Ettha Nodu Lyrics

in Ranjitha

Video:

LYRIC

ಎತ್ತ ನೋಡು ಅತ್ತ
ಬೇಲಿ ಇದೆ ಹೆಣ್ಣಿಗೆ…
ಕತ್ತು ಕುಯ್ವಾ….
ಅತ್ತೆ ಮಾವ ಇರೆ ಒಮ್ಮೆಗೆ
ಸಂಗಾತಿ ಸಪ್ತಪದಿಯು
ಹುಸಿಯೇನೇ…
ಹೆಣ್ಣು ಮಗಳು…
ತವರು ಮನೆಯ
ಬಿಟ್ಟ ಮೇಲೆ ಕಣ್ಣೀರೇನೆ…
 
|| ಎತ್ತ ನೋಡು ಅತ್ತ
ಬೇಲಿ ಇದೆ ಹೆಣ್ಣಿಗೆ…
ಎತ್ತ ನೋಡು…..||
 
ನಲ್ಲನಂತೆ ನಡೆದು
ಬಯಕೆಯ ಕೊಂದು
ನೆಚ್ಚವಾ ಇದಿರೆ
ದುಗುಡ ನೂರು
ಹೃದಯಕಾರು
ಅಳಲ ಪೂರವೇ…
ಎಲ್ಲರಂತೆ ಇರದೆ
ತಾಯ್ತನ ಬರದೆ
ಮನವು ಒಲಿದಿರೆ
ಕಂಡ ಕನಸು
ಚೂರು ಚೂರು
ಸುಖವು ದೂರವೇ…
ಈ ಥರ ನಡುವೇ…
ನಂಬಿಕೆ ನಲುಗಿ ಹೋಗಿ
ಸಂಬಂಧ ಬಿರಿದು
ಬಾಳು ಗೋಳಾಯಿತು
 
|| ಎತ್ತ ನೋಡು ಅತ್ತ
ಬೇಲಿ ಇದೆ ಹೆಣ್ಣಿಗೆ…
ಎತ್ತ ನೋಡು…..||
 
ಯಾರದೋ ದುಡಿಮೆ
ಯಾರದೋ ಹಿರಿಮೆ
ಭವಣೆ ತುಂಬಿರೆ..
ಮನಸು ಮನಸು
ಬೇರೆ ಬೇರೆ
ಅಡ್ಡಗೋಡೆಯೇ…
ಮಗಳಿಗೆ ಮುದ್ದು
ಸೊಸೆಗೆ ಹಿಂಸೆ
ಮನೆಯು ಹೊಡೆದಿರೆ
ಯಂತ್ರದಂತೆ
ದುಡಿದರೂನು
ಮುಳ್ಳು ದಾರಿಯೇ…
ಸಂಸಾರ ಕಡಲಾ
ಅಲೆಗಳು ಮೇರೆ ಮೀರಿ
ದಾಂಪತ್ಯ ದೋಣಿ
ಬಿರುಕು ನೂರಾಯಿತು
 
|| ಎತ್ತ ನೋಡು ಅತ್ತ
ಬೇಲಿ ಇದೆ ಹೆಣ್ಣಿಗೆ…
ಕತ್ತು ಕುಯ್ವಾ….
ಅತ್ತೆ ಮಾವ ಇರೆ ಒಮ್ಮೆಗೆ
ಸಂಗಾತಿ ಸಪ್ತಪದಿಯು
ಹುಸಿಯೇನೇ…
ಹೆಣ್ಣು ಮಗಳು…
ತವರು ಮನೆಯ
ಬಿಟ್ಟ ಮೇಲೆ ಕಣ್ಣೀರೇನೆ…
ಆಹ್ಹಾ….
 
ಎತ್ತ ನೋಡು ಅತ್ತ
ಬೇಲಿ ಇದೆ ಹೆಣ್ಣಿಗೆ…
ಎತ್ತ ನೋಡು…..
ಅಹ್ಹಹ್ಹಹ್ಹಾ……||

Ettha Nodu song lyrics from Kannada Movie Ranjitha starring Shruthi, Abhijith, Thimmaiah, Lyrics penned by Doddarange Gowda Sung by Manjula Gururaj, Music Composed by Agashthya, film is Directed by K V Jayaram and film is released on 1993