Jagadali Raithanemba Lyrics

ಜಗದಲ್ಲಿ ರೈತನೆಂಬ Lyrics

in Prajarajya

in ಪ್ರಜಾರಾಜ್ಯ

LYRIC

Song Details Page after Lyrice

ಜಗದಲ್ಲಿ ರೈತನೆಂಬ ಬ್ರಹ್ಮ ಇರೊವರೆಗೂ
ಹಸಿವಿನ ಮಾತೆ ಇಲ್ಲ ಕೇಳೊ ಕೊನೆವರೆಗೂ
ನೆಲವನ್ನು ಉತ್ತಿ ಉತ್ತಿ ಉತ್ತಿ ದಣಿಯುವನು
ನೆಲದಲಿ ಬಿತ್ತಿ ಬಿತ್ತಿ ಬೆಳೆಯೊ ಧಣಿ ಇವನು
ಆಕಾಶ ಮಳೆ ಘನ ಗಗನ ಹರಿದು ನೆಲದಿ ಸುರಿಯುವಾಗ
ಭೂಮಿಲಿ ಬೆಳೆ ಥಳಥಳಿಸಿ  ನಲಿದು ಬೆಳೆದು ಬರುವ ಯೋಗ
ರೈತಾಪಿ ಜನ ಆ ಕೆಸರಲಿಳಿದು ಬೆವರು ಹರಿಸುವಾಗ
ಅವರಿಂದ ದಿನ ನಡೆಯೋದು ಈ ಜಗ
 
ಎದ್ದೊಂದು ಘಳಿಗೆಲಿ ನೆನೆದೆವೊ
ಕುಂತಲ್ಲೂ ನಿಂತಲ್ಲೂ ನೆನೆದೆವೊ
ಕೈಮುಗ್ದು ಅಡ್ಬಿದ್ದು ನೆನೆದೆವೊ ಭೂಮಿ ತಾಯ
 
ರೈತನನೂ ಗೌರಿವಸದಂತ ದೇಶಕ್ಕೆ ಉಂಟು
ಭೂಮಿ ನೀಡೊ ಕ್ಷಾಮದ ಶಾಪ
ಉಸಿರಿಗೆ ಹಸಿರನ್ನು ನೀಡಿ
ಹಸಿವಿಂದ ಆರದಂತೆ ಕಾಯೊ
ಪ್ರಾಣದ ದೀಪ
ಜಗದಲಿ ಅಲೆಗಳು ಕಲೆಗಳು ತಲೆಗಳು
ಉರುಳಿದವೆಷ್ಟೊ ತಮ್ಮಾ
ಮುಗಿಯದು ಅಂದಿಗು ಇಂದಿಗು ಎಂದಿಗು
ಉಳುವ ಜನರ ಯುಗಧರ್ಮ
ನಗರದ ಆಗದ ಹೋಗದ ಬೀಗಿದ
ಜೀವನ ಸಾಕಿದೆ ತಮ್ಮಾ
ನೆಲದಲಿ ಚಿನ್ನದ ರನ್ನದ ಮುತ್ತಿನ
ಬದುಕೊ ಗಣಿಯ ನಿಟ್ಟ ಬ್ರಹ್ಮ
ನಿನ್ನ ನೆತ್ತಿಯಲ್ಲಿ ಹುಟ್ಟೊ ಬೆವರಹನಿ
ಮುಟ್ಟಿ ವಂದಿಸಲಿ ಭೂಮಿತಾಯಿ ಪಾದ
ನಿನ್ನ ನೆತ್ತಿಯಲ್ಲಿ ಹುಟ್ಟೊ ಬೆವರಹನಿ
ಮುಟ್ಟಿ ವಂದಿಸಲಿ ಭೂಮಿತಾಯಿ ಪಾದ
 
