಮಿನುಗುವ. . ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ   
ಹೃದಯಕೆ ತಾರೆ ಅಮೃತ ಧಾರೆ. .
ತಾರೆ ತಾರೆ ಮಿನುಗುವ. . ಮಿನುಗುವ ತಾರೆ ||
 
 

Thaare Thaare Minuguva Thaare song lyrics from Kannada Movie Thuttha Muttha starring Ramesh Aravind, Prema, Kasthuri, Lyrics penned by Hamsalekha Sung by Unni Krishnan, Music Composed by Hamsalekha, film is Directed by Kishor Sarja and film is released on 1998