Kannada Naadina Rannada Rathuna Lyrics

ಕನ್ನಡ ನಾಡಿನ ರನ್ನದ ರತುನ Lyrics

in Sharavegada Saradara

in ಶರವೇಗದ ಸರದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ

ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ
 
ಒಂದಾನೊಂದು ಕಾಲದಲ್ಲಿ ಮಲೆನಾಡಿನ ಮಡಿಲಿನಲಿ 
ಅಂಗಡಿ ಊರಿತ್ತು ಊರಿಗೆ ಚೆಲುವಿನ ಕಳೆಯಿತ್ತು 
ಬೆಟ್ಟ ಗುಡ್ಡ ಸಾಲಿನಲ್ಲಿ ಹಸಿರಾಗಿರುವ ಬೀಡಿನಲ್ಲಿ
ಬನಸಿರಿ ಮೆರೆದಿತ್ತು ಅಲ್ಲಿ ಶಾಂತಿಯು ನೆಲೆಸಿತ್ತು 
ಪ್ರಕೃತಿಯೇ ಹೆಣ್ಣಾಗಿ ಮನುಜಗೆ ಕಣ್ಣಾಗಿ
ಧರ್ಮವೇ ಮನೆಯಾಗಿ ಮೌನವೇ ಮಾತಾಗಿ
ಅಕ್ಕರೆ ತುಂಬಿದ ಅಂಗಡಿ ಗ್ರಾಮದಿ ಆಶ್ರಮವೊಂದಿತ್ತು,
ಅದರೊಳು ಗುರುಕುಲ ನಡೆದಿತ್ತು 
 
|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||
 
ವೃಕ್ಷರಾಶಿ ನೆರಳಿನಲಿ ಸುದತ್ತಚಾರ್ಯರ ಸನ್ನಿಧಿಯಲ್ಲಿ  
ಪ್ರವಚನ ಸಾಗಿತ್ತು, ಧರ್ಮದ ಪ್ರವಚನ ಸಾಗಿತ್ತು 
ವಾಸಂತಿಕೆಯ ದೇಗುಲದಲ್ಲಿ ಶ್ರದ್ಧೆ ಭಕ್ತಿ ಸಂಗಮದಲ್ಲಿ 
ಪೂಜೆಯು ನಡೆದಿತ್ತು ಸಳನ ಪೂಜೆಯು ನಡೆದಿತ್ತು 
ಒಮ್ಮೆಗೆ ಅಬ್ಬರದ ಸದ್ದೊಂದು ಕೇಳಿಸಲು 
ಅಲ್ಲಿದ್ದ ಜನರೆಲ್ಲಅಲ್ಲೋಲ ಕಲ್ಲೋಲ  
ಹೊಂಬಿಸಿಲೇರುವ ಸುಂದರ ಸಮಯದಿ 
ಬಂದಿತು ಹುಲಿಯೊಂದು
ಘರ್ಜಿಸಿ ಗುಡುಗಿತು ಹುಲಿಯೊಂದು 
 
|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||
 
ಸುದತ್ತಚಾರ್ಯರು ಕಂಚಿನ ಕಂಠದಿ
ಸಳನನು ಕೂಗಿ ಕರೆದರು
ಆಗ ಆಜ್ಞೆಯು ಮೊಳಗಿತ್ತು,
ಗುರುಗಳ ಆಜ್ಞೆಯು ಮೊಳಗಿತ್ತು 
ವೀರಾವೇಶದ ಶೌರ್ಯದಲ್ಲಿ
ಶಿಷ್ಯನು ಸೆಣಸಿದ  ರೋಷದಲ್ಲಿ 
ಹುಲಿಯದು ಕೆರಳಿತ್ತು
ಹಸಿದಿಹ ಹುಲಿಯದು  ಕೆರಳಿತ್ತು.. 
ಹೊಯ್... ಸಳ  ಹೊಯ್... ಸಳ  
ಹೊಯ್... ಸಳ  ಹೊಯ್... ಸಳ  
ಆಗ ಸಳ ಒರಟಾಗಿ ಗಂಡುಗಲಿ ತಾನಾಗಿ
ಧೈರ್ಯದಿ ಹೋರಾಡಿ ಗೆದ್ದನು ಮುಂದಾಗಿ 
ಊರಿನ ವೀರನ ಮೆಚ್ಚುತ ಜನತೆ ಸಳನನು ಹರಸಿತ್ತು
ಕೆಚ್ಚೆದೆ ಸಳನನು ಹರಿಸಿತ್ತು 
 
