Nanna Bennallina Lyrics

ನನ್ನ ಬೆನ್ನಲ್ಲಿನ Lyrics

in Raate

in ರಾಟೆ

Video:
ಸಂಗೀತ ವೀಡಿಯೊ:

LYRIC

ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ
ಕನಸು ನಕ್ಷತ್ರ ಹುಡುಕುವುದು ಎಲ್ಲಾ ಕಡೆ
ವಯಸು ತಿಳಿಯದಲೇ ಇಳಿಯುವುದು ಇಂಥ ಕಡೆ
ತುಂಬ ನಡುಗುವೆನು ಕನ್ನಡಿಯ ಕಂಡು
ನನ್ನಂಥ ನನಗೂ ಏನಾಯಿತಿಂದು
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೊ ಕೇಳಿಸದು ನನ್ನ ಕೂಗು
 
||ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ…||
 
ಬಿಳಿಗೆಂಪು ತೋಳೇ ಅತಿ ತುಂಟ ಕಣ್ಣೆ
ಮುದ್ದು ಮುಂಗುರುಳೇ ಕೆಂಪು ಕಿರುಬೆರಳೇ
ನೆನಪಾಗದಿರಿ ಕಾಡಿಸದಿರಿ…ಸುಮ್ಮನೆ ಬಿಡಿ…
ಅನುರಾಗದ ಈ ನೋವಿಗೆ ಏನ್‌ ಹೆಸರಿಡಲಿ
ಅನುರಾಗದ ಈ ನೋವಿಗೆ ಹೆಸರೇನಿಡಲಿ
ಎದೆಯೊಳಗಡೆ ಎದೆಯೊಂದಿದೆ…
ನೆನಪೊಳಗಡೆ ನೆನಪೊಂದಿದೆ
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೊ ಕೇಳಿಸದು ನನ್ನ ಕೂಗು
 
||ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ…||
 
ಒಲವೆಂಬುದು ಮಳೆಗಾಲ ಬಾಯಾರಿದಂತೆ
ಕಡು ಎಚ್ಚರದಲೆ ಹೃದಯ ಕಾಲ್‌ ಜಾರಿದಂತೆ
ಅವಳೆಂದರೆ ಮನದಾಳದ ಕೊನೆಯಾಸೆಯಂತೆ
ಅವಳಿಲ್ಲದ ಕಡು ಹುಣ್ಣಿಮೆ ಸುಡುಗಾಡಿನಂತೆ
ಅವಳೆಂದರೆ ಏನೆನ್ನಲಿ ಈ ನನದಿರಲಿ
ಅವಳೆಂದರೆ ಏನೆನ್ನಲಿ ಈ ನನದಿರಲಿ
ನೆನಪೆನ್ನಲೆ ನನದೆನ್ನಲೆ ಕನಸೆನ್ನಲೆ ನನಸೆನ್ನಲೆ
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೊ ಕೇಳಿಸದು ನನ್ನ ಕೂಗು
 
|| ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ…||

ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ
ಕನಸು ನಕ್ಷತ್ರ ಹುಡುಕುವುದು ಎಲ್ಲಾ ಕಡೆ
ವಯಸು ತಿಳಿಯದಲೇ ಇಳಿಯುವುದು ಇಂಥ ಕಡೆ
ತುಂಬ ನಡುಗುವೆನು ಕನ್ನಡಿಯ ಕಂಡು
ನನ್ನಂಥ ನನಗೂ ಏನಾಯಿತಿಂದು
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೊ ಕೇಳಿಸದು ನನ್ನ ಕೂಗು
 
||ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ…||
 
ಬಿಳಿಗೆಂಪು ತೋಳೇ ಅತಿ ತುಂಟ ಕಣ್ಣೆ
ಮುದ್ದು ಮುಂಗುರುಳೇ ಕೆಂಪು ಕಿರುಬೆರಳೇ
ನೆನಪಾಗದಿರಿ ಕಾಡಿಸದಿರಿ…ಸುಮ್ಮನೆ ಬಿಡಿ…
ಅನುರಾಗದ ಈ ನೋವಿಗೆ ಏನ್‌ ಹೆಸರಿಡಲಿ
ಅನುರಾಗದ ಈ ನೋವಿಗೆ ಹೆಸರೇನಿಡಲಿ
ಎದೆಯೊಳಗಡೆ ಎದೆಯೊಂದಿದೆ…
ನೆನಪೊಳಗಡೆ ನೆನಪೊಂದಿದೆ
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೊ ಕೇಳಿಸದು ನನ್ನ ಕೂಗು
 
||ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ…||
 
ಒಲವೆಂಬುದು ಮಳೆಗಾಲ ಬಾಯಾರಿದಂತೆ
ಕಡು ಎಚ್ಚರದಲೆ ಹೃದಯ ಕಾಲ್‌ ಜಾರಿದಂತೆ
ಅವಳೆಂದರೆ ಮನದಾಳದ ಕೊನೆಯಾಸೆಯಂತೆ
ಅವಳಿಲ್ಲದ ಕಡು ಹುಣ್ಣಿಮೆ ಸುಡುಗಾಡಿನಂತೆ
ಅವಳೆಂದರೆ ಏನೆನ್ನಲಿ ಈ ನನದಿರಲಿ
ಅವಳೆಂದರೆ ಏನೆನ್ನಲಿ ಈ ನನದಿರಲಿ
ನೆನಪೆನ್ನಲೆ ನನದೆನ್ನಲೆ ಕನಸೆನ್ನಲೆ ನನಸೆನ್ನಲೆ
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೊ ಕೇಳಿಸದು ನನ್ನ ಕೂಗು
 
|| ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೆ ನಿಂತ ಕಡೆ…||

Nanna Bennalina song lyrics from Kannada Movie Raate starring Dhananjay, Shruthi Hariharan, Bullet Prakash, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by A P Arjun and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