Ella Manasina Sanchara Lyrics

in Shreerasthu Shubhamasthu

Video:

LYRIC

ಎಲ್ಲ ಮನಸಿನ ಸಂಚಾರ
ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಾಳೆ
 
ಎಲ್ಲ ಕನಸಿನ ಸಂಚಾರ 
ಅಂತರಂಗದ ಅಲೆಮೇಲೆ
ಹಾಡೋಣ ಸುವ್ವಾಲೆ

ನಮ್ಮ ಹಾಡು (ಓ ಓ ಓ ಓ ಓ)
ನಮ್ಮ ಪಾಡು ( ಆ ಆ ಆ ಆ )  
ನಮ್ಮ ನೋವು ( ಓ ಓ ಓ ಓ ಓ)
ನಮ್ಮ ನಲಿವು ( ಆ ಆ ಆ ಆ )   
ಪ್ರೀತಿ ಎದೆ ಮೇಲೆ  
 
|| ಎಲ್ಲ ಮನಸಿನ ಸಂಚಾರ
ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಾಳೆ ||
 
ನಗುವುದೆ ಸರಸಗಳಾ ತರಂಗ 
ಅಳುವುದೆ ವಿರಸಗಳಾ ತರಂಗ
ಭಾವನೆಗಳೆ ಬಾಳ ತುಂಬುವಾ ತರಂಗ

ನೋಟವೆ ಸೆಳೆತಗಳಾ ತರಂಗ 
ಭೇಟಿಯೆ ಬೆಸುಗೆಗಳಾ ತರಂಗ
ಕಲ್ಪನೆಗಳೆ ಜೀವ ತುಂಬುವ ತರಂಗ
ತಂದಾನನಾ. . .  
ದೇಹಕೆ ಮೋಹ ತರಂಗ 
ಪ್ರೇಮಕೆ ಸ್ಪರ್ಶ ತರಂಗ  …..ಸೋಜಿಗನಾ
ಈ ಸ್ವಭಾವ (ಓ ಓ ಓ ಓ ಓ)
ಈ ವಿಭಾವ( ಆ ಆ ಆ ಆ )    
ಈ ಪ್ರಸಂಗ  (ಓ ಓ ಓ ಓ ಓ)
ಅಂಗ ಸಂಗ ( ಆ ಆ ಆ ಆ )   
ತರಂಗಗಳ ಲೀಲೆ

|| ಎಲ್ಲ ಮನಸಿನ ಸಂಚಾರ 
ತನ್ನ ತರಂಗಗಳ ಮೇಲೆ
 ಹಾಕೋಣ ಚಪ್ಪಾಳೆ ||
 
ದಿನಗಳು ಹಗಲಿರುಳಾ ತರಂಗ
ಋತುಗಳು ಗ್ರಹಗತಿಯಾ ತರಂಗ
ಹಾಗು ಹೋಗೊ ಕಾಲನೂಕುವ ತರಂಗ
ತಂದಾನ ನಾ. . .
ಆತ್ಮವು ಜನ್ಮಗಳ ತರಂಗ
ಲೋಕವು ಯುಗದಾ ತರಂಗ
ಪಂಚಪ್ರಾಣವೆ ಪಂಚಭೂತದ ತರಂಗ
ತಂದಾನ ನಾ. . .
ಗುಣಗಳೆ ವಂಶತರಂಗ. . .
ಕಲೆಗಳೆ ಪುಣ್ಯತರಂಗ. ..ಸೋಜಿಗಾನಾ. . .
 
ಈ ಸಂಬಂಧ (ಓ ಓ ಓ ಓ ಓ)
ಈ ಅನುಬಂಧ ( ಆ ಆ ಆ ಆ )
ಈ ಸಂಸಾರ (ಓ ಓ ಓ ಓ ಓ)
ಈ ಸಂಸ್ಕಾರ ( ಆ ಆ ಆ ಆ )
ತರಂಗಗಳ ಲೀಲೆ. . .
 
|| ಎಲ್ಲ ಮನಸಿನ ಸಂಚಾರ 
ತನ್ನ ತರಂಗಗಳ ಮೇಲೆ
 ಹಾಕೋಣ ಚಪ್ಪಾಳೆ
ಎಲ್ಲ ಕನಸಿನ ಸಂಚಾರ 
ಅಂತರಂಗದ ಅಲೆಮೇಲೆ
ಹಾಡೋಣ ಸುವ್ವಾಲೆ ||

Ella Manasina Sanchara song lyrics from Kannada Movie Shreerasthu Shubhamasthu starring Ramesh Aravind, Anu Prabhakar, Naveen Krishna, Lyrics penned by K Kalyan Sung by L N Shastry, Pallavi Mysore Jenny Bhat, Music Composed by K Kalyan, film is Directed by Seetharam Karanth and film is released on 2000