Nanna Ninna Lyrics

in Nilukada Nakshathra

Video:

LYRIC

-
ನನ್ನ ನಿನ್ನ ಅನುರಾಗ ಮಿಂಚಲು
ಕಣ್ಣು ಕಣ್ಣು ಮಾತಾಡಿ ಕೂಡಲು
ಬದುಕೇ ಒಲುಮೆ ಹಾಡಾಗಿದೆಸಂತೋಷ ಮನೆ ಮಾಡಿದೆ
ನಮ್ಮ ಸಂಸಾರ ಸುಖವಾಗಿದೆ ಈ ಕಂದ ಮುದ್ದಾಗಿದೆ
ಪ್ರೀತಿ ಕಂಡು
 
||ನನ್ನ ನಿನ್ನ ಅನುರಾಗ ಮಿಂಚಲು
ಕಣ್ಣು ಕಣ್ಣು ಮಾತಾಡಿ ಕೂಡಲು
ಬದುಕೇ ಒಲುಮೆ ಹಾಡಾಗಿದೆ ಸಂತೋಷ ಮನೆ ಮಾಡಿದೆ
ನಮ್ಮ ಸಂಸಾರ ಸುಖವಾಗಿದೆ ಈ ಕಂದ ಮುದ್ದಾಗಿದೆ
ಪ್ರೀತಿ ಕಂಡು||
 
ಜನುಮ ಜನುಮ ಜೊತೆಯಲಿ ಸೇರಿ ಒಲವಿನ ನವಿರು ಹರಿವಾಗ
ಪ್ರೀತಿ ನೌಕೆ ನಲಿವಲಿ ತೇಲಿ ದಿನ ದಿನ ಮುಂದೆ ಹೋದಾಗ
ಭೂಮಿ ಬಾನು ಮೇರೆ ಮೀರಿ ಸ್ವಪ್ನ ತೀರ ಕಂಡಾಗ
ನೀನೆ ರವಿಯೊ ನಾನೆ ಶಶಿಯೊ
ಹೃದಯದ ಸಿರಿ ಪ್ರಣಯದ ಪರಿ ಒಂದಾಗಿ
 
ಮಮ್ಮಿ ಡ್ಯಾಡಿ ಮನಸ್ಸಾರೆ ಪ್ರೀತಿಸಿ
ಮುದ್ದು ಮಾಡಿ ನನ್ನ ಎತ್ತಿ ಆಡಿಸಿ
ನಗುವ ಹೂವು ನಾನಾದೆನು ಆನಂದ ನಾ ಕಂಡೆನು
ತಾಯಿ ಮಡಿಲಲ್ಲಿ ನಾ ಬೆಳೆದನು
ನಿಮ್ಮ ಕಂದಮ್ಮ ನಾ ಆದೆನು ನಕ್ಕು ನಲಿದು
 
||ನನ್ನ ನಿನ್ನ ಅನುರಾಗ ಮಿಂಚಲು
ಕಣ್ಣು ಕಣ್ಣು ಮಾತಾಡಿ ಕೂಡಲು||
 
ಎಂದು ನಾವು ಅಗಲದೆ ಹೀಗೆ ಪ್ರೇಮದ ಬಂಧ ಮಿಡಿವಾಗ
ಅಂಟು ನಂಟು ಉಸಿರಲಿ ಬೆರೆತು ಜೀವಕ್ಕೆ ಜೀವ ತುಡಿವಾಗ
ಕಾಮನ ಬಿಲ್ಲ ಏರಿ ನಾವು ನಲ್ಮೆ ಸ್ವರ್ಗ ಸವಿವಾಗ
ನಾನೆ ವೇಣು ನೀನೆ ದನಿಯು ಒಲವಿನ ಸ್ವರ ಮೊರೆಯುವ ಕರೆ ಇನಿದಾಗಿ
 
||ನನ್ನ ನಿನ್ನ ಅನುರಾಗ ಮಿಂಚಲು
ಕಣ್ಣು ಕಣ್ಣು ಮಾತಾಡಿ ಕೂಡಲು
ಬದುಕೇ ಒಲುಮೆ ಹಾಡಾಗಿದೆ ಸಂತೋಷ ಮನೆ ಮಾಡಿದೆ
ನಮ್ಮ ಸಂಸಾರ ಸುಖವಾಗಿದೆ ಈ ಕಂದ ಮುದ್ದಾಗಿದೆ
ಪ್ರೀತಿ ಕಂಡು||
 
||ನನ್ನ ನಿನ್ನ ಅನುರಾಗ ಮಿಂಚಲು
ಕಣ್ಣು ಕಣ್ಣು ಮಾತಾಡಿ ಕೂಡಲು||

Nanna Ninna song lyrics from Kannada Movie Nilukada Nakshathra starring Ananthnag, Bhavya, Thara, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by Kodlu Ramakrishna and film is released on 1995