-
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ
ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು
ಬೇಟೆಗಾರನ ಬಿಲ್ಲಿನಂತಿರುವೆ ನೀನು
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳನಿತ್ತಿಹುದು
||ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ ||
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು
ತುಂಬು ಹರೆಯದ ಹೆಣ್ಣೆನೀನೊಲುಮೆಗೀಡು
ತುಂಬು ಹರೆಯದ ಹೆಣ್ಣೆನೀನೊಲುಮೆಗೀಡು
ನಂಬಿ ನನ್ನನು ವರಿಸಿ ಸಂತಸದಿ ಬಾಳು
||ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ ||
ನಿನ್ನೊಲುಮೆ ತಾರೆಗಳ ಹರಡಿರುವ ಬಾನು
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು
ನಿನ್ನೊಲುಮೆ ತಾರೆಗಳ ಹರಡಿರುವ ಬಾನು
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ
ಮುಂದೆ ಹೋಗೆನ್ನದಿರು ನನ್ನ ಮನದರಸಿ
||ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ ||
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ
ನಾಳೆಯೆ ಮದುವೆ
ನಾಳೆಯೆ ಮದುವೆ
ನಾಳೆಯೆ ಮದುವೆ ಮದುವೆ
-
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ
ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು
ಬೇಟೆಗಾರನ ಬಿಲ್ಲಿನಂತಿರುವೆ ನೀನು
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳನಿತ್ತಿಹುದು
||ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ ||
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು
ತುಂಬು ಹರೆಯದ ಹೆಣ್ಣೆನೀನೊಲುಮೆಗೀಡು
ತುಂಬು ಹರೆಯದ ಹೆಣ್ಣೆನೀನೊಲುಮೆಗೀಡು
ನಂಬಿ ನನ್ನನು ವರಿಸಿ ಸಂತಸದಿ ಬಾಳು
||ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ ||
ನಿನ್ನೊಲುಮೆ ತಾರೆಗಳ ಹರಡಿರುವ ಬಾನು
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು
ನಿನ್ನೊಲುಮೆ ತಾರೆಗಳ ಹರಡಿರುವ ಬಾನು
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ
ಮುಂದೆ ಹೋಗೆನ್ನದಿರು ನನ್ನ ಮನದರಸಿ
||ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ ||
ಅದಕ್ಕೆ ನಮ್ಮಿಬ್ಬರಿಗೆ ನಾಳೆಯೆ ಮದುವೆ
ನಾಳೆಯೆ ಮದುವೆ
ನಾಳೆಯೆ ಮದುವೆ
ನಾಳೆಯೆ ಮದುವೆ ಮದುವೆ