Elli Ramano Alli Seetheyu Lyrics

in Sidilu

Video:

LYRIC

ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು
ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು
ನೀನೆಲ್ಲಿರುವೆಯೋ ಅಲ್ಲೆ ನಾನು
ನನ್ನ ಪ್ರಾಣವೇ ನೀನು….
 
|| ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು….||
 
ಕಲ್ಲೆ ಇರಲಿ ಮುಳ್ಳೆ ಇರಲಿ
ನಗುತಲಿ ಬರುವೇ ಜೊತೆಯಾಗಿ
ಭಯವೇಕೆನಗೆ ಬದುಕಲಿ ನೀನು
ಬಳಿಯಲಿ ಇರಲೂ ನನಗಾಗಿ
ನಿನ್ನ ಗುರಿಯೇ ನನ್ನ ಗುರಿಯು
ನಿನ್ನ ಗುರಿಯೇ ನನ್ನ ಗುರಿಯು
ಬಾಳುವೇ ನಾ ನಿನಗಾಗಿ…
 
|| ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು
ನೀನೆಲ್ಲಿರುವೆಯೋ ಅಲ್ಲೆ ನಾನು
ನನ್ನ ಪ್ರಾಣವೇ ನೀನು….
 
ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು….||
 
ನಲ್ಲೆ ನಿನ್ನ ನುಡಿಯೇ ಚೆನ್ನ
ಕೇಳುತ ಇಂದು ಬೆರಗಾದೆ…
ಅರಿತು ನಿನ್ನ ಮನವ ಚಿನ್ನ
ತುಂಬಿದ ಪ್ರೀತಿಗೆ ಮರುಳಾದೆ
ಇನ್ನು ಎಂದೂ ಬಿಡೆನು ನಿನ್ನ
ಇನ್ನು ಎಂದೂ ಬಿಡೆನು ನಿನ್ನ
ನನ್ನಲಿ ನೀ ಒಂದಾದೆ…
 
|| ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು
ನೀನೆಲ್ಲಿರುವೆಯೋ ಅಲ್ಲೆ ನಾನು
ನನ್ನ ಪ್ರಾಣವೇ ನೀನು….
 
ಎಲ್ಲಿ ರಾಮನೋ ಅಲ್ಲಿ ಸೀತೆಯು
ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯು….||

Elli Ramano Alli Seetheyu song lyrics from Kannada Movie Sidilu starring Ambarish, Geetha, Malathi, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by B Subba Rao and film is released on 1984