-
ಅಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಪ್ಪಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಪುಸ್ತಕನೆಲ್ಲ ಓದಿಕೊಂಡು ಭತ್ತ ಬಂಗಾರ ಮಾಡ್ತೀನೊ
ಅಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಪ್ಪಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಮ್ಮಮ್ಮ ನಿಮ್ಮಮ್ಮ ಕೊಂಪೆ ಹಾಳು ಮಾಡ್ತೀಯ
ಓದಿನ ಭೂತ ನಿಂಗೆ ಹಿಡಿದ್ರೆ ಬೆರಳು ನೆಕ್ಕಿ ತಿನ್ನುತ್ತೀಯ
ಬಿ ಎ ಎಮ್ ಎ ಓದಿದೊರೆಲ್ಲ ಭಿಕಾರಿಯಾಗಿ ತಿರುಗುವಾಗ
ಓದೊ ಹುಚ್ಚು ನಿಂಗ್ಯಾತಕೊ ಮಗನೆ ಸಾಯೊ ಬದುಕು ನಮ್ಗ್ಯಾತಕೊ
ಅಯ್ಯೊ ಅಯ್ಯೊ
ಓದೊ ಹುಚ್ಚು ನಿಂಗ್ಯಾತಕೊ ಮಗನೆ ಸಾಯೊ ಬದುಕು ನಮ್ಗ್ಯಾತಕೊ
ಆ ಡಾಕ್ಟರನ ಮಗನ ಹಂಗೆ ಟಿಪ್ಪು ಟಾಪ್ ಆಗುತ್ತೀನಿ
ಲಾಯರಿನ ಮಗನ ಹಂಗೆ ನೆಕ್ ಟೈ ಕಟ್ತೀನಿ
ಎಸ್ ಐ ನೋರ ಮಗನ ಹಂಗೆ ಸೈಕಲ್ ಹತ್ತಿ ಹಾರ್ತೀನಿ
||ಅಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಪ್ಪಯ್ಯ ನಾನ್ ಓದಿ ದೊಡ್ಡೋನಾಗ್ತೀನೊ||
ಬುದ್ದಿ ಕೆಟ್ಟಯ್ತ ನಿಂಗೆ ಮಹಾರಾಜರ ಮಕ್ಕಳು ಅವ್ರು
ಅವ್ರ ಜೊತೆಗೆ ಹೋಲಿಕೆ ಯಾಕೊ ತಿರುಕ್ಕೊಂಡ್ ತಿನ್ನೊ ನನ್ ಮಗನೆ
ಕೆಲಸವೇನು ಇಲ್ದೋರಿಗೆ ಓದೆ ಒಂದು ದೊಡ್ಡ ಕೆಲಸ
ಓದುಗೀದು ಅಂತ ಅಂದ್ರೆ ಜಾಡಿಸಿ ಒದಿತ್ತೀನಿ
ಓದೊ ಹುಚ್ಚು ನಿಂಗ್ಯಾತಕೊ ಮಗನೆ ಸಾಯೊ ಬದುಕು ನಮ್ಗ್ಯಾತಕೊ
ಒದಿಬ್ಯಾಡೊ ಅಪ್ಪಯ್ಯ ನಮಸ್ಕಾರ ಮಾಡ್ತೀನಿ
ಬೀದಿಗಳಲು ಮಠಗಳುಂಟು ಈಸ್ಕೂಲು ಕೂಡ ಉಂಟು
ಮಾಸ್ಟರಿಗೆ ಕಾಲು ಮುಗಿದು ವಿದ್ಯೆ ಭಿಕ್ಷೆ ಕೇಳುತ್ತೀನಿ
||ಅಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಪ್ಪಯ್ಯ ನಾನ್ ಓದಿ ದೊಡ್ಡೋನಾಗ್ತೀನೊ||
ಬೀದಿ ಈಸ್ಕೂಲಿನಾಗೆ ಹಂದಿ ಹೆಗ್ಗಣ ಇರುತ್ತಾವೆ
ಅದರಲ್ಲಿರೊ ಮಾಸ್ಟರ್ಗಳು ಇಸ್ಪೀಟ್ರೀಸ್ ಆಡುತ್ತಾರೆ
ಟ್ಯೂಷನ್ನಿಗೆ ಬಂದರೆ ಪಾಸ್ ಮಾಡುತ್ತೀವಿ ಅಂತಾರೆ
ಓದಿಕೊಳ್ಳೊ ದಿನ ಹೋಗಿ ಓದು ಕೊಳ್ಳೊ ದಿನ ಬಂದು
ಓದೊ ಹುಚ್ಚು ನಿಂಗ್ಯಾತಕೊ ಮಗನೆ ಸಾಯೊ ಬದುಕು ನಮ್ಗ್ಯಾತಕೊ
