Nee Baradiru Lyrics

in O Premave

LYRIC

ನೀ ಬರದಿರು ಕಂಬನಿಯೇ ಈ ಕಣ್ಣಲ್ಲಿ ಪದೆ ಪದೆ
ನೀ ಇರುವೆಯ ಓ ಮನವೆ ಅವಳ ತುಸು ನೆನೆಯದೆ
ಮನಮೋಹಕ ಕ್ಷಣಗಳು ಕೈ ಜಾರಿದ ಕನಸ್ಸಿನ ಭಾಗವಾದವೆ
ಸುಂದರ ದಿನಗಳು ಇನ್ನೆಂದಿಗು ಬದುಕಲಿ ಮರಳಿಬಾರದೆ
ನೀ ಬರದಿರು ಕಂಬನಿಯೇ ಈ ಕಣ್ಣಲ್ಲಿ ಪದೆ ಪದೆ
ನೀ ಇರುವೆಯ ಓ ಮನವೆ ಅವಳ ತುಸು ನೆನೆಯದೆ
 
ಕೈ ಮುಗಿವೆ ನಾ ನಿನಗೆ ಒಂಟಿಯಾಗಿ ಬದುಕಲು ತುಸು ಕಲಿಸು
ನೀನಿರದ ಬಾಲೀನ ಬದಲು ಆ ಮರಣವೆ ಲೇಸು
ಒಂದು ಸಲ ಬಂದುಬಿಡು ನನ್ನ ಕಣ್ಣ ಎದುರಿಗೆ ಅರೆಘಳಿಗೆ
ಇಲ್ಲದಿರೆ ಕೊಂದುಬಿಡು ತುಂಬ ಪುಣ್ಯ ಬರುವುದು ನಿನಗೆ
ಮನಮೋಹಕ ಕ್ಷಣಗಳು ಕೈ ಜಾರಿದ ಕನಸ್ಸಿನ ಭಾಗವಾದವೆ
ಸುಂದರ ದಿನಗಳು ಇನ್ನೆಂದಿಗು ಬದುಕಲಿ ಮರಳಿಬಾರದೆ
 
ಚಂದಿರನ ತಂಬೆಳಕು ಬೆಂಕಿಯಂತೆ ಸುಡುತ್ತಿದೆ ಹೃದಯವನು
ಈ ಬಗೆಯ ವೇದನೆ ಸಹಿಸಿ ನಾ ಉಳಿಯುವೇನೇನು
ಯಾವ ತರ ನಿಲ್ಲಿಸಲು ಸಾಲು ಸಾಲು ನೆನಪಿನ ಮೆರವಣಿಗೆ
ನೀಡುವೆಯ ನೀ ನನಗೆ  ಎಲ್ಲವನ್ನು ಮರೆಸುವ ಅರೆವಳಿಕೆ
ಮನಮೋಹಕ ಕ್ಷಣಗಳು ಕೈ ಜಾರಿದ ಕನಸ್ಸಿನ ಭಾಗವಾದವೆ
ಸುಂದರ ದಿನಗಳು ಇನ್ನೆಂದಿಗು ಬದುಕಲಿ ಮರಳಿಬಾರದೆ
 
||ನೀ ಬರದಿರು ಕಂಬನಿಯೇ ಈ ಕಣ್ಣಲ್ಲಿ ಪದೆ ಪದೆ
ನೀ ಇರುವೆಯ ಓ ಮನವೆ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ||