Hatthira Hatthira Hennina Hatthira Lyrics

in Premagni

Video:

LYRIC

ಗಂಡು : ಹೇ...                                
ಹೆಣ್ಣು : ಹೇ...
 
ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೆ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೆ..
ಇಬ್ಬರು : ಮಾರು ಹೋದೆವೋ.. ಆ ಮೋಡಿಗೆ ..
ಗಂಡು : ಓ.. ಪ್ರೇಮಿಯೇ...               
ಹೆಣ್ಣು : ಓ.. ಪ್ರೇಮಿಯೇ...
ಗಂಡು : ಬಾ ಬಾರೇ ಪ್ರೀತಿಸು           
ಹೆಣ್ಣು : ಬಾ ಬಾರೋ ಪ್ರೀತಿಸು
ಗಂಡು : ಬಾ ಬಾರೇ ಮಂತ್ರಿಸು         
ಹೆಣ್ಣು : ಬಾ ಬಾರೋ ಮಂತ್ರಿಸು
  
|| ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೆ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೆ….||
 
ಹೆಣ್ಣು : ಓ... ಅಮೂಲ್ಯ ಪ್ರೇಮದ
                ಅಧೀನನಾಗೋ ಕರಾರು ಮಾಡೀಗ
ಗಂಡು : ಗರೀಬನನ್ನೇ ನವಾಬು
                ಕಾಣೋ ಪ್ರಮಾಣ ಮಾಡೀಗ..
ಹೆಣ್ಣು : ಆಗಲಿ.. ಹೋಗಲಿ..ಜಗದ ಕೊನೆಯ ಪ್ರಳಯ
ಗಂಡು : ಹೀಗೆಯೇ ಸಾಗಲಿ ಮನದ ಮೊದಲ ಪ್ರಣಯ..
ಹೆಣ್ಣು : ಓ... ಅಸೂಯೆ ಎಂಬ
                ಆಧೀನ ದಡದ ಕರಾರು ಮಾಡೀಗ
ಗಂಡು : ಸಂದೇಹವೆಂಬ ಸಂಕೋಲೆ
                ಮುರಿವ ಪ್ರಮಾಣ ಮಾಡೀಗ
ಹೆಣ್ಣು : ಊರಿನ ಕಾಡುವ ಕಣ್ಣು ತಾಕೋ ಮುನ್ನ
ಗಂಡು : ಈ ದಿನ ಬಾಳಿಗೆ ಕಾವಲಿರುವ ಇನ್ನ
ಇಬ್ಬರು : ಪ್ರೇಮ ಸಾಕ್ಷಿಯೋ.. ಮೀಟದಾದಿಗೆ...
ಗಂಡು : ಓ.. ಪ್ರೇಮಿಯೇ...               
ಹೆಣ್ಣು : ಓ.. ಪ್ರೇಮಿಯೇ...
ಗಂಡು : ಓ.. ಪ್ರೇಮಿಯೇ...               
ಹೆಣ್ಣು : ಓ.. ಪ್ರೇಮಿಯೇ...
ಗಂಡು : ಬಾ ಬಾರೇ ಪ್ರೀತಿಸು           
ಹೆಣ್ಣು : ಬಾ ಬಾರೋ ಪ್ರೀತಿಸು
ಗಂಡು : ಬಾ ಬಾರೇ ಮಂತ್ರಿಸು         
ಹೆಣ್ಣು : ಬಾ ಬಾರೋ ಮಂತ್ರಿಸು
 
|| ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೆ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೆ….||
 
ಗಂಡು : ನಾ.. ನೀ.. ನೀ ನಾದವೂ..              
ಕೋರಸ್ : ಲಾಲಲ್ಲ  ಲಾಲಲ್ಲ  ಲಾಲಲ್ಲ  ಲ್ಲಲ್ಲಾ ..
ಇಬ್ಬರು : ನಾ.. ನೀ.. ನೀ ನಾದವೂ.              
ಕೋರಸ್ : ಲಾಲಲ್ಲ  ಲಾಲಲ್ಲ  ಲಾಲಲ್ಲ  ಲ್ಲಲ್ಲಾ ..
ಕೋರಸ್ : ಹೂಂಹೂಂಹೂಂಹೂಂಹೂಂಹೂಂ ..
 
ಗಂಡು : ಓ... ಋಣಾನು ಬಂಧವು
                ಪ್ರಲಾಪವಾಗದ ಕರಾರು ಮಾಡೀಗ
ಹೆಣ್ಣು : ಮುಂಗೋಪದಿಂದ ಪ್ರಮಾದ
                ಮಾಡದ ಪ್ರಮಾಣ ಮಾಡಿದ
ಗಂಡು : ಜೀವನ ಜೇನಿನ ಸಿಹಿಯ ಗೂಡು ನಿಜವೋ
ಹೆಣ್ಣು : ಜೇನಿಗೂ ಜ್ವಾಲೆಯ ಉರಿಯು ಬಡಿವ ಭಯವು..
ಗಂಡು : ಆ.. ವಿಶಾಲ ಪ್ರೇಮದ ಪತೇರಿ
                ಕಟ್ಟಲು ಕರಾರು ಮಾಡೀಗ..
ಹೆಣ್ಣು : ಅಪಾಯದಲ್ಲೂ ಉಪಾಯ
                ಮಾಡೋ ಪ್ರಮಾಣ ಮಾಡೀಗ
ಗಂಡು : ಪ್ರೇಮದ ಕೋಟೆಯೂ ಅಚಲ ಎಂದೂ ಅಚಲ
ಹೆಣ್ಣು : ಪ್ರೇಮದ ಭಾಷೆಯೂ ಸಫಲ ಎಂದೂ ಸಫಲ
ಇಬ್ಬರು : ನಾವೇ ಸಾಕ್ಷಿಯೋ ಈ ಕರಾರಿಗೆ...
ಗಂಡು : ಓ.. ಪ್ರೇಮಿಯೇ...               
ಹೆಣ್ಣು : ಓ.. ಪ್ರೇಮಿಯೇ...
ಗಂಡು : ಓ.. ಪ್ರೇಮಿಯೇ...               
ಹೆಣ್ಣು : ಓ.. ಪ್ರೇಮಿಯೇ...
ಗಂಡು : ಬಾ ಬಾರೇ ಪ್ರೀತಿಸು           
ಹೆಣ್ಣು : ಬಾ ಬಾರೋ ಪ್ರೀತಿಸು
ಗಂಡು : ಬಾ ಬಾರೇ ಮಂತ್ರಿಸು         
ಹೆಣ್ಣು : ಬಾ ಬಾರೋ ಮಂತ್ರಿಸು
 
ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೆ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೆ..
ಕೋರಸ್ : ಜೂಜುಜು ಜೂಜುಜು ಜೂಜುಜು ಜೂಜುಜು
                    ಜೂಜುಜು ಜೂಜುಜು ಜೂಜುಜು ಜೂಜುಜು
                ಜೂಜುಜು ಜೂಜುಜು ಜೂಜುಜು ಜೂಜುಜು
                 ಜೂಜುಜು ಜೂಜುಜು

Hatthira Hatthira Hennina Hatthira song lyrics from Kannada Movie Premagni starring Arjun Sarja, Kushbu, Sundar Krishna Urs, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by T S Nagabharana and film is released on 1989