Elu Eddelanna Lyrics

ಏಳು ಎದ್ದೇಳಣ್ಣ Lyrics

in Nodu Baa Nammoora

in ನೋಡು ಬಾ ನಮ್ಮೂರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ
 
ಅಣ್ಣ ಹಿಂದಕ್ಕೆ ನೋಡು ನೀವು ಪಟ್ಟಿದ್ದ ಪಾಡು
ತಿರುವಿದ ಪುಟಗಳ ತುಂಬ ನೋವೆ
ಮುಂದಿದೊ ಬದುಕಿನ ಹಾದಿ ಹೂವೆ
ಎತ್ತ ಸಾಗಿದರತ್ತ ಎಲ್ಲ ಕಷ್ಟದ ಹುತ್ತ
ಹುತ್ತವ ಬಡಿಯುತ ಸಾಗಲಿ ಚಿತ್ತ
ಗುರಿಯಿಡೊ ಮನುಜಗೆ ಆಸೆಯೆ ಬೆತ್ತ
ಎಚ್ಚರ ತಪ್ಪದಿರಿ ಸುಮ್ಮನೆ ಕೂಡದಿರಿ
ಸೋಲಿನ ಗುಂಗಿಗೆ ಸೊಪ್ಪನು ಹಾಕದಿರಿ
ಗೆಲ್ಲುವ ದೃಷ್ಟಿಯ ಎಂದಿಗು ಕೀಳದಿರಿ
 
||ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ||
 
ಒಂದು ಮುತ್ತಿನ ಚಿಪ್ಪು ಬಾಯ್ಬಿಟ್ಟರು ತಪ್ಪು
ಸ್ವಾತಿಯ ಮಳೆಹನಿ ಕಾಯುವವರೆಗೆ
ಮಳೆಹನಿ ಸಿಕ್ಕರೆ ಮುತ್ತಿನ ಮಳಿಗೆ
ಎಲ್ಲ ಗೆಲುವಿನ ಹಿಂದೆ ಉಂಟು ಸಾವಿರ ಕಥೆ
ಕಂಬನಿ ಕುಯ್ಲಿನ ಸಾಲು ಸಾಲು
ಆದರು ತಪ್ಪದು ಸುಖದ ಪಾಲು
ಎಂದಿಗು ಕುಗ್ಗದಿರಿ ಮುಂದಕೆ ನುಗ್ಗುತಿರಿ
ಮುಷ್ಠಿಯೊಳಗಿದೆ ಲೋಕಕ್ಕೆಲ್ಲ ಅಚ್ಚರಿ
ಮುಂಚೆ ತಿಳಿಯಿರಿ ಯಾವುದು ತಪ್ಪು ಸರಿ
 
||ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ||
 
ಒಂದು ಜೇನಿನಗೂಡು ಎಂತ ಸುಂದರ ನೋಡು
ಆದರು ಒಳಗಿದೆ ನೋವಿನ ಹಾಡು ಸಾವಿರ ಜೀವದ ಶ್ರಮಗಳ ಹಾಡು
ಹನಿ ಸೇರಿಸುತಲಿ ಜೇನು ತುಂಬಿದ ಮೇಲೆ
ದೋಚುವ ಕೈಗಳು ಸಾಲು ಸಾಲು
ಮನುಜನು ನುಂಗುವ ಅವುಗಳ ಪಾಲು
ಆದರು ಹೆದರದೆ ಮರಳಿ ಯತ್ನವ ಮಾಡುವ ಜೇನೆ ಮಾದರಿ ನೋಡಣ್ಣ
ಹೋರಾಟದಲ್ಲಿ ಕುಗ್ಗಲೆ ಬೇಡಣ್ಣ
 
||ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ||

-
ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ
 
ಅಣ್ಣ ಹಿಂದಕ್ಕೆ ನೋಡು ನೀವು ಪಟ್ಟಿದ್ದ ಪಾಡು
ತಿರುವಿದ ಪುಟಗಳ ತುಂಬ ನೋವೆ
ಮುಂದಿದೊ ಬದುಕಿನ ಹಾದಿ ಹೂವೆ
ಎತ್ತ ಸಾಗಿದರತ್ತ ಎಲ್ಲ ಕಷ್ಟದ ಹುತ್ತ
ಹುತ್ತವ ಬಡಿಯುತ ಸಾಗಲಿ ಚಿತ್ತ
ಗುರಿಯಿಡೊ ಮನುಜಗೆ ಆಸೆಯೆ ಬೆತ್ತ
ಎಚ್ಚರ ತಪ್ಪದಿರಿ ಸುಮ್ಮನೆ ಕೂಡದಿರಿ
ಸೋಲಿನ ಗುಂಗಿಗೆ ಸೊಪ್ಪನು ಹಾಕದಿರಿ
ಗೆಲ್ಲುವ ದೃಷ್ಟಿಯ ಎಂದಿಗು ಕೀಳದಿರಿ
 
||ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ||
 
ಒಂದು ಮುತ್ತಿನ ಚಿಪ್ಪು ಬಾಯ್ಬಿಟ್ಟರು ತಪ್ಪು
ಸ್ವಾತಿಯ ಮಳೆಹನಿ ಕಾಯುವವರೆಗೆ
ಮಳೆಹನಿ ಸಿಕ್ಕರೆ ಮುತ್ತಿನ ಮಳಿಗೆ
ಎಲ್ಲ ಗೆಲುವಿನ ಹಿಂದೆ ಉಂಟು ಸಾವಿರ ಕಥೆ
ಕಂಬನಿ ಕುಯ್ಲಿನ ಸಾಲು ಸಾಲು
ಆದರು ತಪ್ಪದು ಸುಖದ ಪಾಲು
ಎಂದಿಗು ಕುಗ್ಗದಿರಿ ಮುಂದಕೆ ನುಗ್ಗುತಿರಿ
ಮುಷ್ಠಿಯೊಳಗಿದೆ ಲೋಕಕ್ಕೆಲ್ಲ ಅಚ್ಚರಿ
ಮುಂಚೆ ತಿಳಿಯಿರಿ ಯಾವುದು ತಪ್ಪು ಸರಿ
 
||ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ||
 
ಒಂದು ಜೇನಿನಗೂಡು ಎಂತ ಸುಂದರ ನೋಡು
ಆದರು ಒಳಗಿದೆ ನೋವಿನ ಹಾಡು ಸಾವಿರ ಜೀವದ ಶ್ರಮಗಳ ಹಾಡು
ಹನಿ ಸೇರಿಸುತಲಿ ಜೇನು ತುಂಬಿದ ಮೇಲೆ
ದೋಚುವ ಕೈಗಳು ಸಾಲು ಸಾಲು
ಮನುಜನು ನುಂಗುವ ಅವುಗಳ ಪಾಲು
ಆದರು ಹೆದರದೆ ಮರಳಿ ಯತ್ನವ ಮಾಡುವ ಜೇನೆ ಮಾದರಿ ನೋಡಣ್ಣ
ಹೋರಾಟದಲ್ಲಿ ಕುಗ್ಗಲೆ ಬೇಡಣ್ಣ
 
||ಏಳು ಎದ್ದೇಳಣ್ಣ ಚಿಂತೆಯ ದೂರವಿಡು
ಕೇಳೊ ನನ್ನ ಮಾತು ದುಃಖದ ಸಂಗ ಬಿಡು
ದುಃಖಕ್ಕೆ ಬಗ್ಗಿದರೆ ಇನ್ನಷ್ಟು ಭಾರ ಹೊರೆ
ಛಲಹೊತ್ತು ಮುಚ್ಚಿರಿ ಉಕ್ಕೊ ಕಣ್ಣೀರ ಕೆರೆ
ಎದೆ ತುಂಬ ವಿಶ್ವಾಸ ತುಂಬಿರಿ ನನ್ನವರೆ||

Elu Eddelanna song lyrics from Kannada Movie Nodu Baa Nammoora starring Kumar Govind, Shwetha, Doddanna, Lyrics penned by Dr C K Ramachandre Gowda Sung by L N Shastry, Music Composed by V Manohar, film is Directed by N R Nanjunde Gowda and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