|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||
 
ಹುಲಿಯನು ಕೊಂದ ವೀರನನ್ನುಗುರುಗಳು ಆಗ ಹರಿಸಿರಲು 
ಕಟ್ಟಿದ ಸಳನು ರಾಜ್ಯವನ್ನು ಅನುಪಮ ಹೊಯ್ಸಳ ರಾಜ್ಯವನ್ನು 
ಹುಲಿಯನ್ನು ಕೊಲ್ಲುವ ಲಾಂಛನ ಹಿಡಿದು
ಗದ್ದುಗೆ ಏರಿ ಆಳ್ವಿಕೆ ಮೆರೆದು ಚರಿತ್ರೆ ಮೊದಲಾಯ್ತು
ಹೊಯ್ಸಳ ಚರಿತ್ರೆ ಮೊದಲಾಯ್ತು 
ಸಾಹಿತ್ಯ ತೇರಾಗಿ ಶಿಲ್ಪಕಲೆ ನೂರಾಗಿ
ಸಂಗೀತ ಹೊನಲಾಗಿ ಸಂಸ್ಕೃತಿ ತೌರಾಗಿ  
ವೈಭವ ಸಾರುವ ಹೊಯ್ಸಳ ವಂಶ ನಾಡನು ಬೆಳಗಿತ್ತು
ಕನ್ನಡ ನಾಡನು ಬೆಳಗಿತ್ತು

|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||

ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ

ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ
 
ಒಂದಾನೊಂದು ಕಾಲದಲ್ಲಿ ಮಲೆನಾಡಿನ ಮಡಿಲಿನಲಿ 
ಅಂಗಡಿ ಊರಿತ್ತು ಊರಿಗೆ ಚೆಲುವಿನ ಕಳೆಯಿತ್ತು 
ಬೆಟ್ಟ ಗುಡ್ಡ ಸಾಲಿನಲ್ಲಿ ಹಸಿರಾಗಿರುವ ಬೀಡಿನಲ್ಲಿ
ಬನಸಿರಿ ಮೆರೆದಿತ್ತು ಅಲ್ಲಿ ಶಾಂತಿಯು ನೆಲೆಸಿತ್ತು 
ಪ್ರಕೃತಿಯೇ ಹೆಣ್ಣಾಗಿ ಮನುಜಗೆ ಕಣ್ಣಾಗಿ
ಧರ್ಮವೇ ಮನೆಯಾಗಿ ಮೌನವೇ ಮಾತಾಗಿ
ಅಕ್ಕರೆ ತುಂಬಿದ ಅಂಗಡಿ ಗ್ರಾಮದಿ ಆಶ್ರಮವೊಂದಿತ್ತು,
ಅದರೊಳು ಗುರುಕುಲ ನಡೆದಿತ್ತು 
 
|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||
 
ವೃಕ್ಷರಾಶಿ ನೆರಳಿನಲಿ ಸುದತ್ತಚಾರ್ಯರ ಸನ್ನಿಧಿಯಲ್ಲಿ  
ಪ್ರವಚನ ಸಾಗಿತ್ತು, ಧರ್ಮದ ಪ್ರವಚನ ಸಾಗಿತ್ತು 
ವಾಸಂತಿಕೆಯ ದೇಗುಲದಲ್ಲಿ ಶ್ರದ್ಧೆ ಭಕ್ತಿ ಸಂಗಮದಲ್ಲಿ 
ಪೂಜೆಯು ನಡೆದಿತ್ತು ಸಳನ ಪೂಜೆಯು ನಡೆದಿತ್ತು 
ಒಮ್ಮೆಗೆ ಅಬ್ಬರದ ಸದ್ದೊಂದು ಕೇಳಿಸಲು 
ಅಲ್ಲಿದ್ದ ಜನರೆಲ್ಲಅಲ್ಲೋಲ ಕಲ್ಲೋಲ  
ಹೊಂಬಿಸಿಲೇರುವ ಸುಂದರ ಸಮಯದಿ 
ಬಂದಿತು ಹುಲಿಯೊಂದು
ಘರ್ಜಿಸಿ ಗುಡುಗಿತು ಹುಲಿಯೊಂದು 
 
