Samaagama Manorama Lyrics

in Seetheyalla Savithri

LYRIC

ಸಮಾಗಮ ಮನೋರಮಾ
ಮಧುರ ಮಿಲನ ಇದೆ ಪ್ರೇಮ
ಸಮಾಗಮ ಮನೋರಮಾ
ಮಧುರ ಮಿಲನ ಇದೆ ಪ್ರೇಮ
 
ಪ್ರೇಮ ಗಗನದ ಆಶಾ ತಾರೆ
ಭೂಮಿಗಿಳಿದು ಕೈ ಸೇರೆ
ಪ್ರೇಮ ಗಗನದ ಆಶಾ ತಾರೆ
ಭೂಮಿಗಿಳಿದು ಕೈ ಸೇರೆ
ಒಲವಿನ ಸವಿಯಾ ಮನಸಾರೆ
ಹೀರಿ ನಲಿವ ಬಾ ಬಾರೆ..
 
|| ಸಮಾಗಮ ಮನೋರಮಾ
ಮಧುರ ಮಿಲನ ಇದೆ ಪ್ರೇಮ..||
 
ಮಂಗಳ ಸೂತ್ರದ ಮೋಹಿನಿ ಬಾರೆ
ಮಾಡಿದೆ ನೀನೇ ಮನಸಿನ ಸೂರೆ
ಮಂಗಳ ಸೂತ್ರದ ಮೋಹಿನಿ ಬಾರೆ
ಮಾಡಿದೆ ನೀನೇ ಮನಸಿನ ಸೂರೆ
ಚಂದಿರ ತಂದಿಹ ಅಮೃತಧಾರೆ
ತಿಂಗಳ ಬೆಳಕೇ ನೀ ನೀರೆ…..
 
|| ಸಮಾಗಮ ಮನೋರಮಾ
ಮಧುರ ಮಿಲನ ಇದೆ ಪ್ರೇಮ..||
 
ಬಂಧನ ತಂದಿಹ ಅನುಬಂಧ ಮಾಲೆ
ಬಾಳಿನ ಸಮರಸ ನೀಡಿದ ಮೇಲೆ
ಬಂಧನ ತಂದಿಹ ಅನುಬಂಧ ಮಾಲೆ
ಬಾಳಿನ ಸಮರಸ ನೀಡಿದ ಮೇಲೆ
ಮೋಜಿನ ಮೋಹದ ತೂಗುಯ್ಯಾಲೆ
ಸಾಗುತ ತಂದಿದೆ ರಸಲೀಲೆ
 
|| ಸಮಾಗಮ ಮನೋರಮಾ
ಮಧುರ ಮಿಲನ ಇದೆ ಪ್ರೇಮ
ಹೂಂ ಹೂಂ ಹೂಂ ಹೂಂ ಹೂಂ…||

Samaagama Manorama song lyrics from Kannada Movie Seetheyalla Savithri starring Vishnuvardhan, Jayalakshmi, Udayachandrika, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by Vadiraj and film is released on 1973