-
ಸೂರ್ಯನು ಮಾಡಿದ ಕ್ಷುದ್ರರಾಗಿಯೆ ಹುಟ್ಟುತ್ತಿರೆ
ನ್ಯಾಯ ಧರ್ಮ ಕರ್ಮದ ಮಡಿಲಲಿ ಕರ್ಣನು ಕನಲಿ ಸಾಯುತಿರೆ
ಆ ಸೂರ್ಯನು ಪವಿತ್ರವೆನ್ನುವಿರ ಈ ಕರ್ಣನು ದರಿದ್ರ ಅನ್ನುವಿರ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಬಿರಿದು ಬಿರಿಯದ ಸಿರಿ ಮೊಗ್ಗುಗಳೆ ತಿಳಿದು ತಿಳಿಯದ ಹೂಮನಸ್ಸುಗಳೆ
ನೀತಿ ನ್ಯಾಯದ ಹೊಂಗಿರಣಗಳೆ ನಾಳಿನ ಜೀವನ ಜ್ಯೋತಿಗಳೆ

ಶ್ರೀರಾಮನು ತ್ಯಜಿಸಿದ ಸೀತೆಗೆ ಆಸರೆ ವಾಲ್ಮೀಕಿ ಇಲ್ಲದಿರೆ
ಲವಕುಶ ಯಾರಿಗೆ ಜನಿಸಿದರೆಂಬುದು ಪ್ರಶ್ನೆಯಾಗಿಯೆ ಎರಗಿದರೆ
ರಾಮಾಯಣಕ್ಕೆ ನೆಲೆ ಎಲ್ಲಿ ಪತಿವ್ರತೆ ಸೀತೆಗೆ ಬೆಲೆ ಎಲ್ಲಿ
ಆ ಶಕುಂತಲ ದುಷ್ಯಂತರ ಕತೆಗೆ ಸ್ಕಂದ ಮಹರ್ಷಿಯೆ ಇಲ್ಲದಿರೆ
ಭರತನು ಯಾರಿಗೆ ಹುಟ್ಟಿದನೆಂಬುದು ಸಮಸ್ಯೆಯಾಗೆ ಕಾಡಿದರೆ
ಭರತ ವಂಶದ ಹುಟ್ಟೆಲ್ಲಿ ಉಂಗುರ ಸಿಕ್ಕದೆ ಹೋದಲ್ಲಿ

ಆ ಪವಿತ್ರ ಗಂಗ ಸ್ಥಳದಲ್ಲು ಕೂಡ ಕೆಸರಿನ ಮಡುವೆ ತುಂಬಿಹುದೆ
ಮನುಜರು ಮಲಿನವ ಮಾಡಿದರು ಅದು ನಿರ್ಮಲವಾಗೆ ಹರಿಯುತ್ತಿದೆ
ಆ ಪವಿತ್ರ ಮನಗಳು ನೀವಾದಾಗ ಮತಚರಿತ್ರೆ ಪಾಪವ ತೊಳೆದಾಗ
ಈ ಎಳೆಹೃದಯದಲಿ ದ್ವೇಷವು ತೊಲಗಿ ಸತ್ಯಶಾಂತಿಯು ಮೂಡುವುದು
ಯಾರಿಂದೇನೊ ಹುಟ್ಟಿದ್ದೇನೊ ಈ ಸ್ನೇಹವ ಹಂಚುತಿರಿ
ಮನಸ್ಸನು ತೆರೆದು ಮಮತೆಯ ಬೆಳೆದು ಪ್ರೀತಿಯ ತೋರುತ್ತಿರಿ
ಮಾನವರಾಗಿ ವರ್ತಿಸಿರಿ

ಅರಿತು ಅರಿಯದೆ ತಪ್ಪನು ಮಾಡಿ ಮಾಡಿದ ತಪ್ಪನು ಒಪ್ಪಿಕೊಂಡು
ಒಂದಾಗೆಲ್ಲರು ಕಲಿಯುವೆವು ನವಭಾರತ ಜ್ಯೋತಿಯ ಬೆಳಗುವೆವು

Suryanu Maadida song lyrics from Kannada Movie Nava Bharatha starring Ambarish, Mahalakshmi, Balakrishna, Lyrics penned by Doddarange Gowda Sung by P Susheela, Chorus, Music Composed by Chakravarthy, film is Directed by K V Raju and film is released on 1988