ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು,
ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು,
ಎಲ್ಲ ಆ ದೇವನ ಕೊಡುಗೆ
|| ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ…||
ದೇಹವ ಸವೆಸುತ ಪರಿಮಳ ಕೊಡುವ,
ಗಂಧವು ನೋವಿಗೆ ನರಳುವುದೇ
ತನ್ನನೆ ದಹಿಸುತ ಬೆಳಕನು ತರುವ,
ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋಲಿಕೆ ಧರೆಯು
ಕರುಣೆಯು ನಿನ್ನಲಿ ಮೈದುಂಬಿರಲು
ಈ ಜನ್ಮ ಸಾರ್ಥಕವೂ….
|| ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ…||
ಗಾಳಿಯ ಭೀಕರ ಧಾಳಿಗೆ ಪರ್ವತ,
ಸ್ಥೈರ್ಯವನೆಂದಿಗು ಕಳೆಯುವುದೇ
ಸುಖ ಸಂಸಾರಕೆ ದುಡಿಯುವ ಹೆಣ್ಣು,
ಸ್ವಾರ್ಥಕೆ ಮನಸನು ನೀಡುವಳೇ
ನಿಂದನೆ ಮಾತಿಗೆ ಕುಂದದೆ ಇರುವ
ಮಮತೆಯ ಮೂರ್ತಿಯೆ ನೀನಾಗಿರಲು
ಜೀವನ ಪಾವನವೂ…
|| ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು,
ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ..||
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು,
ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು,
ಎಲ್ಲ ಆ ದೇವನ ಕೊಡುಗೆ
|| ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ…||
ದೇಹವ ಸವೆಸುತ ಪರಿಮಳ ಕೊಡುವ,
ಗಂಧವು ನೋವಿಗೆ ನರಳುವುದೇ
ತನ್ನನೆ ದಹಿಸುತ ಬೆಳಕನು ತರುವ,
ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋಲಿಕೆ ಧರೆಯು
ಕರುಣೆಯು ನಿನ್ನಲಿ ಮೈದುಂಬಿರಲು
ಈ ಜನ್ಮ ಸಾರ್ಥಕವೂ….
|| ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ…||
ಗಾಳಿಯ ಭೀಕರ ಧಾಳಿಗೆ ಪರ್ವತ,
ಸ್ಥೈರ್ಯವನೆಂದಿಗು ಕಳೆಯುವುದೇ
ಸುಖ ಸಂಸಾರಕೆ ದುಡಿಯುವ ಹೆಣ್ಣು,
ಸ್ವಾರ್ಥಕೆ ಮನಸನು ನೀಡುವಳೇ
ನಿಂದನೆ ಮಾತಿಗೆ ಕುಂದದೆ ಇರುವ
ಮಮತೆಯ ಮೂರ್ತಿಯೆ ನೀನಾಗಿರಲು
ಜೀವನ ಪಾವನವೂ…
|| ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು,
ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ..||
Sole Geluvendu Baalali Arithaada Mele song lyrics from Kannada Movie Odahuttidavaru starring Dr Rajkumar, Ambarish, Madhavi, Lyrics penned by Geethapriya Sung by Dr Rajkumar, Music Composed by Upendra Kumar, film is Directed by Dorai-Bhagavan and film is released on 1994