Paarivala Paarivala Lyrics

in Ravitheja

LYRIC

-
ಪಾರಿವಾಳ ಪಾರಿವಾಳ ರೆಕ್ಕೆ ಬಿಚ್ಚುವಾಗ ನನ್ನ ಆಸೆ ಹಚ್ಚುವಾಗ
ನನ್ನ ಕೂಗು ಕೂಗು ಕೂಗು
ನಿನ್ನ ರೆಕ್ಕೆಯಲ್ಲಿ ನನ್ನ ಮುಚ್ಚಿಕೊಂಡು ಬಚ್ಚಿಕೊಂಡು
ಮೆಚ್ಚಿಕೊಂಡು ಮೇಲೆ ಹಾರಿಹೋಗು ಹೋಗು ಹೋಗು ಹೋಗು
ಮೋಡದಲ್ಲಿ ಗೂಡುಕಟ್ಟಿ ಕುಣಿದಾಡುವ
ಗೂಡಿನಲ್ಲಿ ಹಾಡು ಕಟ್ಟಿ ಮೆರೆದಾಡುವ
ಹಾಡಿನಲ್ಲಿ ಲೋಕ ಮರೆತು ಮಿಂಚಾಗುವ
ಮಿಂಚಿನಿಂದ ಗಗನವೆಲ್ಲ ಬೆಳಕಾಗುವ
ಬೆಳ್ಳಿಯ ಬೆಳಕನ್ನು ಭೂಮಿಗೆ ಚೆಲ್ಲಬೇಕು
ಚೆಲ್ಲು ಚೆಲ್ಲು ಚೆಲ್ಲು ಚೆಲ್ಲುವ ಈ ಭೂಮಿಯಲ್ಲಿ
ಬೆಳ್ಳಿ ಬೆಳ್ಳಿ ಹಬ್ಬ ಮಾಡುವ
 
ಮೈನ ಮೈನ ಸ್ನಾನ ಮಾಡಿ
ಧ್ಯಾನ ಮಾಡಲೆಂದು ಹುಡುಕಿ ಹೊರಟಿತು
ನವಿಲು ನವಿಲು ಗರಿಯ ಕೆದರಿ
ಹೆಣ್ಣು ನವಿಲಿನೆಡೆಗೆ ಹೆಜ್ಜೆ ಹಾಕಿತು
ಕುಹೂಹೂ ಕೋಗಿಲೆ ಪ್ರೇಮಿಗಳಿಗೆ ಕಾವಲು
ಹಾರಾಯ್ತು ಗಿಳಿಗಳು ಹೆಕ್ಕಿ ತಿನ್ನಲು
ಕುಹೂಹೂ ಕೋಗಿಲೆ ಪ್ರೇಮಿಗಳಿಗೆ ಕಾವಲು
ಹಾರಾಯ್ತು ಗಿಳಿಗಳು ಹೆಕ್ಕಿ ತಿನ್ನಲು
ಈಗ ನಮಗೆ ತುಂಬ ಸೋಜಿಗ
ಬಾನಂಚಲಿದೆ ಚೊಚ್ಚಲ ನೊಗ
ಈಗ ನಮಗೆ ತುಂಬ ಸೋಜಿಗ
ಬಾನಂಚಲಿದೆ ಚೊಚ್ಚಲ ನೊಗ
 
||ಪಾರಿವಾಳ ಪಾರಿವಾಳ ರೆಕ್ಕೆ ಬಿಚ್ಚುವಾಗ ನನ್ನ ಆಸೆ ಹಚ್ಚುವಾಗ
ನನ್ನ ಕೂಗು ಕೂಗು ಕೂಗು
ನಿನ್ನ ರೆಕ್ಕೆಯಲ್ಲಿ ನನ್ನ ಮುಚ್ಚಿಕೊಂಡು ಬಚ್ಚಿಕೊಂಡು
ಮೆಚ್ಚಿಕೊಂಡು ಮೇಲೆ ಹಾರಿಹೋಗು ಹೋಗು ಹೋಗು ಹೋಗು||
 
ಹಂಸ ಹಂಸ ರಜೆಯ ಬರೆದು ಸ್ವರವ ಹಾಡಲೆಂದು ರಾಗ ಹುಡುಕಿತು
ಬಾತುಕೋಳಿ ಜಂಭತೋರಿ ಸುಳ್ಳು ಸಭೆಯ ಕರೆದು ಮಾತನಾಡಿತು
ಕಾಜಾಣ ಕಾಂಚಣ ಕೊಡಲೆಬೇಕು ಎಂದಿತು
ಕುಕುಕೊಕ್ಕರೆ ಸೊಕ್ಕು ಬಂದಿತು
ಕಾಜಾಣ ಕಾಂಚಣ ಕೊಡಲೆಬೇಕು ಎಂದಿತು
ಕುಕುಕೊಕ್ಕರೆ ಸೊಕ್ಕು ಬಂದಿತು
ಗುಬ್ಬಿಗಳಿಗೆ ಹಬ್ಬದ ದಿನ ಶಕುನ ಹಕ್ಕಿ ಮಾತು ಬಾ ದಿನ
ಗುಬ್ಬಿಗಳಿಗೆ ಹಬ್ಬದ ದಿನ ಶಕುನ ಹಕ್ಕಿ ಮಾತು ಬಾ ದಿನ
 
||ಪಾರಿವಾಳ ಪಾರಿವಾಳ ರೆಕ್ಕೆ ಬಿಚ್ಚುವಾಗ ನನ್ನ ಆಸೆ ಹಚ್ಚುವಾಗ
ನನ್ನ ಕೂಗು ಕೂಗು ಕೂಗು
ನಿನ್ನ ರೆಕ್ಕೆಯಲ್ಲಿ ನನ್ನ ಮುಚ್ಚಿಕೊಂಡು ಬಚ್ಚಿಕೊಂಡು
ಮೆಚ್ಚಿಕೊಂಡು ಮೇಲೆ ಹಾರಿಹೋಗು ಹೋಗು ಹೋಗು ಹೋಗು
ಮೋಡದಲ್ಲಿ ಗೂಡುಕಟ್ಟಿ ಕುಣಿದಾಡುವ
ಗೂಡಿನಲ್ಲಿ ಹಾಡು ಕಟ್ಟಿ ಮೆರೆದಾಡುವ
ಹಾಡಿನಲ್ಲಿ ಲೋಕ ಮರೆತು ಮಿಂಚಾಗುವ
ಮಿಂಚಿನಿಂದ ಗಗನವೆಲ್ಲ ಬೆಳಕಾಗುವ
ಬೆಳ್ಳಿಯ ಬೆಳಕನ್ನು ಭೂಮಿಗೆ ಚೆಲ್ಲಬೇಕು
ಚೆಲ್ಲು ಚೆಲ್ಲು ಚೆಲ್ಲು ಚೆಲ್ಲುವ ಈ ಭೂಮಿಯಲ್ಲಿ
ಬೆಳ್ಳಿ ಬೆಳ್ಳಿ ಹಬ್ಬ ಮಾಡುವ||

Paarivala Paarivala song lyrics from Kannada Movie Ravitheja starring Kumar Govind, Malavika, Thara, Lyrics penned by K Kalyan Sung by Chithra, Chorus, Music Composed by Viajaya Raja (Sax Raja), film is Directed by H Vasudev and film is released on 1995