-
ಜನನಿಗಿಂತ ಪರಮಾತ್ಮ ಹಿರಿದಲ್ಲ
ಅಮ್ಮನೇ ಪ್ರತ್ಯಕ್ಷ ದೈವ
ಮುಕ್ಕೋಟಿ ಮೂರು ದೇವರು ಈ ತಾಯಿ ಮುಂದೆ ನಿಲ್ಲರು
ಪ್ರಾಣಕ್ಕೆ ಪ್ರಾಣ ಕೊಟ್ಟರು ಆಗೋಲ್ಲ ಋಣಮುಕ್ತರು
ಸುಳ್ಳನಾದರು ಕಳ್ಳನಾದರು ಮಗನ ಕ್ಷಮಿಸೋಳು
ತನ್ನ ನೆತ್ತರ ಧಾರೆ ಎರೆಯುತ ಸಾಕಿ ಸಲಹೋಳು
ಬಸಿರ ನೋವಿನಲು ಉಸಿರ ನುಂಗುವಳು
ಮಮತೆ ಹಾಲುಣಿಸಿ ಕರುಣೆ ತುಂಬುವಳು
ಅಮ್ಮನೊಂದೆ ದೈವ

ಅಮ್ಮನೆ ಹೊರುವಳು ಅಮ್ಮನೆ ಹೆರುವಳು ಬರಿ ನವಮಾಸಗಳು
ಅಮ್ಮ ನಿನ್ನ ಸ್ಥಾಯಿಯೊ ಉಸಿರಿನ
ಕೊನೆಯನು ಮುಟ್ಟುತಲಿದ್ದರು ನಿಲ್ಲದೆ ಸಾಕುತಿರು
ತಾಯಿಲೋಕ ಮಾಯೆಯೊ
ಆಕಳು ಈ ಕರುವ ಮುಂದೆ ಅವಳು ಅವಳೆ ಇರುಳಲ್ಲು ಕಾವಲು
ದೃಷ್ಟಿಗೆ ಕಣ್ಣೆ ಮೂಲ ಸೃಷ್ಟಿಗೆ ಈ ತಾಯೆ ಮೂಲ
ಪ್ರೀತಿಯ ತಾಳಕ್ಕೆ ಮೇಳ ನೀಡೋದೆ ತಾಯಿ ಅಂತರಾಳ
||ಮುಕ್ಕೋಟಿ ಮೂರು ದೇವರು ಈ ತಾಯಿ ಮುಂದೆ ನಿಲ್ಲರು
ಪ್ರಾಣಕ್ಕೆ ಪ್ರಾಣ ಕೊಟ್ಟರು ಆಗೋಲ್ಲ ಋಣಮುಕ್ತರು||
ಗುಂಡಿಗೆ ಭಾರವ ಗುಂಡಿಗೆ ತಿಳಿವುದು ತಾಯಿಯ ಎದೆಯಲ್ಲಿ
ತುಡಿತ ಬಡಿತ ತಾಯಿಗೆ
ಚಕ್ಕನೆ ಕುಯ್ಯುವ ನೋವಿನಬಾಧೆಯು ತಾಯಿಯ ಮಡಿಲಲ್ಲೆ
ನೋವು ಬೇವು ಯಾರಿಗೆ
ಅಮ್ಮ ಮಗನೆಂದ ಮೇಲೆ ನೋವಿದೆ ನಿನ್ನ ಈ ಅನುಬಂಧ ಕೂಗಿದೆ
ಓ ಮನುಜ ಈ ಜನ್ಮದಲ್ಲೆ ತಿಳಿಯಯ್ಯ ತಾಯಿಗೆ ಅರ್ಥ
ಏಳೆಂಟು ಜನ್ಮಾಂತರಕ್ಕು ತಾಯಿಲ್ಲದ ಬಾಳು ವ್ಯರ್ಥ

ಅಮ್ಮನೊಂದೆ ದೈವ||