Yantha Mayavo Lyrics

in Nodu Baa Nammoora

Video:

LYRIC

-
ಏಏ ಹೊಡಿಬ್ಯಾಡಿರಯ್ಯೊ ಪ್ರೇಮದ ಗುಡಿಯ ಕಳಸವ
 
ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ
ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ
ನಾನೇನು ಕಾಣದ್ದು ಜಗವೇಕೆ ಕಾಣ್ಬೇಕು
ನಾನಿನ್ನು ಕೂಗೆನು ಸೂರ್ಯನೆ ನಿಲ್ಲಬೇಕು
ಹೇ ಬಾಯಿ ಮುಚ್ಚಿತು ಕುರುಡು ಕೋಳಿಯು ಲೋಕ ಕತ್ತಲೆಂತು
ಹೇ ಬಾಯಿ ಮುಚ್ಚಿತು ಕುರುಡು ಕೋಳಿಯು ಲೋಕ ಕತ್ತಲೆಂತು
ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ
 
ರಾಮನ ಕಾಲಕ್ಕೆ ರಾಮಾಯಣ ಆಯ್ತೊ ಲಂಕೆನ ಸುಟ್ಟಿತ್ತೊ
ಕೃಷ್ಣನ ಕಾಲಕ್ಕೆ ಮಹಾಭಾರತ ಆಯ್ತೊ ವಂಶನೆ ನುಂಗಿತ್ತೊ
ಬುದ್ಧನ ಕಾಲಕ್ಕೆ ಯುದ್ಧವು ಬೇಡೆಂಬ ಬುದ್ದಿಯು ಬಂದಿತ್ತೊ
ಗಾಂಧಿಯ ಕಾಲಕ್ಕೆ ಶಾಂತಿಯ ಬಾಳೆಂಬ ಮಂತ್ರವೆ ಹುಟ್ಟಿತ್ತೊ
ಸೂರ್ಯದ್ಯಾವ ಹರಸಿ ಕೊಟ್ಟ ಬೆಳಕುಳಿಸೊ ಅಣ್ಣ
ಮುಚ್ಚಬ್ಯಾಡ ಪ್ರೀತಿ ಕಣ್ಣ
ಭೂಮಿತಾಯಿ ಕೊಟ್ಟಾಳಲ್ಲ ಹಸಿವಿನಲ್ಲಿ ಹೊನ್ನ ದೋಚೋಕೆ ನೀನ್ಯಾರಣ್ಣ
 
||ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ||
 
ನೂರಾರು ಕಟ್ಟೆಯ ಕಟ್ಟಿದ್ರು ಉಕ್ಕೇರಿ ಓಡುವ ನದಿಯುಂಟು
ಜವರಾಯ ಬಂದಾರು ಕೊಡಲಿಯ ಬೀಸುದ್ರು ಮತ್‌ ಹುಟ್ಟೊ ಚಿಗುರುಂಟು
ಅಮವಾಸ್ಯೆ ಕಾಡಿದ್ರು  ಮತ್ತೊಮ್ಮೆ ಮೈತುಂಬ ಚಂದ್ರನ ಛಲವುಂಟೊ
ರೋಷದ ದ್ವೇಷದ ಮೋಡವು ತೊಲಗೋದ್ರೆ ಪ್ರೀತಿಯ ಬೆಳಕುಂಟೊ
ಪಾಠದ ಮನೆ ದ್ಯಾವ್ರ ಮೆನ ಉರಿಉರಿಯುತಲಿದೆ ಸೇರ್ಬೇಕಣ್ಣ ಪ್ರೀತಿ ಮನೆ
ಗಂಡಿನ ಕಡೆ ಹೆಣ್ಣಿನ ಕಡೆ ಸಿಡಿಸಿಡಿಯುವ ಕದನ
ಗಂಡು ಹೆಣ್ಣೆ ಶಾಂತಿ ಪಡೆ
 
||ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ
ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ
ನಾನೇನು ಕಾಣದ್ದು ಜಗವೇಕೆ ಕಾಣ್ಬೇಕು
ನಾನಿನ್ನು ಕೂಗೆನು ಸೂರ್ಯನೆ ನಿಲ್ಲಬೇಕು
ಹೇ ಬಾಯಿ ಮುಚ್ಚಿತು ಕುರುಡು ಕೋಳಿಯು ಲೋಕ ಕತ್ತಲೆಂತು
ಹೇ ಬಾಯಿ ಮುಚ್ಚಿತು ಕುರುಡು ಕೋಳಿಯು ಲೋಕ ಕತ್ತಲೆಂತು||
||ಎಂಥ ಮಾಯವೊ ಎಂಥ ಮಾಯವೊ ಮಾದೇಶ
ಕತ್ಲೆ ರಾತ್ರಿಲಿ ಕುರುಡು ಕೋಳಿಯ ಆವೇಶ||
 

Yantha Mayavo song lyrics from Kannada Movie Nodu Baa Nammoora starring Kumar Govind, Shwetha, Doddanna, Lyrics penned by J M Prahlad Sung by Janardhan, Music Composed by V Manohar, film is Directed by N R Nanjunde Gowda and film is released on 1997