-
ಜಗದ ನಿಯಮದಂತೆ ಜನಿಸಿ ನೀನು ಬಂದೆ
ಜನ್ಮ ಉಚಿತವಂತೆ ಸಾವು ಖಚಿತವಂತೆ
ರೈತನಾಗಿ ಹುಟ್ಟಿ ನಿನ್ನ ಗಳಿಕೆ ಏನು
ಅನ್ನಕ್ಕಾಗಿ ದುಡಿದ ಬೆವರ ಲೆಕ್ಕ ಕೇಳು
ಸಾಲದಲ್ಲಿ ಹುಟ್ಟಿ ಸಾಲದಲ್ಲೆ ಬೆಳೆದೆ
ಸಾವಿನಲ್ಲು ಸಾಲ ಹೊತ್ತು ಹೊಂಟೆ ನೀನು
ರೈತನೆ ದೇಶದ ಬೆನ್ನೆಲುಬೆನ್ನು
ಹೇಳುತ ಬೆನ್ನೆಲುಬನ್ನೆ ಮುರಿದರಿನ್ನು
ನಿನ್ನದು ಒಂದು ಸೇವೆಯೆಂದು ಗುರುತು ಹಾಕಲಿಲ್ಲ
ನೀನು ಮುದುಕನಾದರೂನು ಕಾಯಕ ಬಿಡಲಿಲ್ಲ
ನಿನ್ನ ಸೇವೆ ನೋಡಿ ಯಾರು ಪಿಂಚಣಿ ಕೊಡಲಿಲ್ಲ
ನಿನ್ನ ಬವಣೆ ರಾಜಕೀಯ ಆಟವಾಯಿತಲ್ಲ
ಗರ್ಭದಿಂದ ನೀನು ಜಾರೊ ಮೊದಲೆ ಹೇಳು
ಗರ್ವದಿಂದ ನಿನ್ನ ಮೇಲೆ ಸಾಲ ಹೇರಿ
ದೇಶ ಆಳುತ್ತಾರೊ ತೆರಿಗೆ ಹಾಕಿತ್ತಾರೊ
ನೀನು ಬೆಳೆದ ಬೆಳೆಗೆ ಬೆಲೆಯ ಯಾರು ಕಟ್ಟಲಿಲ್ಲ
ನಿನ್ನ ದುಡಿಮೆ ಬಳಸಿ ಯಾರೊ ಕೊಳ್ಳೆಹೊಡೆವರಲ್ಲ
ಮೇಲೆ ಬಾನಿನಲ್ಲಿ ಒಂದು ಮಳೆಯ ಮೋಡವಿಲ್ಲ
ಬತ್ತಿಹೋದ ಕಂಗಳಲ್ಲಿ ಕಂಬನಿಯು ಇಲ್ಲ
ನಿನ್ನ ಸುಲಿಗೆ ಮಾಡುವವರ ದಾಹ ಇಂಗದಲ್ಲ
ಪ್ಯಾಟೆ ಮಂದಿ ನಿನ್ನ ಋಣವ ನೆನೆಯಲಾರಲಲ್ಲ
ದಿನವು ನಿನ್ನ ಮರೆತು ಮೆರೆಯುತಾರೆ ಎಲ್ಲ
||ಜಗದ ನಿಯಮದಂತೆ ಜನಿಸಿ ನೀನು ಬಂದೆ
ಜನ್ಮ ಉಚಿತವಂತೆ ಸಾವು ಖಚಿತವಂತೆ
ರೈತನಾಗಿ ಹುಟ್ಟಿ ನಿನ್ನ ಗಳಿಕೆ ಏನು
ಅನ್ನಕ್ಕಾಗಿ ದುಡಿದ ಬೆವರ ಲೆಕ್ಕ ಕೇಳು||
-
ಜಗದ ನಿಯಮದಂತೆ ಜನಿಸಿ ನೀನು ಬಂದೆ
ಜನ್ಮ ಉಚಿತವಂತೆ ಸಾವು ಖಚಿತವಂತೆ
ರೈತನಾಗಿ ಹುಟ್ಟಿ ನಿನ್ನ ಗಳಿಕೆ ಏನು
ಅನ್ನಕ್ಕಾಗಿ ದುಡಿದ ಬೆವರ ಲೆಕ್ಕ ಕೇಳು
ಸಾಲದಲ್ಲಿ ಹುಟ್ಟಿ ಸಾಲದಲ್ಲೆ ಬೆಳೆದೆ
ಸಾವಿನಲ್ಲು ಸಾಲ ಹೊತ್ತು ಹೊಂಟೆ ನೀನು
ರೈತನೆ ದೇಶದ ಬೆನ್ನೆಲುಬೆನ್ನು
ಹೇಳುತ ಬೆನ್ನೆಲುಬನ್ನೆ ಮುರಿದರಿನ್ನು
ನಿನ್ನದು ಒಂದು ಸೇವೆಯೆಂದು ಗುರುತು ಹಾಕಲಿಲ್ಲ
ನೀನು ಮುದುಕನಾದರೂನು ಕಾಯಕ ಬಿಡಲಿಲ್ಲ
ನಿನ್ನ ಸೇವೆ ನೋಡಿ ಯಾರು ಪಿಂಚಣಿ ಕೊಡಲಿಲ್ಲ
ನಿನ್ನ ಬವಣೆ ರಾಜಕೀಯ ಆಟವಾಯಿತಲ್ಲ
ಗರ್ಭದಿಂದ ನೀನು ಜಾರೊ ಮೊದಲೆ ಹೇಳು
ಗರ್ವದಿಂದ ನಿನ್ನ ಮೇಲೆ ಸಾಲ ಹೇರಿ
ದೇಶ ಆಳುತ್ತಾರೊ ತೆರಿಗೆ ಹಾಕಿತ್ತಾರೊ
ನೀನು ಬೆಳೆದ ಬೆಳೆಗೆ ಬೆಲೆಯ ಯಾರು ಕಟ್ಟಲಿಲ್ಲ
ನಿನ್ನ ದುಡಿಮೆ ಬಳಸಿ ಯಾರೊ ಕೊಳ್ಳೆಹೊಡೆವರಲ್ಲ
ಮೇಲೆ ಬಾನಿನಲ್ಲಿ ಒಂದು ಮಳೆಯ ಮೋಡವಿಲ್ಲ
ಬತ್ತಿಹೋದ ಕಂಗಳಲ್ಲಿ ಕಂಬನಿಯು ಇಲ್ಲ
ನಿನ್ನ ಸುಲಿಗೆ ಮಾಡುವವರ ದಾಹ ಇಂಗದಲ್ಲ
ಪ್ಯಾಟೆ ಮಂದಿ ನಿನ್ನ ಋಣವ ನೆನೆಯಲಾರಲಲ್ಲ
ದಿನವು ನಿನ್ನ ಮರೆತು ಮೆರೆಯುತಾರೆ ಎಲ್ಲ
||ಜಗದ ನಿಯಮದಂತೆ ಜನಿಸಿ ನೀನು ಬಂದೆ
ಜನ್ಮ ಉಚಿತವಂತೆ ಸಾವು ಖಚಿತವಂತೆ
ರೈತನಾಗಿ ಹುಟ್ಟಿ ನಿನ್ನ ಗಳಿಕೆ ಏನು
ಅನ್ನಕ್ಕಾಗಿ ದುಡಿದ ಬೆವರ ಲೆಕ್ಕ ಕೇಳು||
Jagada Niyamadanthe song lyrics from Kannada Movie Ranahedi starring Karna Kumar, Aishwarya Rao, Achyuth Kumar, Lyrics penned by Manu K Shettihalli Sung by Nagendra, Music Composed by V Manohar, film is Directed by Manu K Shettihalli and film is released on 2019