ನೇಗಿಲನೆ ಲೇಖನಿಯೆ ಮಾಡಿ
ನೆಲವೆಂಬ ಹಾಳೆ ಮೇಲೆ ಬರೆದ ದವಸದ ವೇದ
ತಿಳಿಯರು ತಿಳಿದವರ ಶಾಸ್ತ್ರ ದುಡಿಯೋರ ವೇದನಾದ
ಎಲ್ಲ ಪರಶಿವ ಪಾದ
ಜನಪದ ಕೀರ್ತನೆ ಪ್ರಾರ್ಥನೆ ಭಾವನೆ
ಅನುಭವ ಸಾರುವ ಗಾದೆ
ಜನಪದ ಜೋಗಿಯ ಗೀಗಿಯ ರಾಗಿಯ
ಪದವೆ ಪರಮಪದ ಭೋದೆ
ತೆನೆಗಳು ಮಾತಿಗೆ ಕೂತರೆ ಗಾಳಿಗೆ
ಸುಮ್ಮನೆ ಸವರುವ ತಾಳಿ
ಇದರಲಿ ಇಹವಿದೆ ಪರವಿದೆ ಧ್ಯಾನಿಸಿ
ಹೃದಯ ತೆರೆದಿರಿಸಿ ಕೇಳಿ
ಆಲ ಬೇಲಗಳ ಹೊಂಗೆ ಮಾಮರದ
ತಂಪು ತಾಯ್ನೆಲವೆ ನಿದಿರೆ ನೀಡೊ ಸ್ವರ್ಗ
ಆಲ ಬೇಲಗಳ ಹೊಂಗೆ ಮಾಮರದ
ತಂಪು ತಾಯ್ನೆಲವೆ ನಿದಿರೆ ನೀಡೊ ಸ್ವರ್ಗ
ಆಕಾಶ ಮಳೆ ಘನ ಗಗನ ಹರಿದು ನೆಲದಿ ಸುರಿಯುವಾಗ
ಭೂಮಿಲಿ ಬೆಳೆ ಥಳಥಳಿಸಿ  ನಲಿದು ಬೆಳೆದು ಬರುವ ಯೋಗ
ರೈತಾಪಿ ಜನ ಆ ಕೆಸರಲಿಳಿದು ಬೆವರು ಹರಿಸುವಾಗ
ಅವರಿಂದ ದಿನ ನಡೆಯೋದು ಈ ಜಗ

ಜಗದಲ್ಲಿ ರೈತನೆಂಬ ಬ್ರಹ್ಮ ಇರೊವರೆಗೂ
ಹಸಿವಿನ ಮಾತೆ ಇಲ್ಲ ಕೇಳೊ ಕೊನೆವರೆಗೂ
ನೆಲವನ್ನು ಉತ್ತಿ ಉತ್ತಿ ಉತ್ತಿ ದಣಿಯುವನು
ನೆಲದಲಿ ಬಿತ್ತಿ ಬಿತ್ತಿ ಬೆಳೆಯೊ ಧಣಿ ಇವನು
ಆಕಾಶ ಮಳೆ ಘನ ಗಗನ ಹರಿದು ನೆಲದಿ ಸುರಿಯುವಾಗ
ಭೂಮಿಲಿ ಬೆಳೆ ಥಳಥಳಿಸಿ  ನಲಿದು ಬೆಳೆದು ಬರುವ ಯೋಗ
ರೈತಾಪಿ ಜನ ಆ ಕೆಸರಲಿಳಿದು ಬೆವರು ಹರಿಸುವಾಗ
ಅವರಿಂದ ದಿನ ನಡೆಯೋದು ಈ ಜಗ
 
ಎದ್ದೊಂದು ಘಳಿಗೆಲಿ ನೆನೆದೆವೊ
ಕುಂತಲ್ಲೂ ನಿಂತಲ್ಲೂ ನೆನೆದೆವೊ
ಕೈಮುಗ್ದು ಅಡ್ಬಿದ್ದು ನೆನೆದೆವೊ ಭೂಮಿ ತಾಯ
 
