Nambide Ninna Lyrics

in Shiva Kanye

LYRIC

ಆಲಿಸೋ ಧರೆಯ ಪಾಲಿಸೋ ಗದೆಯ
ಆರ್ತಳಾಗಿ ನಿನ್ನನೇ ನಂಬಿದೆ…
ಪ್ರಾರ್ಥನೆಗೆ ಕಿವಿಗೊಡೋ ಸದಾಶಿವ
ಸದಾಶಿವ….ಸದಾಶಿವ….
 
ನಂಬಿದೆ ನಿನ್ನ ಪಾದ ಕಮಲ
ಬೆಂಬಿಡದೆ ಕಾಯೋ ಗಂಗಾಧರ
ನಂಬಿದೆ ನಿನ್ನ ಪಾದ ಕಮಲ
ಬೆಂಬಿಡದೆ ಕಾಯೋ ಗಂಗಾಧರ
ಗಂಗಾಧರ….ಗಂಗಾಧರ….
 
ಭಕ್ತಿಗೆ ಒಲಿಯದಿರೆ ಭಕ್ತಳ ಅಪೇಕ್ಷೆ
ನೀಡದೆ ಕಾಡದಿರೋ ಏಕಿಂತ ಪರೀಕ್ಷೆ
ಭಕ್ತಿಗೆ ಒಲಿಯದಿರೆ ಭಕ್ತಳ ಅಪೇಕ್ಷೆ
ನೀಡದೆ ಕಾಡದಿರೋ ಏಕಿಂತ ಪರೀಕ್ಷೆ
ನನ್ನ ಬೇಡಿಕೆ ಕಿವಿಗೆ ಬೀಳಲಿ…
ನನ್ನ ಅಭಿಲಾಷೆ ಕೈಗೂಡಲಿ…
ನನ್ನ ಬೇಡಿಕೆ ಕಿವಿಗೆ ಬೀಳಲಿ…
ನನ್ನ ಅಭಿಲಾಷೆ ಕೈಗೂಡಲಿ…
ಪಾಹಿಮಾಂ ಪಾಹಿಮಾಂ ಪತಿ ಭಿಕ್ಷಾಂ
ದೇಹಿಮಾಂ ದೇಹಿಮಾಂ ಪತಿ ಭಿಕ್ಷಾಂ
 
|| ನಂಬಿದೆ ನಿನ್ನ ಪಾದ ಕಮಲ
ಬೆಂಬಿಡದೆ ಕಾಯೋ ಗಂಗಾಧರ
ಗಂಗಾಧರ….ಗಂಗಾಧರ….
ಗಂಗಾಧರ….ಗಂಗಾಧರ…..||
 
ನನಗೆ ವರವ ಕರುಣಿಸದೆ
ಎದೆಯ ಉರಿಯ ಸಹಿಸದೆ
ಕೂಗಿ ಸಿಡಿಲು ಮಳೆಯ ಕರೆದು
ಭೂಮಿ ಹೊಡೆದು ಹೋಗಲಿ
ಶಕಿ ಸೂರ್ಯರು ಅಡಗಲಿ
ಬ್ರಹ್ಮಾಂಡವು ಅಳಿಯಲಿ
ಶಿವಶಂಕರ ಅಭಯಂಕರ
ಶಂಕರ…ಶಂಕರ….
ಪಾಹಿಮಾಂ…ಪಾಹಿಮಾಂ…
ಶಂಕರ… ಶಂಕರ….
ಪಾಹಿಮಾಂ ಪಾಹಿಮಾಂ
ಶಂಕರ… ಶಂಕರ….
ಪಾಹಿಮಾಂ ಪಾಹಿಮಾಂ…

Nambide Ninna song lyrics from Kannada Movie Shiva Kanye starring Madhavi, Roopadevi, Ramakrishna, Lyrics penned by Hunasuru Krishna Murthy Sung by P Susheela, Music Composed by T G Lingappa, film is Directed by Hunasuru Krishna Murthy and film is released on 1984