ಬಾರಾ.. ಬಳೆಗಾರ ತಾರ… ಮಲ್ಲಾರ ..
ಹೊಂಬಾಳೆ ತುಂಬ್ಯಾಳೆ ಹೊಂಬಾಳೆ ತುಂಬ್ಯಾಳೆ
ಹಸಿರು ಗಾಜು ಬಳೆಯ ತೊಡಿಸಿ ಹಾಡಿ ಹಸೆಯ
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ
ಆ ನಗುವಿಗಾಗಿ ತವರು ಕಾದಿದೆ
ತಂಗಿ ನಿನ್ನ ಕಣ್ಣಲ್ಲೊಂದು ಪುಟ್ಟ ಕನಸ್ಸಿದೆ
ಆ ಕನಸಿಗಾಗಿ ತವರು ಕಾದಿದೆ
ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ...
ತೊಟ್ಟಿಲಿಲ್ಲಿದೆ ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ ….
ನೋಡೆ ಕಾದಿದೆ..
ಎಲ್ಲ ಜನುಮದಲ್ಲಿಯು ನನ್ನ ತಂಗಿ ಆಗು ನೀ..
ಈ ತವರು ಬೆಳಗಲು...
|| ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ
ಆ ನಗುವಿಗಾಗಿ ತವರು ಕಾದಿದೆ…..||
ಅಕ್ಕ ತಂಗಿಯ ಫಲ ಗುಟ್ಟು ಗಂಗೆ ನಾರಿಯ ಬಲ
ಹೆತ್ತುತ್ತಾಳೆ ಚಂದುಳ್ಳ ಚೆಲುವ ರಾಣಿಯ ರಾಣಿಯ
ಸಾವಿರ ನೋವಿರಲಿ ಚೀರುವ ಚಿಂತಿರಲಿ
ತವರೆ ಬೆಚ್ಚಗೆ ಅವರೇ ಮೆಚ್ಚುಗೆ ಮೊದಲ ಹೆರಿಗೆಗೆ...
ಈ ಸೀತಾಫಲ ಈ ನಾರಿ ಫಲ
ಸೋಕು ಮೆಲ್ಲಗೆ ಇಂಥ ಕಂದನ ತಾರೆ ಮಡಿಲಿಗೆ
ನೀನು ಅತ್ತು ಕುಡಿದ ಬೆಳ್ಳಿ ಒಳ್ಳೆ ಇಲ್ಲಿದೆ… ಒಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ..ಕೇಳೆ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ…
ಈ ತವರು ಬೆಳಗಲು…..
|| ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ
ಆ ನಗುವಿಗಾಗಿ ತವರು ಕಾದಿದೆ…..||
ಸೊಂಟಕ್ಕೆ ಬೆಳ್ಳಿ ದಾರದ ಬಳ್ಳಿ ಮಾವ ನೀಡುವ
ಹಾಲಿನ ಖಡ್ಗ ಕಾಲಿನ ಗೆಜ್ಜೆ ಮುಯ್ಯಿ ಮಾಡುವ
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವ….
ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೇ
ಕಣ್ಣ ಕವಿದಿರೋ ಗ್ರಹಣ ಕಳೆಯದೆ
ಈ ಮಕ್ಕಳು ಸಂಧಾನದ ದೇವತೆಗಳು
ಅಪ್ಪ ಎನ್ನುತ ಅಮ್ಮ ಎನ್ನುತ ತಂದು ಬೆಸೆವರು
ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು ವಿಘ್ನಬಾರದು
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿಕಾವುದು
ಕುಂಕುಮ ನಗುವುದು
ತಂಗಿ ನಿನ್ನ ಹೆಸರಲಿ ನಿನ್ನ ಅಣ್ಣನುಸಿರಿದೇ….
ಈ ತವರು ಬೆಳಗಲು .
|| ತಂಗಿ ನಿನ್ನ ಮಗುವಿನಲ್ಲುಇ ಒಂದು ನಗುವಿದೆ
ಆ ನಗುವು ನಮ್ಮ ಅಮ್ಮನಂತಿದೆ
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ
ಈ ತವರಬಳ್ಳಿ ಕಲ್ಪವಾಗಿದೆ
ನೀನು ಆಡಿ ಬೆಳೆದಂತ
ತೊಟ್ಟಿಲಿಲ್ಲಿದೆ..ತೊಟ್ಟಿಲಿಲ್ಲಿದೆ ...
ನಿನ್ನ ಮಗುವ ನಗುವಿನಾಟ
ನೋಡೆ ಕಾದಿದೆ ನೋಡೆ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ
ಈ ತವರು ಬೆಳಗಲು...||