Hatamari Loka Lyrics

in Nanna Thangi

Video:

LYRIC

-
ಹಠಮಾರಿ ಲೋಕ ಒಲವನ್ನು ಒಲವಿಂದ ಸ್ವೀಕರಿಸದು
ಸರಿತಪ್ಪು ಏನೆಂದು ತಲೆ ಏರದು
 
ಕಣಿ ಹೇಳುತ್ತೀನಿ ಈಗ ಕಣಿ ಹೇಳುತ್ತೀನಿ
ಕಹಿಯಾದರು ನಿಮಗೆ ನಿಜ ಹೇಳುತ್ತೀನಿ
ನಿಜ ಹೇಳುತ್ತೀನಿ ಈಗ ನಿಜ ಹೇಳುತ್ತೀನಿ
ಒಗಟಾದರು ಸತ್ಯ ಒಡೆದೇಳುತ್ತೀನಿ
ನೀತಿ ಹೇಳೊನಿಗೆ ಊಟ ಸಿಗಲಾರದು
ಪ್ರೀತಿ ಮಾಡೋನಿಗೆ ಕಾಟ ಬಿಡಲಾರದು
ಎದುರು ಈಜೋದು ಕಲಿಬೇಕು ತಮ್ಮ
ಅದಕ್ಕೆ ತೋಳಲ್ಲಿ ಬಲ ಬೇಕು ತಮ್ಮ
ಕಣಿ ಹೇಳುತ್ತೀನಿ ಈಗ ಕಣಿ ಹೇಳುತ್ತೀನಿ
ಕಹಿಯಾದರು ನಿಮಗೆ ನಿಜ ಹೇಳುತ್ತೀನಿ
 
ಮುಂಗೋಪಿ ಮನಸ್ಸು ಮುಂದೇನು ಹಿಂದೇನು ಯೋಚಿಸುವುದೇ
ಸರಿಯಾದ ಗುರಿಯನ್ನು ಸೂಚಿಸುವುದೇ
ಸಿಡಿದೇಳುತಾರಮ್ಮ ಸಿಡಿದೇಳುತ್ತಾರೆ
ಒಲವೆಂದರೆ ಜನರು ಕಿಡಿಕಾರುತ್ತಾರೆ
ಒಲವೆಂದು ಬದುಕೋರ ಬಲಿ ನೀಡುತ್ತಾರೆ
ಛಲದಲ್ಲಿ ಬಲದಲ್ಲಿ ಸುಖ ಕಾಣುತ್ತಾರೆ
ಇಲ್ಲಿ ಬೇರಾದರೆ ಅಲ್ಲಿ ಒಂದಾಗುವೆ
ಇಲ್ಲಿ ಸಾವಾದರೆ ಅಲ್ಲಿ ಸುಖ ಕಾಣುವೆ
ಪ್ರೀತಿ ಅನ್ನೋದು ಆನಂದ ತಂಗಿ
ಅದರ ಫಲ ನಿಮಗಿದೆ ನನ್ನ ತಂಗಿ
 
||ಕಣಿ ಹೇಳುತ್ತೀನಿ ಈಗ ಕಣಿ ಹೇಳುತ್ತೀನಿ
ಕಹಿಯಾದರು ನಿಮಗೆ ನಿಜ ಹೇಳುತ್ತೀನಿ||
 
ಸಾಯೋದು ದೇಹ ಕೊನೆಗೆಂದು ಉಳಿಯೋದು ಪ್ರೇಮ ಅಮರ
ಅದಕ್ಕೆಂದು ಸಾವಿಲ್ಲ ತಿಳಿಯೊ ಮಗಾ
ಅವಸಾನವಿಲ್ಲಯ್ಯ ಅವಸಾನವಿಲ್ಲ
ಪ್ರೀತಿನೆ ಜಗತಾದಿ ಅನುಮಾನವಿಲ್ಲ
ಒಲವಿಲ್ಲದೆ ಜೀವ ಸೃಷ್ಟಿನೆ ಇಲ್ಲ
ಬೇಡೆಂದರೆ ನಮಗೆ ಉಳಿಗಾಲವಿಲ್ಲ
ನೀನು ಭಯಪಟ್ಟರೆ ನೂರರಲ್ಲೊಬ್ಬನು
ನುಗ್ಗಿ ಎದೆ ಕೊಟ್ಟರೆ ಧೀರರಲ್ಲೊಬ್ಬನು
ಬೇಡ ಬೇಡೆಂಬುದೆ ಜಗದ ನೀತಿ
ಬೇಕು ಬೇಕೆಂಬುದೆ ನಿಜದ ಪ್ರೀತಿ
 
||ಕಣಿ ಹೇಳುತ್ತೀನಿ ಈಗ ಕಣಿ ಹೇಳುತ್ತೀನಿ
ಕಹಿಯಾದರು ನಿಮಗೆ ನಿಜ ಹೇಳುತ್ತೀನಿ||

Hatamari Loka song lyrics from Kannada Movie Nanna Thangi starring Devaraj, Anjana, Sanjay Shantharam, Lyrics penned by Hamsalekha Sung by Hamsalekha, Music Composed by Hamsalekha, film is Directed by Perala and film is released on 1992