ರೈತನನೂ ಗೌರಿವಸದಂತ ದೇಶಕ್ಕೆ ಉಂಟು
ಭೂಮಿ ನೀಡೊ ಕ್ಷಾಮದ ಶಾಪ
ಉಸಿರಿಗೆ ಹಸಿರನ್ನು ನೀಡಿ
ಹಸಿವಿಂದ ಆರದಂತೆ ಕಾಯೊ
ಪ್ರಾಣದ ದೀಪ
ಜಗದಲಿ ಅಲೆಗಳು ಕಲೆಗಳು ತಲೆಗಳು
ಉರುಳಿದವೆಷ್ಟೊ ತಮ್ಮಾ
ಮುಗಿಯದು ಅಂದಿಗು ಇಂದಿಗು ಎಂದಿಗು
ಉಳುವ ಜನರ ಯುಗಧರ್ಮ
ನಗರದ ಆಗದ ಹೋಗದ ಬೀಗಿದ
ಜೀವನ ಸಾಕಿದೆ ತಮ್ಮಾ
ನೆಲದಲಿ ಚಿನ್ನದ ರನ್ನದ ಮುತ್ತಿನ
ಬದುಕೊ ಗಣಿಯ ನಿಟ್ಟ ಬ್ರಹ್ಮ
ನಿನ್ನ ನೆತ್ತಿಯಲ್ಲಿ ಹುಟ್ಟೊ ಬೆವರಹನಿ
ಮುಟ್ಟಿ ವಂದಿಸಲಿ ಭೂಮಿತಾಯಿ ಪಾದ
ನಿನ್ನ ನೆತ್ತಿಯಲ್ಲಿ ಹುಟ್ಟೊ ಬೆವರಹನಿ
ಮುಟ್ಟಿ ವಂದಿಸಲಿ ಭೂಮಿತಾಯಿ ಪಾದ
 
ನೇಗಿಲನೆ ಲೇಖನಿಯೆ ಮಾಡಿ
ನೆಲವೆಂಬ ಹಾಳೆ ಮೇಲೆ ಬರೆದ ದವಸದ ವೇದ
ತಿಳಿಯರು ತಿಳಿದವರ ಶಾಸ್ತ್ರ ದುಡಿಯೋರ ವೇದನಾದ
ಎಲ್ಲ ಪರಶಿವ ಪಾದ
ಜನಪದ ಕೀರ್ತನೆ ಪ್ರಾರ್ಥನೆ ಭಾವನೆ
ಅನುಭವ ಸಾರುವ ಗಾದೆ
ಜನಪದ ಜೋಗಿಯ ಗೀಗಿಯ ರಾಗಿಯ
ಪದವೆ ಪರಮಪದ ಭೋದೆ
ತೆನೆಗಳು ಮಾತಿಗೆ ಕೂತರೆ ಗಾಳಿಗೆ
ಸುಮ್ಮನೆ ಸವರುವ ತಾಳಿ
ಇದರಲಿ ಇಹವಿದೆ ಪರವಿದೆ ಧ್ಯಾನಿಸಿ
ಹೃದಯ ತೆರೆದಿರಿಸಿ ಕೇಳಿ
ಆಲ ಬೇಲಗಳ ಹೊಂಗೆ ಮಾಮರದ
ತಂಪು ತಾಯ್ನೆಲವೆ ನಿದಿರೆ ನೀಡೊ ಸ್ವರ್ಗ
ಆಲ ಬೇಲಗಳ ಹೊಂಗೆ ಮಾಮರದ
ತಂಪು ತಾಯ್ನೆಲವೆ ನಿದಿರೆ ನೀಡೊ ಸ್ವರ್ಗ
ಆಕಾಶ ಮಳೆ ಘನ ಗಗನ ಹರಿದು ನೆಲದಿ ಸುರಿಯುವಾಗ
ಭೂಮಿಲಿ ಬೆಳೆ ಥಳಥಳಿಸಿ  ನಲಿದು ಬೆಳೆದು ಬರುವ ಯೋಗ
ರೈತಾಪಿ ಜನ ಆ ಕೆಸರಲಿಳಿದು ಬೆವರು ಹರಿಸುವಾಗ
ಅವರಿಂದ ದಿನ ನಡೆಯೋದು ಈ ಜಗ

Jagadali Raithanemba song lyrics from Kannada Movie Prajarajya starring Dynamic Star Devaraj,Achyut Kumar Dr.Varadaraaju D.N.Vijay Bhargav,Divya Gowda T.S.Nagabharana, Lyrics penned by V Nagendra Prasad Sung by Shankar Mahadevan, Music Composed by Vijetha Manjaiah, film is Directed by Vijay Bhargavand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