ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವಜ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ
ಮಡದಿ ಇಲ್ಲದೆ ಬಾಳಿಲ್ಲ.....
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ
|| ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವಜ್ಞಾನಿ ಅಂತ ತಿಳಿಬೇಡ||
ಮಗುವು ಅತ್ತರೆ ತಾನತ್ತು
ಹಾಲನೆರೆದವಳು ತಾಯಲ್ಲವೆ
ನಮಗಾಗಿ ಜೀವವ ತೇಯ್ದಿಲ್ಲವೇ
ತಾಳಿ ಪಾಶಕೆ ತಲೆ ಕೊಟ್ಟು
ಗಂಡಿನರ್ಧವೆ ತಾನಾಗಿ
ಸತಿ ನಮಗೆ ಮೀಸಲೇ ಆಗಿಲ್ಲವೆ
ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ
ಮಡದಿ ಇಲ್ಲದೆ ಛಲವಿಲ್ಲ.....
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ
ಕುಂತಿ ಇಲ್ಲದೆ ಪಾಂಡವರೇ
ದ್ರೌಪದಿ ಇಲ್ಲದೆ ಭಾರತವೇ
ಗಂಡು ಇಬ್ಬರ ಸ್ವತ್ತಲ್ಲವೇ
ನಮ್ಮ ಜನ್ಮಕೆ ಈ ಹೆಣ್ಣು
ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮಗೆರಡು ಕಣ್ಣು ಎರಡು ಹೆಣ್ಣು
ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆ ಇಲ್ಲ
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ
|| ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವಜ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ
ಮಡದಿ ಇಲ್ಲದೆ ಬಾಳಿಲ್ಲ.....
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ||
ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವಜ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ
ಮಡದಿ ಇಲ್ಲದೆ ಬಾಳಿಲ್ಲ.....
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ
|| ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವಜ್ಞಾನಿ ಅಂತ ತಿಳಿಬೇಡ||
ಮಗುವು ಅತ್ತರೆ ತಾನತ್ತು
ಹಾಲನೆರೆದವಳು ತಾಯಲ್ಲವೆ
ನಮಗಾಗಿ ಜೀವವ ತೇಯ್ದಿಲ್ಲವೇ
ತಾಳಿ ಪಾಶಕೆ ತಲೆ ಕೊಟ್ಟು
ಗಂಡಿನರ್ಧವೆ ತಾನಾಗಿ
ಸತಿ ನಮಗೆ ಮೀಸಲೇ ಆಗಿಲ್ಲವೆ
ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ
ಮಡದಿ ಇಲ್ಲದೆ ಛಲವಿಲ್ಲ.....
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ
ಕುಂತಿ ಇಲ್ಲದೆ ಪಾಂಡವರೇ
ದ್ರೌಪದಿ ಇಲ್ಲದೆ ಭಾರತವೇ
ಗಂಡು ಇಬ್ಬರ ಸ್ವತ್ತಲ್ಲವೇ
ನಮ್ಮ ಜನ್ಮಕೆ ಈ ಹೆಣ್ಣು
ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮಗೆರಡು ಕಣ್ಣು ಎರಡು ಹೆಣ್ಣು
ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆ ಇಲ್ಲ
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ
|| ಮುತ್ತು ಕೊಡೋಳು ಬಂದಾಗ
ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೋನೆ
ತತ್ವಜ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ
ಮಡದಿ ಇಲ್ಲದೆ ಬಾಳಿಲ್ಲ.....
ತುತ್ತಾ ಮುತ್ತಾ ಗೊತ್ತ ಅತ್ತ ಇತ್ತ ಎತ್ತ||
Mutthu Kodolu Bandaga song lyrics from Kannada Movie Thuttha Muttha starring Ramesh Aravind, Prema, Kasthuri, Lyrics penned by Hamsalekha Sung by Unni Krishnan, Music Composed by Hamsalekha, film is Directed by Kishor Sarja and film is released on 1998