-
ಅಂಬೆಗಾಲಿಡುವಾಗ ನಾಲ್ಕು ಕಾಲು
ಪ್ರಾಯ ಬಂದಾಗ ಎರಡು ಕಾಲು
ಮುಪ್ಪು ಬಂದ ಮೇಲೆ ಮೂರು ಕಾಲು
ಸತ್ತು ಮಣ್ಣಿಗೋಗುವಾಗ ಹತ್ತು ಕಾಲು
ಇದು ದೊಡ್ಡೋರು ಹೇಳೊ ಮಾತು ಸತ್ಯ ಸತ್ಯ
ಅದೆ ನಾವು ಹೇಳಿದರೆ ಹುಚ್ಚ ಹುಚ್ಚ
ಏ ತಂಗಳೂರು ತಗಡು ರಾಣಿ ಬರ್ತಾಳೆ
ಏ ತಂಗಳೂರು ತಗಡು ರಾಣಿ ಬರ್ತಾಳೆ
ಹುಡುಗರೆಲ್ಲ ತಟ್ಟಿ ಕೈಯ್ಯ ಚಪ್ಪಾಳೆ
ಹಳೆ ಅಂಬಾರಿ ಸಾರೋಟು ಹೊಡಿ ಜೋರಾಗಿ ಸಲ್ಯೂಟು
ಚೆಳ್ಳ ಪಿಳ್ಳ ಶಿಳ್ಳೆ ಹಾಕಿ ತರಕಲಾಂಡಿ ತಾಳ ಹಾಕಿ
ಏ ಪಿಳ್ಳೆ ಏ ಪಿಳ್ಳೆ ಹೊಡಿ ಶಿಳ್ಳೆ
ಏ ತಂಗಳೂರು ತಗಡು ರಾಣಿ ಬರ್ತಾಳೆ
ಹುಡುಗರೆಲ್ಲ ತಟ್ಟಿ ಕೈಯ್ಯ ಚಪ್ಪಾಳೆ
ಶಕ್ತಿವಂತ ಗಂಡು ಇದ್ರೆ ಯಾರಾದ್ರು ನಾಯಿ ಬಾಲ ನೇರವಾಗಿ ಮಾಡ್ತೀರ
ವಿದ್ಯೆ ಓದಿದಂತ ಸ್ವಾಮ್ಯೋರು ಕುದುರೆ ಮೊಟ್ಟೆಯೊಂದು ತರ್ತೀರ
ಏ ಮೂರು ಕಣ್ಣಿದ್ರು ತೆಂಗಿನಕಾಯಿ ಎಲ್ಲ ನಮ್ಮಂಗೆ ನೋಡೋದುಂಟ
ನಾಲ್ಕು ಕಾಲಿದ್ರು ಮಲಗೊ ಮಂಚ ಮನುಷ್ಯ ನಡೆದಂಗೆ ನಡೆಯೋದುಂಟ
ಎಲ್ಲರು ಕುರಿಗಳು ಮಂಗನ ಮರಿಗಳು ಫ್ಯೂಸು ಲೂಸಾದ್ರೆ ಅರಳೊ ಮರಳು
ಲೋಕ ಹುಚ್ಚರ ಸಂತೆ ನಾನೆ ಜಾಣೆ ಅಂತೆ
ಲೋಕ ಹುಚ್ಚರ ಸಂತೆ ನಾನೆ ಜಾಣೆ ಅಂತೆ
||ತಂಗಳೂರು ತಗಡು ರಾಣಿ ಬರ್ತಾಳೆ
ಹುಡುಗರೆಲ್ಲ ತಟ್ಟಿ ಕೈಯ್ಯ ಚಪ್ಪಾಳೆ||
ಐಲುಪೈಲು ನಾವು ಎಂದು ನಕ್ತಾರೆ ಹುಚ್ಚರೆಂದು ಚುಚ್ಚು ಮಾತು ಆಡ್ತಾರೆ
ತಾವೆ ಜಾಣರೆಂದು ಮೆರೆಯೋರು ನಡೆಯೊ ಕಾಲು ಹಿಡಿದು ಎಳೆಯೋರು
ನಾಡು ಕಾಡೆಲ್ಲ ಹಾಳಾದರು ನಿದ್ದೆ ಹೊಡೆಯೋನೆ ಪುಣ್ಯಾತ್ಮ
ಯಾರೆ ಉಪವಾಸ ಸತ್ತೋದರು ಮುತ್ತಿ ಜಡಿಯೋನೆ ಪುರುಷೋತ್ತಮ
ದೊರೆಗಳು ಮೆರೆದರು ಕವಿಗಳು ಬರೆದರು ಅವರು ಮಣ್ಣಲ್ಲೆ ಮಣ್ಣಾದರು
ನೀತಿ ಹೇಳೊರಿಲ್ಲ ನಿಜವ ತಿಳಿದೋರೆಲ್ಲ
ನೀತಿ ಹೇಳೊರಿಲ್ಲ ನಿಜವ ತಿಳಿದೋರೆಲ್ಲ
||ತಂಗಳೂರು ತಗಡು ರಾಣಿ ಬರ್ತಾಳೆ
ಹುಡುಗರೆಲ್ಲ ತಟ್ಟಿ ಕೈಯ್ಯ ಚಪ್ಪಾಳೆ
ಹಳೆ ಅಂಬಾರಿ ಸಾರೋಟು ಹೊಡಿ ಜೋರಾಗಿ ಸಲ್ಯೂಟು
ಚೆಳ್ಳ ಪಿಳ್ಳ ಶಿಳ್ಳೆ ಹಾಕಿ ತರಕಲಾಂಡಿ ತಾಳ ಹಾಕಿ
ಏ ಪಿಳ್ಳೆ ಏ ಪಿಳ್ಳೆ ಹೊಡಿ ಶಿಳ್ಳೆ||