ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಮೂಗಿನ ತುದಿಯ ಕೋಪದಲಿ
ಮೂಗೇ ಬಲಿಯಾಯಿತು
ಕೋಣೆಯ ನಡುವೇ ಬಂದಿಹ ಗೋಡೆ
ಅಣುಕಿಸಿ ನಗುತಿಹುದು
ಮನಗಳ ನಡುವೇ ನಿಂತಿಹ ಗೋಡೆ
ಮೌನದಿ ಅಳುತಿಹುದು
ಲೇಖನಿ ಹಿಡಿವ ಕೈಗಳು ಇಂದು
ಸೌಟನು ಹಿಡಿದಿಹುದು
ಹೊಟ್ಟೆಯು ತಾಳ ಹಾಕುತ
ಭರತನಾಟ್ಯವ ಮಾಡಿಹುದು
ಪ್ರೊಗ್ರಾಸ್ ಕಾರ್ಡಿಗೇ ಅಪ್ಪನೇ ಬೇಕು
ಜಡೆಯನು ಹೆಣೆಯಲು ಅಮ್ಮನೇ ಬೇಕು
ಪಾಕೆಟ್ ಮನೀಗೆ ಅಪ್ಪನೇ ಬೇಕು
ನಮಗೇ ಎಂದೂ ಇಬ್ಬರೂ ಬೇಕು
ಹಸಿವೂ ಹಸಿವೂ ಹಸಿವೂ
ಹಸಿವೂ...ಹಸಿವೂ…..
|| ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಮೂಗಿನ ತುದಿಯ ಕೋಪದಲಿ
ಮೂಗೇ ಬಲಿಯಾಯಿತು…||
ಗಂಡ ಹೆಂಡಿರ ಮುನಿಸು
ಉಂಡು ಮಲಗುವವರೆಗೆಯಂತೆ
ಚಂಡಿಯ ಹಿಡಿದು ಕಾಡುವದೆಂದೂ
ಮೂರ್ಖರ ತರವಂತೇ
ಎತ್ತು ಏರಿಗೆ ಕೋಣ ನೀರಿಗೆ
ಎಳೆಯಲು ಗತಿಯೇನು
ಗಾಡಿಯ ಗತಿಯೇನು
ಬೇಲಿಯೇ ಹೊಲವ ಮೇಯ್ದರೇ
ಬೆಳೆಯುವ ಪೈರಿನ ಪಾಡೇನು
ಪಾಠವ ಕಲಿಸೆ ಅಪ್ಪನೇ ಬೇಕು
ಊಟವ ಮಾಡಿಸೆ ಅಮ್ಮನೇ ಬೇಕು
ಎಲ್ಲರ ಮನದೇ ನೆಮ್ಮದಿ ಬೇಕು
ಮನೆಯು ಎಂದೂ ನಗುತಿರಬೇಕು
ಶಾಂತಿ ಶಾಂತಿ ಶಾಂತಿ ಶಾಂತಿ ಶಾಂತಿ
|| ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಮೂಗಿನ ತುದಿಯ ಕೋಪದಲಿ
ಮೂಗೇ ಬಲಿಯಾಯಿತು..||
ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಮೂಗಿನ ತುದಿಯ ಕೋಪದಲಿ
ಮೂಗೇ ಬಲಿಯಾಯಿತು
ಕೋಣೆಯ ನಡುವೇ ಬಂದಿಹ ಗೋಡೆ
ಅಣುಕಿಸಿ ನಗುತಿಹುದು
ಮನಗಳ ನಡುವೇ ನಿಂತಿಹ ಗೋಡೆ
ಮೌನದಿ ಅಳುತಿಹುದು
ಲೇಖನಿ ಹಿಡಿವ ಕೈಗಳು ಇಂದು
ಸೌಟನು ಹಿಡಿದಿಹುದು
ಹೊಟ್ಟೆಯು ತಾಳ ಹಾಕುತ
ಭರತನಾಟ್ಯವ ಮಾಡಿಹುದು
ಪ್ರೊಗ್ರಾಸ್ ಕಾರ್ಡಿಗೇ ಅಪ್ಪನೇ ಬೇಕು
ಜಡೆಯನು ಹೆಣೆಯಲು ಅಮ್ಮನೇ ಬೇಕು
ಪಾಕೆಟ್ ಮನೀಗೆ ಅಪ್ಪನೇ ಬೇಕು
ನಮಗೇ ಎಂದೂ ಇಬ್ಬರೂ ಬೇಕು
ಹಸಿವೂ ಹಸಿವೂ ಹಸಿವೂ
ಹಸಿವೂ...ಹಸಿವೂ…..
|| ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಮೂಗಿನ ತುದಿಯ ಕೋಪದಲಿ
ಮೂಗೇ ಬಲಿಯಾಯಿತು…||
ಗಂಡ ಹೆಂಡಿರ ಮುನಿಸು
ಉಂಡು ಮಲಗುವವರೆಗೆಯಂತೆ
ಚಂಡಿಯ ಹಿಡಿದು ಕಾಡುವದೆಂದೂ
ಮೂರ್ಖರ ತರವಂತೇ
ಎತ್ತು ಏರಿಗೆ ಕೋಣ ನೀರಿಗೆ
ಎಳೆಯಲು ಗತಿಯೇನು
ಗಾಡಿಯ ಗತಿಯೇನು
ಬೇಲಿಯೇ ಹೊಲವ ಮೇಯ್ದರೇ
ಬೆಳೆಯುವ ಪೈರಿನ ಪಾಡೇನು
ಪಾಠವ ಕಲಿಸೆ ಅಪ್ಪನೇ ಬೇಕು
ಊಟವ ಮಾಡಿಸೆ ಅಮ್ಮನೇ ಬೇಕು
ಎಲ್ಲರ ಮನದೇ ನೆಮ್ಮದಿ ಬೇಕು
ಮನೆಯು ಎಂದೂ ನಗುತಿರಬೇಕು
ಶಾಂತಿ ಶಾಂತಿ ಶಾಂತಿ ಶಾಂತಿ ಶಾಂತಿ
|| ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
ಮೂಗಿನ ತುದಿಯ ಕೋಪದಲಿ
ಮೂಗೇ ಬಲಿಯಾಯಿತು..||
Appa Amma Jagaladali song lyrics from Kannada Movie Naa Mecchida Huduga starring Kalpana, K S Ashwath, Leelavathi, Lyrics penned by R N Jayagopal Sung by Vadiraj, B K sumithra, L R Anjali, Music Composed by Vijaya Bhaskar, film is Directed by R N Jayagopal and film is released on 1972