ಆ ಆ ಆ ಆ…..ಆ ಆ ಆ ಆ….
ಹೇ….ರಾ…..ನಾ….ಆ ಆ…..
ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ……
ಆ ಸುಳ್ಳಲೇ ನಾ ಬಾಳ್ವೆ
ಆ ಸುಳ್ಳಲೇ ನಾ ಬಾಳ್ವೆ
ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ….. ನಾ ಬಾಳ್ವೆ
ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ…. ನಾ ಬಾಳ್ವೆ
ಹೂವಲಿ ಅಡಗಿದ ಗಂಧ
ಅದು ಗಾಳಿಗೆ ಸೇರಲು ಚೆಂದ
ಇದು ತಾನೆ ಅನುಬಂಧ
ಅನುರಾಗದ…. ಸಂಬಂಧ
ಚೆಲುವಿರೆ ಒಲವಿರೆ ಹಾಲು ಸಕ್ಕರೆಯು
ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ...
ಬೆಣ್ಣೆಯು ಸುಣ್ಣವು ಬಣ್ಣ ಒಂದೇನೆ
ಕಾಣೋ ಕಂಗಳು ಒಂದೇನೇ
ಆದರೆ ಗುಣವು ಬೇರೇನೇ...
|| ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ….. ನಾ ಬಾಳ್ವೆ ….||
ಜಕ್ಕಣ್ಣನ ಶಿಲ್ಪದ……ಆ ಆ ಆ
ಓ ಓ ಓ ಓ ಓ ಓ
ಜಕ್ಕಣ್ಣನ ಶಿಲ್ಪದ
ಅಂದವ ನಿನ್ನಲಿ ತಂದಾನೋ
ಚಂದವ ನಿನ್ನಲಿ ತಂದಾನೋ
ಹಾಲು ಬೆಳದಿಂಗಳಿನ
ಬಣ್ಣವ ತಂದಾನೋ ..ಓ..ಓ...ಓ
ಜೇನು ಜೇನು ಕೇಳಿ
ಅಧರದಿ ಮಧುವನಿತ್ತು
ಮಿಂಚು ಬಳ್ಳಿಯ ಕೇಳಿ
ಕೈ ರೇಖೆ ತಂದಾನೋ
ಮುಂಗಾರು ತರುವ ಮೋಡ
ಸಹ್ಯಾದ್ರಿ ದಾಟಿ ಬರುತ
ತಂದ ಮುತ್ತು ಮುತ್ತು ಹನಿಯೇ
ನಿನ್ನಯ ನಗುವಾಯ್ತೋ
ಏಕೋ.... ಹೆಣ್ಣೇ……..
ಮನಸು ಕಲ್ಲಲ್ಲಿ ಮಾಡಿಬಿಟ್ಟೇ
ನೀನು….. ಒಲಿದು……
ಆ ಕಲ್ಲು ಕರಗುವುದುಂಟೇನು...
|| ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ….. ನಾ ಬಾಳ್ವೆ ….||
ಮುತ್ತಣ್ಣನ ಕಾವ್ಯದಾ
ಸರಸವ ನಿನ್ನಲಿ ತಂದಾನೋ
ಸೊಗಸನು ನಿನ್ನಲಿ ತಂದಾನೋ
ಮೈಸೂರು ಮಲ್ಲೆ
ಮುಡಿಗೆ ಮುಡಿಸಿದನೋ
ಆ ಆ ಆ ಆ . ..ತುಂಗಾಭದ್ರೆ ಕೇಳಿ
ನಿನಗಿಂದು ತಂಪನು ಇಟ್ಟ
ಜೋಗದ ಧಾರೆಯಿಂದ
ಈ ಜಡೆಯ ತಂದಿಟ್ಟ….
ಈ ಕನ್ನಡದ ನಾಡ
ಶ್ರೀಗಂಧದ ಕಾಡು ತರುವ
ಗಾಳಿ ತರುವ ತಂಪು
ನಿನಗೆ ಒಡಲ ಉಸಿರಾಯ್ತು
ಏಕೋ.... ಹೆಣ್ಣೇ……
ಮನಸು ಕಲ್ಲಲ್ಲಿ ಮಾಡಿಬಿಟ್ಟೇ
ನೀನು…… ಒಲಿದು…..
ಆ ಕಲ್ಲು ಕರಗುವುದುಂಟೇನು...
|| ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ….. ನಾ ಬಾಳ್ವೆ
ಒಂದು ಸುಳ್ಳಾದರೂ ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ….. ನಾ ಬಾಳುವೆ…
ಆ ಒಂದೆ ಸುಳ್ಳಲ್ಲೇ…
ಆ ಒಂದೆ ಸುಳ್ಳಲ್ಲೇ. ..
ನಾ ಬಾಳುವೇ…..ನಾ ಬಾ…..ಳುವೇ. . .
ಆ ಸುಳ್ಳು….ಆ ಸುಳ್ಳು….
ಆ ಸುಳ್ಳು….ಆ ಸುಳ್ಳು….
ಒಂದೆ ಸುಳ್ಳಲ್ಲೇ…..
ನಾ ಬಾಳುವೇ……ಬಾಳುವೇ…..||