-
ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ
ಬಾಗಿ ಬಳುಕೊ ಕಾಳಿ ನದಿಯೆ ಹೊರಗೆ ಬಂದ ಭಾಗೀರತಿಯೆ
ಕೋಪ ತಾಪ ಬೇಡ ತಾಯೆ
ನಮ್ಮ ಬಾಳ ಏಳುಬೀಳು ಹಗಲು ಇರುಳ ನೋವು ನಲಿವು
ಎಲ್ಲ ನಿನ್ನ ಕರುಣೆ ತಾಯೆ
ರಂಪಣಿ ಬಲೆಗೆ ಮೀನು ಬೀಳಲಿ
ಬೆಸ್ತರ ಬಾಳು ಏಳ್ಗೆ ಕಾಣಲಿ
ಕಾಪಾಡೆ ತಾಯೆ ಗಂಗಾ ಮಾಯೆ
ದಯೆತೋರೆ ತಾಯೆ ಗಂಗಾ ಮಾಯೆ
||ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ||
ತಂಗಾಳಿ ತಂಪು ತರುವಾಗ ರೋಮಾಂಚ ಮೂಡಿ ಸವಿಸಂಗ
ಹೊಂಬಾಳೆ ತೂಗಿ ನಗುವಾಗ ಆನಂದ ಕಂಡು ರಸಗಂಗ
ಚೈತ್ರದ ಮೋಡಿಗೆ ರಾಗಭಾವ ಸ್ಪಂದನ
ನಲ್ಮೆಯ ಜೋಡಿಗೆ ಪ್ರೀತಿ ಪ್ರೇಮ ಬಂಧನ
ಋತುಮಾನ ಹಾಡಿ ಹೂತೋರಣ ಒಡನಾಟಗೂಡಿ ನಗೆ ನಂದನ
ನಗೆ ನಂದನ
||ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ||
ಹೂವನ್ನು ದುಂಬಿ ಕಂಡಾಗ ಸಂತೋಷ ಸವಿದ ವೈಭೋಗ
ಮುಂಗಾರು ಮೂಡಿ ಬರುವಾಗ ಬಂಗಾರದೂವಿಗೆ ನವರಾಗ
ಪ್ರಾಯವು ಮೂಡಲು ಆಸೆ ಭಾಷೆ ಭಾವನೆ
ಪ್ರೇಮವು ಕಾಡಲು ಒಳಗೆ ನೂರು ಕಾಮನೆ
ಸಂಗಾತಿ ಸಲುಗೆ ಮನಮೋಹನ
ಹೊಸದಾರಿ ಕಂಡು ನವಜೀವನ ನವಜೀವನ
||ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ||
-
ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ
ಬಾಗಿ ಬಳುಕೊ ಕಾಳಿ ನದಿಯೆ ಹೊರಗೆ ಬಂದ ಭಾಗೀರತಿಯೆ
ಕೋಪ ತಾಪ ಬೇಡ ತಾಯೆ
ನಮ್ಮ ಬಾಳ ಏಳುಬೀಳು ಹಗಲು ಇರುಳ ನೋವು ನಲಿವು
ಎಲ್ಲ ನಿನ್ನ ಕರುಣೆ ತಾಯೆ
ರಂಪಣಿ ಬಲೆಗೆ ಮೀನು ಬೀಳಲಿ
ಬೆಸ್ತರ ಬಾಳು ಏಳ್ಗೆ ಕಾಣಲಿ
ಕಾಪಾಡೆ ತಾಯೆ ಗಂಗಾ ಮಾಯೆ
ದಯೆತೋರೆ ತಾಯೆ ಗಂಗಾ ಮಾಯೆ
||ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ||
ತಂಗಾಳಿ ತಂಪು ತರುವಾಗ ರೋಮಾಂಚ ಮೂಡಿ ಸವಿಸಂಗ
ಹೊಂಬಾಳೆ ತೂಗಿ ನಗುವಾಗ ಆನಂದ ಕಂಡು ರಸಗಂಗ
ಚೈತ್ರದ ಮೋಡಿಗೆ ರಾಗಭಾವ ಸ್ಪಂದನ
ನಲ್ಮೆಯ ಜೋಡಿಗೆ ಪ್ರೀತಿ ಪ್ರೇಮ ಬಂಧನ
ಋತುಮಾನ ಹಾಡಿ ಹೂತೋರಣ ಒಡನಾಟಗೂಡಿ ನಗೆ ನಂದನ
ನಗೆ ನಂದನ
||ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ||
ಹೂವನ್ನು ದುಂಬಿ ಕಂಡಾಗ ಸಂತೋಷ ಸವಿದ ವೈಭೋಗ
ಮುಂಗಾರು ಮೂಡಿ ಬರುವಾಗ ಬಂಗಾರದೂವಿಗೆ ನವರಾಗ
ಪ್ರಾಯವು ಮೂಡಲು ಆಸೆ ಭಾಷೆ ಭಾವನೆ
ಪ್ರೇಮವು ಕಾಡಲು ಒಳಗೆ ನೂರು ಕಾಮನೆ
ಸಂಗಾತಿ ಸಲುಗೆ ಮನಮೋಹನ
ಹೊಸದಾರಿ ಕಂಡು ನವಜೀವನ ನವಜೀವನ
||ಮಾ ತಾಯಿ ಗಂಗಾ ಮಾಯಿ
ಕೈ ಮುಗ್ದು ಬಂದೆವು ತಾಯಿ ಎಲ್ಲರನು ನೀನು ಕಾಯಿ
ಗಂಗಮ್ಮ ನಮ್ಮಮ್ಮ ಕಣ್ತೆರೆದು ನೋಡಮ್ಮ||