Sanje Kempu Moodithu Lyrics

in Thande Makkalu

Sanje Kempu Moodithu Lyrics

in Thande Makkalu

LYRIC

ಸಂಜೆ ಕೆಂಪು ಮೂಡಿತು,
ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು ,
ಮಲಗು ವೇಳೆ ಆಯಿತು
 
ಸಂಜೆ ಕೆಂಪು ಮೂಡಿತು ,
ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು 
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು…||
 
ಹಕ್ಕಿ ಗೂಡು ಸೇರಿತು 
ಹೂವು ಮೊಗವ ಮುಚ್ಚಿತು
ದೂರ ತಾರೆ ಮಿನುಗಿತು
ನಗರವೆಲ್ಲ ಮಲಗಿತು
ಒರೆಸು ಕಣ್ಣ ಕಂಬನಿ
ಸುರಿಸು ನಿನ್ನ ನಗೆ ಹನಿ
ಇಂದು ನಾಳೆಯ ಸೇರಿತು ,
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು…||
 
ಹೃದಯ ಭಾರವಾಗಿದೆ
ಚಿಂತೆ ನೂರು ಕವಿದಿದೆ
ನಾಳೆ ಆಸೆ ಒಂದಲೇ
ಜೀವವಿನ್ನೂ ಉಳಿದಿದೆ
ನಿದಿರೆ ತಾಯ ತೋಳಲಿ
ನಿನಗೆ ಸುಖವು ಕಾಣಲಿ
ಇಂದು ನಾಳೆಯ ಸೇರಿತು 
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು…||
 
ಯಾರು ಇಲ್ಲಿ ಬರುವರೋ ,
ಯಾರ ದಾರಿ ಕಾವುದೋ
ಪ್ರೀತಿಯಿಂದ ಕರೆಯುವಾ 
ಕೊರಳು ಇನ್ನೂ ಕೇಳದೋ
ಯಾರು ಇಲ್ಲ ಆಸರೆ 
ಕಾವ ನಮ್ಮ ದೇವರೇ
ಇಂದು ನಾಳೆಯ ಸೇರಿತು 
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು
ಇರುಳು ಸೆರಗು ಹಾಸಿತು
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ..||

LYRIC

ಸಂಜೆ ಕೆಂಪು ಮೂಡಿತು,
ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು ,
ಮಲಗು ವೇಳೆ ಆಯಿತು
 
ಸಂಜೆ ಕೆಂಪು ಮೂಡಿತು ,
ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು 
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು…||
 
ಹಕ್ಕಿ ಗೂಡು ಸೇರಿತು 
ಹೂವು ಮೊಗವ ಮುಚ್ಚಿತು
ದೂರ ತಾರೆ ಮಿನುಗಿತು
ನಗರವೆಲ್ಲ ಮಲಗಿತು
ಒರೆಸು ಕಣ್ಣ ಕಂಬನಿ
ಸುರಿಸು ನಿನ್ನ ನಗೆ ಹನಿ
ಇಂದು ನಾಳೆಯ ಸೇರಿತು ,
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು…||
 
ಹೃದಯ ಭಾರವಾಗಿದೆ
ಚಿಂತೆ ನೂರು ಕವಿದಿದೆ
ನಾಳೆ ಆಸೆ ಒಂದಲೇ
ಜೀವವಿನ್ನೂ ಉಳಿದಿದೆ
ನಿದಿರೆ ತಾಯ ತೋಳಲಿ
ನಿನಗೆ ಸುಖವು ಕಾಣಲಿ
ಇಂದು ನಾಳೆಯ ಸೇರಿತು 
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು…||
 
ಯಾರು ಇಲ್ಲಿ ಬರುವರೋ ,
ಯಾರ ದಾರಿ ಕಾವುದೋ
ಪ್ರೀತಿಯಿಂದ ಕರೆಯುವಾ 
ಕೊರಳು ಇನ್ನೂ ಕೇಳದೋ
ಯಾರು ಇಲ್ಲ ಆಸರೆ 
ಕಾವ ನಮ್ಮ ದೇವರೇ
ಇಂದು ನಾಳೆಯ ಸೇರಿತು 
ಮಲಗು ವೇಳೆ ಆಯಿತು
 
|| ಸಂಜೆ ಕೆಂಪು ಮೂಡಿತು
ಇರುಳು ಸೆರಗು ಹಾಸಿತು
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ..||

Sanje Kempu Moodithu song lyrics from Kannada Movie Thande Makkalu starring B Sarojadevi, Jayanthi, Vijayakala, Lyrics penned by R N Jayagopal Sung by P Susheela, Music Composed by G K Venkatesh, film is Directed by Srikanth and film is released on 1971