ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
ನಿನ್ನ ಹೆಸರೇ ನನ್ನ ದಿನಚರಿ ಪುಟ ತುಂಬ
ಅದು ಮನಸ್ಸಿನ ಪ್ರತಿಬಿಂಬ
ಅಗಲಿ ನಿನ್ನ ಉಳಿದೆ ಹೇಗೆ
ಅದೇ ನೋಡು ಆಶ್ಚರ್ಯ
||ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ||
ನಾನು ಗುನುಗೊ ಹಾಡಿನಲ್ಲಿ
ಬಂತು ನೋಡು ನಿಂದೆ ಸಾಲು
ಖಾಸಾ ನನ್ನ ಆಸೆಯಲ್ಲಿ
ಎಂದಿಗು ನೀ ಶಾಮೀಲು
ಸಂಗೀತ ಮಂಕಾಯಿತು ಸಂಗಾತಿ ನೀನಿಲ್ಲದೆ
ಗಾಳಿಯು ಬೀಸದು ನೀನು ಬರದೆ
ಆದರೂನು ನಗುವೆ ನಾನು
ಅದೇ ನೋಡು ಆಶ್ಚರ್ಯ
||ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ||
ಹೋದಲ್ಲೆಲ್ಲ ನನ್ನ ಪಕ್ಕ ಖಾಲಿ ಖಾಲಿ ನಿನ್ನ ಜಾಗ
ಅಪ್ಪಿ ತಪ್ಪಿ ಸಿಕ್ಕಬಹುದು ಎನ್ನುವ ಆಸೆ ಆದಾಗ
ನನ್ನನ್ನು ಕಾಪಾಡುವ ರಹಸ್ಯ ನೀನಲ್ಲವೆ
ಸುಳ್ಳೆ ನೀ ಸಿಕ್ಕರು ನಂಬಿಬಿಡುವೆ
ದೂರವಿದ್ದು ಸನಿಹ ಬಂದೆ
ಅದೇ ನೋಡು ಆಶ್ಚರ್ಯ
||ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ||
ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
ನಿನ್ನ ಹೆಸರೇ ನನ್ನ ದಿನಚರಿ ಪುಟ ತುಂಬ
ಅದು ಮನಸ್ಸಿನ ಪ್ರತಿಬಿಂಬ
ಅಗಲಿ ನಿನ್ನ ಉಳಿದೆ ಹೇಗೆ
ಅದೇ ನೋಡು ಆಶ್ಚರ್ಯ
||ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ||
ನಾನು ಗುನುಗೊ ಹಾಡಿನಲ್ಲಿ
ಬಂತು ನೋಡು ನಿಂದೆ ಸಾಲು
ಖಾಸಾ ನನ್ನ ಆಸೆಯಲ್ಲಿ
ಎಂದಿಗು ನೀ ಶಾಮೀಲು
ಸಂಗೀತ ಮಂಕಾಯಿತು ಸಂಗಾತಿ ನೀನಿಲ್ಲದೆ
ಗಾಳಿಯು ಬೀಸದು ನೀನು ಬರದೆ
ಆದರೂನು ನಗುವೆ ನಾನು
ಅದೇ ನೋಡು ಆಶ್ಚರ್ಯ
||ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ||
ಹೋದಲ್ಲೆಲ್ಲ ನನ್ನ ಪಕ್ಕ ಖಾಲಿ ಖಾಲಿ ನಿನ್ನ ಜಾಗ
ಅಪ್ಪಿ ತಪ್ಪಿ ಸಿಕ್ಕಬಹುದು ಎನ್ನುವ ಆಸೆ ಆದಾಗ
ನನ್ನನ್ನು ಕಾಪಾಡುವ ರಹಸ್ಯ ನೀನಲ್ಲವೆ
ಸುಳ್ಳೆ ನೀ ಸಿಕ್ಕರು ನಂಬಿಬಿಡುವೆ
ದೂರವಿದ್ದು ಸನಿಹ ಬಂದೆ
ಅದೇ ನೋಡು ಆಶ್ಚರ್ಯ
||ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ||
Ninna Nenape song lyrics from Kannada Movie Siddhartha starring Vinay Rajkumar, Apoorva Arora, Sadhu Kokila, Lyrics penned by Jayanth Kaikini Sung by Sonu Nigam, Music Composed by V Harikrishna, film is Directed by Prakash Jayaram and film is released on 2015