ದುಡ್ಡಿನ ಕಷ್ಟ ನಿಂಗ್ಯಾಕೆ ನಾ ಬಾಧೆ ಏನು ಪಡ್ತೀನಿ
ಗವರ್ನಮೆಂಟ್ ಓದು ಬಡವರ ಓದು ಅಂತ್ಯೆ
ಅನಾಥ ಅಂತ ಹೇಳಿಕೊಂಡು ಹಾಸ್ಟೆಲನ್ನು ಸೇರ್ತೀನಿ
ಪುಸ್ತಕನ ಬಟ್ಟೆಯನ್ನ ಬಿಟ್ಟಿನೆ ಕೊಡ್ತಾರಂತೆ
||ಅಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಪ್ಪಯ್ಯ ನಾನ್ ಓದಿ ದೊಡ್ಡೋನಾಗ್ತೀನೊ||
ನಂಬಬ್ಯಾಡ ಆ ಮಾತ್ನ ಕೆಟ್ಟೋಗ್ತೀಯೊ ಬಡ್ಡಿಮಗನೆ
ಅನಾಥರ ಪುಸ್ತಕ ಯಾವ್ದು ಅಚ್ಚಾಗಿಲ್ಲ ಅನ್ನುತ್ತಾರೆ
ಅಂಗಡಿಲಿ ಅವುಗಳನ್ನೆ ಕದ್ದುಮುಚ್ಚಿ ಮಾರುತ್ತಾರೆ
ಮಕ್ಕಳಿಗು ಹಾಸ್ಟೆಲಲ್ಲಿ ಅರ್ಧ ಊಟ ಹಾಕುತ್ತಾರೆ
ಮಹಾ ಮಹಾನಾಯಕರು ಭಾಗ ಮಾಡಿ ಹಂಚಿಕೊಂಡು
ಹಾಸ್ಟೆಲ್ಲಿನ ಸಾಮಾನೆಲ್ಲ ಹೋಟೆಲ್ಲಿಗೆ ಕಳಿಸುತ್ತಾರೆ
ಓದೊ ಹುಚ್ಚು ನಿಂಗ್ಯಾತಕೊ ಮಗನೆ ಸಾಯೊ ಬದುಕು ನಮ್ಗೆ ಬ್ಯಾಡವೊ
ಕಷ್ಟವಾಗ್ಲಿ ನಷ್ಟವಾಗ್ಲಿ ಕಾನ್ವೆಂಟಿಗೆ ನನ್ನ ಕಳಿಸು
ಇಂಗ್ಲೀಷ್ ಓದಿ ನಾನು ಇಂಜಿನಿಯರ್ ಆಗುತ್ತೀನಿ
ಈ ರಿಕ್ಷ ಬದುಕು ನಿಂಗ್ಯಾತಕೊ ಕಾರು ಕೊಂಡು ಪಡಿತ್ತೀನಿ
||ಅಯ್ಯ ನಾನ್ ಓದಿ ದೊಡ್ಡೋನಾಗ್ತೀನೊ
ಅಪ್ಪಯ್ಯ ನಾನ್ ಓದಿ ದೊಡ್ಡೋನಾಗ್ತೀನೊ||
ನಿನ್ನ ಕಾನ್ವೆಂಟ್ ಓದಿಗೆ ಕರಗುತೈತೊ ಮಾಂಸಖಂಡ
ಇಂಜಿನಿಯರ್ ಓದಿಗೆ ಇಂಗುತೈತೊ ನನ್ನ ರಕ್ತ
ನೀನು ಕಾರು ಕೊಡಿಸೊ ಹೊತ್ತಿಗೆ ನಾನು ಕೈಲಾಸ ಸೇರಿರ್ತೀನೊ
ಓದೊ ಹುಚ್ಚು ನಿಂಗ್ಯಾತಕೊ ಮಗನೆ ಸಾಯೊ ಬದುಕು ನಮ್ಗ್ಯಾತಕೊ
ಭಾರಿ ಭಾರಿ ಓದನೋದಿ ಪದವಿ ಪತ್ರ ಹಿಡಿದುಕೊಂಡು
ದಂಡಪಿಂಡ ಮಂತ್ರಿಗಳಿಗೆ ಲಂಚನ ಕೊಟ್ಟು ಕೊಟ್ಟು
ಸಿಗದೆ ಇರೊ ಕೆಲಸಕ್ಕೆಲ್ಲ ಆಫೀಸನು ತಿರುಗಿ ತಿರುಗಿ
ಬೇಸತ್ತು ಕೊನೆಗೆ ನೀನು ಈ ಲೋಟ ತೊಳೆಯೊ ಬದಲು
ಇವಾಗ್ಲೆ ಈ ಕೆಲಸ ಬಾಯಿ ಮುಚ್ಚಿ ಕಲಿತಿಕೊ

Ayyaa Naanodi Doddonagtheeno song lyrics from Kannada Movie Nava Bharatha starring Ambarish, Mahalakshmi, Balakrishna, Lyrics penned by Doddarange Gowda Sung by S P Balasubrahmanyam, S P Shailaja, Music Composed by Chakravarthy, film is Directed by K V Raju and film is released on 1988