Kavithe Neenu Raaga Naanu Lyrics

in Priya

Video:

LYRIC

ಆ….ಆ ಆ….ಆಆ….
ಆ…ಆ…ಆಆ ಆ ….
 
ಏ....ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ
ಈ ಬಾಳೇ ಪ್ರೇಮಗೀತೆಯಂತೆ
 
|| ಏ...ಕವಿತೆ ನೀನು ರಾಗ ನಾನು…||
 
ನಿನ್ನಾ ರೂಪ ಕಂಡು ತಂಗಾಳಿ ಬಂದಿದೆ
ನಿನ್ನಾ ರೂಪ ಕಂಡು ತಂಗಾಳಿ ಬಂದಿದೆ
ನಿನ್ನಾ ಮೈಯ್ಯ ಸೋಕಿ ಆನಂದ ಹೊಂದಿದೆ
ಹೋಯ್..ಹೋಯ್..
ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ತನ್ನಾಸೆ ಇನ್ನೂ ತೀರದಾಗಿ
ಬೀಸಿ ಬೀಸಿ ಬಂದು ಹೋಗಿ........
 
|| ಏ...ಕವಿತೆ ನೀನು ರಾಗ ನಾನು…||
 
ನಿನ್ನಾ ಮಾತು ಕೇಳಿ ಆ ಗಿಳಿಯೇ ನಾಚಿದೆ
ನಿನ್ನಾ ಮಾತು ಕೇಳಿ ಆ ಗಿಳಿಯೇ ನಾಚಿದೆ
ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
ಹೋಯ್ ಹೋಯ್..
ಮುದ್ದು ಮಾತ ಮರೆತು ಕಲ್ಲಾಗಿಹೋಗಿದೆ
ನಿನ್ನಿಂದ ಪ್ರೀತಿ ಮಾತು ಇನ್ನು
ಕೇಳಿ ಕೇಳಿ ಕಲಿವಾ ಆಸೆ..........
 
|| ಏ...ಕವಿತೆ ನೀನು ರಾಗ ನಾನು…||
 
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಹೋಯ್ ಹೋಯ್ ..
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ನಿನ್ನಿಂದ ನನ್ನ ಯಾರೂ ಇನ್ನು ಎಂದೂ
ದೂರ ಮಾಡಲಾರದೆಂದು........
 
|| ಏ...ಕವಿತೆ ನೀನು ರಾಗ ನಾನು…||

Kavithe Neenu Raaga Naanu song lyrics from Kannada Movie Priya starring Rajanikanth, Sridevi, K S Ashwath, Lyrics penned by Chi Udayashankar Sung by K J Yesudas, S Janaki, Music Composed by Ilayaraja, film is Directed by S P Mutthuraman and film is released on 1979