ಜಗಮಗ ಜಗದಲಿ ಇಂದು ನೀನೆ ನೀನಾಗು
ಧಗಧಗ ಕುದಿಯುವ ಛಲದಿ ನೀನಾಗೆ ಮುನ್ನುಗ್ಗು
ಬದುಕೆನ್ನೋದೆ ಇಲ್ಲಿ ನಾಟಕ ವಿಧಿಯೆ ಅದಕೆ ಪೂರಕ
ಧೈರ್ಯವೆ ನಿನಗೆ ಸಾಧಕ ಹೋರಾಡು ಕೊನೆಕಾಣುವ ತನಕ
ಏನಾಗಲಿ ಎದ್ದೇಳು ಎದ್ದೇಳು ಎದ್ದೇಳು ನೀನೆ ಮೊದಲು
ಓಓಓಓ ಮೊದಲು
ಬದಲಾವಣೆಯೆ ನೀನಾಗು ನೀನಾಗು ನಿನ್ನೊಳಗೆ ಸಿಡಿದೆದ್ದೇಳು
ಓಓಓಓ ಎದ್ದೇಳು
ದಯವೆ ಇಲ್ಲಿ ದಾರಿ ನೂರು ಪಣಕೆ ಮಾತ್ರ ನಾವೆ ದ್ಯಾವ್ರು
ಎದ್ದು ನಿಂತ್ರೆ ಎಡೆ ಇಕ್ಕೋರು ಸೋತು ಕುಂತ್ರೆ ಮಣ್ಣಾಕುವರು
ಮನಸ್ಸು ಇದ್ರೆ ಮಾರ್ಗ ಹಲವು ಮರ್ಗಕ್ಕೊಂದು ಮನಸ್ಸು ಬೇಕು
ಹಿಂದೆ ಇರಲಿ ಹಳೆಯ ನೋವು ಮುಂದೆ ಸಾಗು ಬದುಕೆ ಗೆಲುವು
||ಏನಾಗಲಿ ಎದ್ದೇಳು ಎದ್ದೇಳು ಎದ್ದೇಳು ನೀನೆ ಮೊದಲು

ಓಓಓಓ ಎದ್ದೇಳು||
ಇಲ್ಲಿ ಎಲ್ಲ ಮಾಯಾಜಾಲ ಮರೆತು ನಿಂತ್ರೆ ನೀನೆ ಮಾಯಾ
ಕಷ್ಟನಷ್ಟ ಏನೆ ಇರಲಿ ಗೆಲ್ಲೋಕ್ಕಾಗಿ ಛಲವೊಂದಿರಲಿ
ಸ್ವಾರ್ಥ ಸುಳಿಯ ಮಾಳಿಗೆಯಲ್ಲಿ ಹಿಡಿದು ಹೋಗೊ ಆಸ್ತಿಗಳೆಲ್ಲಿ
ಮರಳಿ ಮರಳಿ ಎದ್ದರೆ ಇಲ್ಲಿ ಸೋಲಿಸಲಾಗದು ನಿನ್ಯಾರು ಇಲ್ಲಿ

Enagali Eddelu song lyrics from Kannada Movie Prajarajya starring Dynamic Star Devaraj,Achyut Kumar Dr.Varadaraaju D.N.Vijay Bhargav,Divya Gowda T.S.Nagabharana, Lyrics penned by Sandeep Heggade Sung by Vijay Prakash, Music Composed by Vijetha Manjaiah, film is Directed by Vijay Bhargavand film is released on 2023