|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||
 
ಸುದತ್ತಚಾರ್ಯರು ಕಂಚಿನ ಕಂಠದಿ
ಸಳನನು ಕೂಗಿ ಕರೆದರು
ಆಗ ಆಜ್ಞೆಯು ಮೊಳಗಿತ್ತು,
ಗುರುಗಳ ಆಜ್ಞೆಯು ಮೊಳಗಿತ್ತು 
ವೀರಾವೇಶದ ಶೌರ್ಯದಲ್ಲಿ
ಶಿಷ್ಯನು ಸೆಣಸಿದ  ರೋಷದಲ್ಲಿ 
ಹುಲಿಯದು ಕೆರಳಿತ್ತು
ಹಸಿದಿಹ ಹುಲಿಯದು  ಕೆರಳಿತ್ತು.. 
ಹೊಯ್... ಸಳ  ಹೊಯ್... ಸಳ  
ಹೊಯ್... ಸಳ  ಹೊಯ್... ಸಳ  
ಆಗ ಸಳ ಒರಟಾಗಿ ಗಂಡುಗಲಿ ತಾನಾಗಿ
ಧೈರ್ಯದಿ ಹೋರಾಡಿ ಗೆದ್ದನು ಮುಂದಾಗಿ 
ಊರಿನ ವೀರನ ಮೆಚ್ಚುತ ಜನತೆ ಸಳನನು ಹರಸಿತ್ತು
ಕೆಚ್ಚೆದೆ ಸಳನನು ಹರಿಸಿತ್ತು 
 
|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||
 
ಹುಲಿಯನು ಕೊಂದ ವೀರನನ್ನುಗುರುಗಳು ಆಗ ಹರಿಸಿರಲು 
ಕಟ್ಟಿದ ಸಳನು ರಾಜ್ಯವನ್ನು ಅನುಪಮ ಹೊಯ್ಸಳ ರಾಜ್ಯವನ್ನು 
ಹುಲಿಯನ್ನು ಕೊಲ್ಲುವ ಲಾಂಛನ ಹಿಡಿದು
ಗದ್ದುಗೆ ಏರಿ ಆಳ್ವಿಕೆ ಮೆರೆದು ಚರಿತ್ರೆ ಮೊದಲಾಯ್ತು
ಹೊಯ್ಸಳ ಚರಿತ್ರೆ ಮೊದಲಾಯ್ತು 
ಸಾಹಿತ್ಯ ತೇರಾಗಿ ಶಿಲ್ಪಕಲೆ ನೂರಾಗಿ
ಸಂಗೀತ ಹೊನಲಾಗಿ ಸಂಸ್ಕೃತಿ ತೌರಾಗಿ  
ವೈಭವ ಸಾರುವ ಹೊಯ್ಸಳ ವಂಶ ನಾಡನು ಬೆಳಗಿತ್ತು
ಕನ್ನಡ ನಾಡನು ಬೆಳಗಿತ್ತು

|| ಕನ್ನಡ ನಾಡಿನ ರನ್ನದ ರತುನ
ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ
ನಾಡನು ಕಟ್ಟಿದ ಕಥೆಯನ್ನ||

Kannada Naadina Rannada Rathuna song lyrics from Kannada Movie Sharavegada Saradara starring Kumar Bangarappa, Ashwini Bhave, Poonam Javeri, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